ಸಿದ್ದರಾಮಯ್ಯನವರ 80% ಸರ್ಕಾರದಲ್ಲಿ ಎಲ್ಲಾ ಕ್ಯಾಶ್​ ಆ್ಯಂಡ್​ ಕ್ಯಾರಿ! –  ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಸಿದ್ದರಾಮಯ್ಯನವರ 80% ಸರ್ಕಾರದಲ್ಲಿ ಎಲ್ಲಾ ಕ್ಯಾಶ್​ ಆ್ಯಂಡ್​ ಕ್ಯಾರಿ! –  ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಂಗಳೂರು: ಸಿದ್ದರಾಮಯ್ಯನವರ 80% ಸರ್ಕಾರದಲ್ಲಿ ಎಲ್ಲಾ ‘ಕ್ಯಾಶ್​ ಆ್ಯಂಡ್​ ಕ್ಯಾರಿ’ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಆರೋಪವೊಂದನ್ನು ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌,  “ಸಿದ್ದರಾಮಯ್ಯನವರ 80% ಸರ್ಕಾರದಲ್ಲಿ ಎಲ್ಲಾ ಕ್ಯಾಶ್​ ಆ್ಯಂಡ್​ ಕ್ಯಾರಿ. ಅಧಿಕಾರಿಗಳಿಗೆ ಹಣಕ್ಕಾಗಿ ಎಷ್ಟು ಕಾಡಿರಬೇಕು ಇವರು? ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ದ ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಸಹಾಯಕ ಕೃಷಿ ನಿರ್ದೇಶಕರು. ಒಬ್ಬಬ್ಬರಿಗೂ 6-8 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ, ನಾವು ಆತ್ಮಹತ್ಯೆ ಮಾಡಿಕೊಳ್ಳದೆ ದಾರಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹೊರತುಪಡಿಸಿ ಇನೇನು ನಡೆಯುತ್ತಿಲ್ಲ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅನರ್ಹತೆ ವಾಪಸ್‌ ಪಡೆದ ಲೋಕಸಭೆ ಸ್ಪೀಕರ್‌ – ಕಲಾಪದಲ್ಲಿ ಭಾಗಿಯಾಗಲಿದ್ದಾರೆ ರಾಹುಲ್‌ ಗಾಂಧಿ

“ಸಿದ್ದರಾಮಯ್ಯನವರ ಸರ್ಕಾರದಲ್ಲಿ ವರ್ಗಾವಣೆಗಳು ಬಹಳ ಸುಲಭವಾಗಿದೆ. ಕ್ಯಾಶ್​ ಆ್ಯಂಡ್ ಕ್ಯಾರಿ, ಈಗ ಪೊಲೀಸ್ ಇಲಾಖೆಯಲ್ಲಂತೂ ವರ್ಗಾವಣೆಯ ಸುಗ್ಗಿ ನಡೆಯುತ್ತಿದೆ. ಸರ್ವರಿಗೂ ಸಮಪಾಲು ಪಾಲಿಸಿರುವ ಮಾನ್ಯ ಮುಖ್ಯಮಂತ್ರಿಗಳು.

ಪೊಲೀಸ್ ಇನ್ಸ್ಪೆಕ್ಟರ್​ವರೆಗೂ ಶಾಸಕರ ಶಿಫಾರಸ್ಸುಗಳು ಮಾತ್ರ ಪರಿಗಣಿಸುವುದು!

ಡಿವೈಎಸ್ಪಿ ವರ್ಗಾವಣೆಗಳು ಮಾನ್ಯ ಗೃಹ ಮಂತ್ರಿಗಳು ಹಾಗು ಮುಖ್ಯಮಂತ್ರಿಗಳದ್ದೇ ಮೇಲುಗೈ! ಕೆಎಸ್ಆರ್ಪಿ ಗೆಸ್ಟ್ ಹೌಸ್​ನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯಷ್ಟೇ ಪವರ್ ಫುಲ್ ವ್ಯಕ್ತಿಯೊಬ್ಬರಿದ್ದರಂತೆ. ಬೆಂಗಳೂರಿನ ಕೆಲವು ಎಸಿಪಿ ವರ್ಗಾವಣೆಯಲ್ಲಿ ಅವರದ್ದೇ ಮೇಲುಗೈ! ಪೊಲೀಸ್ ಎಸ್ಟಾಬ್ಲಿಶ್​​ಮೆಂಟ್ ​ಬೋರ್ಡ್​​ ಈಗ ಪಿಎಸ್​ವೈ ಬೋರ್ಡ್ ಆಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

“ವರ್ಗಾವಣೆಗಳಲ್ಲಿ 2 ವಿಧ, ಮಾನ್ಯ ಮುಖ್ಯಮಂತ್ರಿಗಳ ಕಚೇರಿಯಿಂದ ಬರುವ ಟಿಪ್ಪಣಿಯಲ್ಲಿ ವರ್ಗಾಯಿಸಲು ಕೋರಿದೆ ಎಂದು ಬರೆದಿದ್ದರೆ ಅದು ಬೋರ್ಡ್ನಲ್ಲಿ ಪಾಸ್ ಆಗುವುದಿಲ್ಲ, ವರ್ಗಾಯಿಸಲು ಸೂಚಿಸಲಾಗಿದೆ ಎಂದು ಬರೆದಿದ್ದರೆ ಅದು ಮಾಜಿ ಶಾಸಕರೊಬ್ಬರು ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಅನುಮೋದನೆ ನೀಡಿದ್ದಾರೆ ಎಂದು ಅರ್ಥ” ಎಂದು ಆರೋಪಿಸಿದ್ದಾರೆ.

v

suddiyaana