ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆ ಕಚ್ಚಿದ – ರೋಷಾವೇಶದಲ್ಲಿ ಬಂದವನು ತಾನೇ ಹೆಣವಾದ

ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿಚಿತ್ರ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಎಣ್ಣೆ ಪಾರ್ಟಿ ಮಾಡಿದ್ರಂತೂ ಮುಗಿದೇ ಹೋಯ್ತು. ಚಡ್ಡಿ ದೋಸ್ತಿ, ಕುಚಿಕು ಗೆಳೆಯರು, ಪ್ರಾಣ ಸ್ನೇಹಿತರು ಅಂತಾ ಜೊತೆಗಿದ್ದವರೇ ಮುಹೂರ್ತ ಇಟ್ಟು ಬಿಡ್ತಾರೆ. ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡ್ತಿದ್ದವರು ಕೂಡ ಒಂದೇ ಏಟಲ್ಲಿ ಕಥೆ ಮುಗಿಸಿ ಬಿಡುತ್ತಾರೆ. ಆದ್ರೀಗ ಮಹಾರಾಷ್ಟ್ರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಇದನ್ನೂ ಓದಿ : ದೇಶ ತೊರೆಯುತ್ತಿದ್ದಾರೆ ಪಾಕಿಸ್ತಾನಿ ಪ್ರಜೆಗಳು – 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ಪಲಾಯನ!
ಯುವಕನೊಬ್ಬ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ಗೆಳೆಯನ ಕುತ್ತಿಗೆಗೆ ಕಚ್ಚಿದ್ದು, ಬಳಿಕ ಆತನೇ ಹೆಣವಾಗಿ ಹೋಗಿದ್ದಾನೆ. ಮುಹಾರಾಷ್ಟ್ರದಲ್ಲಿ ಇಂಥಾದ್ದೊಂದು ಘಟನೆ ನಡೆದಿದ್ದು, ಮೃತನನ್ನು ಇಶ್ತಿಯಾಕ್ ಖಾನ್ ಎಂದು ಗುರುತಿಸಲಾಗಿದೆ. ಈತನ ತಲೆಗೆ ಕಲ್ಲಿನಿಂದ ಜಜ್ಜಿ ರಾಹುಲ್ ಲೋಹರ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ರಾಹುಲ್ ತನ್ನ ಗೆಳೆಯರ ಜೊತೆ ಮದ್ಯಪಾನ (Alcohol) ಮಾಡಲು ತೆರಳಿದ್ದಾನೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಶ್ತಿಯಾಕ್, ನನಗೆ ನಿನ್ನ ರಕ್ತ ಕುಡಿಯಬೇಕು (Blood) ಎಂದು ಹೇಳಿದ್ದಾನೆ. ಅಲ್ಲದೇ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ರಾಹುಲ್ ಕುತ್ತಿಗೆಗೆ ಕಚ್ಚಿದ್ದಾನೆ. ಈ ಸಂಬಂಧ ಅಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ರಾಹುಲ್ ಅಲ್ಲಿಂದ ತೆರಳಿದ್ದಾನೆ. ಕೆಲ ಗಂಟೆಗಳ ಬಳಿಕ ರಾಹುಲ್ ಮತ್ತೆ ಗೆಳೆಯ ಇಶ್ತಿಯಾಕ್ ಭೇಟಿಯಾಗಲು ಬಂದಿದ್ದಾನೆ. ಈ ವೇಳೆ ನಿನಗೆ ನನ್ನ ರಕ್ತ ಬೇಕಾ..? ನಿನ್ನ ಜೀವಂತವಾಗಿರಲು ನಾನು ಬಿಡಲ್ಲ ಎಂದು ಹೇಳಿ ಇಶ್ತಿಯಾಕ್ ತಲೆಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿ ರಾಹುಲ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಂದ್ರ ನಿಕಲ್ಜೆ ತಿಳಿಸಿದ್ದಾರೆ.