ಈ ಸಮುದ್ರಕ್ಕೆ ಇಳಿದರೆ ಮುಳುಗುವುದೇ ಇಲ್ಲ – ಸಾಗರದ ಮೇಲೆ ಮಲಗಿದರೂ ಯಾವ ಜಲಚರವೂ ಬರುವುದೂ ಇಲ್ಲ..!

ಈ ಸಮುದ್ರಕ್ಕೆ ಇಳಿದರೆ ಮುಳುಗುವುದೇ ಇಲ್ಲ – ಸಾಗರದ ಮೇಲೆ ಮಲಗಿದರೂ ಯಾವ ಜಲಚರವೂ ಬರುವುದೂ ಇಲ್ಲ..!

ಸಮುದ್ರ. ಕಡಲ ತೀರ. ಮನಸಿಗೆ ಅದೇನೋ ಮುದ ನೀಡುವ ತಾಣ. ಬೀಚ್ ಹತ್ತಿರ ಹೋದವರಿಗೆ ರಿಲ್ಯಾಕ್ಸ್ ಆಗಿರುವ ಅನುಭವ. ಆದರೆ, ಸಮುದ್ರಕ್ಕೆ ಇಳಿಯುವ ಆಸೆ ಇರುವವರು ತೀರದ ಬಳಿ ಹೋಗಿ ಇಳಿಯುತ್ತಾರೆ. ಅಲೆಗಳ ಅಬ್ಬರದ ನಡುವೆ ಸಮುದ್ರಕ್ಕೆ ಇಳಿಯಲು ಭಯವೂ ಕಾಡುತ್ತದೆ. ಆದರೆ, ಇಲ್ಲೊಂದು ಸಮುದ್ರ ಇದೆ. ಈ ಸಮುದ್ರಕ್ಕಿಳಿದರೆ ಯಾರೂ ಕೂಡಾ ಮುಳುಗುವುದೇ ಇಲ್ಲ.

ಇದನ್ನೂ ಓದಿ : ಚಂದ್ರನಿಗೆ ಇನ್ನಷ್ಟು ಹತ್ತಿರ ಸಮೀಪಿಸಿದ ಚಂದ್ರಯಾನ – 3 ಗಗನನೌಕೆ – 2.6 ಲಕ್ಷ ಕಿ.ಮೀ. ಕ್ರಮಿಸಿದ ಲ್ಯಾಂಡರ್​

ಈ ಸಮುದ್ರದಲ್ಲಿ ಇಳಿದರೆ ಯಾವ ಭಯವೂ ಇಲ್ಲ. ಈಜಬೇಕು ಅಂತಾ ಆಸೆಪಟ್ಟರೆ ಆರಾಮಾಗಿಯೇ ಈಜಬಹುದು. ಈ ಸಮುದ್ರದ ಹೆಸರು Dead Sea. ಜೋರ್ಡನ್ ಮತ್ತು ಇಸ್ರೇಲ್ ನಡುವೆ ಇದೆ. ಈ ಸಮುದ್ರವು ವಿಶ್ವದ ಅತ್ಯಂತ ಆಳವಾದ ಉಪ್ಪುನೀರಿನ ಸರೋವರ ಎಂದು ಪ್ರಸಿದ್ಧವಾಗಿದೆ. ಈ ಸಮುದ್ರದ ನೀರಿನ ಒತ್ತಡ ಮೇಲ್ಮುಖವಾಗಿರುವುದರಿಂದ ಯಾರೂ ಇಲ್ಲಿ ಮುಳುಗೋದಿಲ್ಲ.  ಹಾಗಾಗಿ ನೀವು ಈ ಸಮುದ್ರದಲ್ಲಿ ಹೇಗೆ ಬೇಕಾದರೂ ಈಜಬಹುದು, ಮಲಗಬಹುದು ಅಥವಾ ಆರಾಮಾಗಿ ಪುಸ್ತಕಗಳನ್ನು ಕೂಡ ಓದಬಹುದು. ಈ ಸಮುದ್ರವನ್ನು ನೋಡಲು ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮಗೆ ಹೇಗೆ ಬೇಕೋ ಹಾಗೆ ಸ್ವಲ್ಪವೂ ಭಯವಿಲ್ಲದೇ ನೀರಿನ ಜೊತೆ ಆಟವಾಡುತ್ತಾರೆ. ಡೆಡ್ ಸೀ ಸಮುದ್ರ ಮಟ್ಟಕ್ಕಿಂತ ಸುಮಾರು 1388 ಅಡಿ ಕೆಳಗಿದೆ. ಇದು ಸುಮಾರು ಮೂರು ಲಕ್ಷ ವರ್ಷಗಳಷ್ಟು ಹಳೆಯ ಸಮುದ್ರ ಎಂದು ಹೇಳಲಾಗುತ್ತೆ. ಈ ಸಮುದ್ರದಲ್ಲಿ ನೀರಿನ ಸಾಂದ್ರತೆ ತುಂಬಾ ಹೆಚ್ಚಿಗೆ ಇದ್ದು ಇದರಲ್ಲಿ ನೀರಿನ ಹರಿವು ಕೆಳಗಿನಿಂದ ಮೇಲ್ಮುಖವಾಗಿದೆ. ಹಾಗಾಗಿ ನೀವು ನೀರಿನ ಮೇಲೆ ಮಲಗಿದರೂ ಮುಳುಗೋದಿಲ್ಲ. ಈ ಸಮುದ್ರದ ನೀರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲವಣಾಂಶವನ್ನು ಹೊಂದಿದೆ. ಹೆಚ್ಚು ಉಪ್ಪಿನಾಂಶ ಹೊಂದಿರುವುದರಿಂದ ಈ ಸಮುದ್ರದಲ್ಲಿ ಯಾವ ಜೀವಿಯೂ ಬದುಕೋದಿಲ್ಲ. ಸಮುದ್ರ ಜೀವಿಗಳು ಮಾತ್ರವಲ್ಲ ಹುಲ್ಲು, ಗಿಡ ಗಂಟಿಗಳು ಕೂಡ ಇಲ್ಲಿ ಬೆಳೆಯೋದಿಲ್ಲ. ಡೆಡ್ ಸೀ ನೀರಿನಲ್ಲಿ ಪೊಟ್ಯಾಶ್, ಬ್ರೊಮೈಡ್, ಜಿಂಕ್, ಸಲ್ಫರ್, ಮೆಗ್ನೀಶಿಯಮ್ ಮತ್ತು ಕ್ಯಾಲ್ಸಿಯಮ್ ನಂತಹ ಖನಿಜಾಂಶಗಳು ಹೇರಳವಾಗಿವೆ. ಆದ್ದರಿಂದಲೇ ಇದರಿಂದ ಉಂಟಾಗುವ ಉಪ್ಪನ್ನು ಕೂಡ ಬಳಕೆ ಮಾಡಲು ಸಾಧ್ಯವಿಲ್ಲ. ಈ ಸಮುದ್ರದಲ್ಲಿ ಯಾವುದೇ ಜೀವಿಗಳು ಬದುಕಲು ಸಾಧ್ಯವಿಲ್ಲವಾದ್ದರಿಂದ ಸಮುದ್ರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನೀರಿನಲ್ಲಿರುವ ವಿಷಕಾರಿ ಪ್ರಾಣಿಗಳು ಹಾಗೂ ವಿಷಜಂತುಗಳು ಕಚ್ಚುತ್ತವೆ ಎಂಬ ಭಯವೂ ಇಲ್ಲ. ಈ ಕಾರಣದಿಂದಲೂ ಪ್ರವಾಸಿಗರು ಇಲ್ಲಿ ಡೆಡ್ ಸೀ ನೀರು ಹೆಚ್ಚಿನ ಲವಣಾಂಶ ಹೊಂದಿರುವುದರಿಂದಲೇ ಹೆಚ್ಚು ಪ್ರಖ್ಯಾತಿ ಪಡೆದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ನೀರಿನ ಸ್ನಾನ ಮಾಡುವುದರಿಂದಲೇ ಅನೇಕ ರೋಗಗಳು ದೂರವಾಗುತ್ತವೆ. ಇದರ ನೀರನ್ನು ಕೂಡ ಅನೇಕ ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಸಮುದ್ರದ ಮಣ್ಣನ್ನು ಅನೇಕ ಬ್ಯೂಟಿ ಪ್ರಾಡಕ್ಟ್ ಗಳ ತಯಾರಿಕೆಗೆ ಬಳಸಲಾಗುತ್ತದೆ.

suddiyaana