ಚಿಕಿತ್ಸೆಗಾಗಿ 25 ಕೋಟಿ ರೂ. ಹಣ ಸಹಾಯ ಪಡೆದ್ರಾ ಸಮಂತಾ? – ಗರಂ ಆಗಿದ್ದೇಕೆ ನಟಿ?

ಚಿಕಿತ್ಸೆಗಾಗಿ 25 ಕೋಟಿ ರೂ. ಹಣ ಸಹಾಯ ಪಡೆದ್ರಾ ಸಮಂತಾ? – ಗರಂ ಆಗಿದ್ದೇಕೆ ನಟಿ?

ಸೌತ್ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ರುತ್​ ಪ್ರಭು ಕೂತರೂ, ನಿಂತರೂ ಸದಾ ಸುದ್ದಿಯಾಗುತ್ತಾರೆ. ಅವರು ಹೋದಲ್ಲೆಲ್ಲಾ ಫೋಟೋ ತೆಗೆಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಾರೆ. ಸಮಂತ ಮಯೋಸೈಟೀಸ್ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿಂದೆ ಹಲವು ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಸಮಂತಾಗೆ ಮತ್ತೆ ಈ ಕಾಯಿಲೆ ಮರುಕಳಿಸಿದೆ, ಆಕೆ ಮತ್ತೆ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಅಂತಾ ಸುದ್ದಿಯಾಗುತ್ತಿದೆ. ಈ ಬೆನ್ನಲ್ಲೇ ಸಮಂತಾ ತನ್ನ ಚಿಕಿತ್ಸೆಗೆ ಬೇರೆಯವರಿಂದ ಹಣ ಪಡೆದಿದ್ದಾರೆ ಅನ್ನೋ ವಿಚಾರ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಬಾಲಿಯಲ್ಲಿ ಕಾಲಕಳೆಯುತ್ತಿರುವ ನಟಿ – ಕೂದಲಿಗೆ ಕತ್ತರಿ ಹಾಕಿದ ಸಮಂತಾ

ತನಗೆ ಮಯೋಸಿಟೀಸ್ ಎಂಬ ಅಪರೂಪದ ಕಾಯಿಲೆ ಇದೆ ಅಂತಾ ಸ್ವತಃ ನಟಿಯೇ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ತನಗೆ ಕಾಯಿಲೆಯಿದ್ದರೂ ಬಣ್ಣದ ಲೋಕದಲ್ಲಿ ಸಮಂತಾ ನಿರಂತರವಾಗಿ ಕಾಣಿಸಿಕೊಂಡಿದ್ದಾರೆ. ಚಿಕಿತ್ಸೆಯ ಜೊತೆ ಜೊತೆಗೆ ತಮ್ಮ ಸಿನಿಮಾಗಳ ಕೆಲಸದಲ್ಲೂ ಅವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅವರು ಚೇತರಿಕೆಯ ಹಾದಿಯಲ್ಲಿರುವಾಗಲೇ ಅವರ ಬಗ್ಗೆ ಕೆಲ ವದಂತಿಗಳು ಹಬ್ಬಿವೆ.

ನಟಿ ಸಮಂತಾ ತನ್ನ ಕಾಯಿಲೆಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಆರ್ಥಿಕ ಸಹಾಯವಾಗಿ 25 ಕೋಟಿ ರೂಪಾಯಿಯ ಸಹಾಯವನ್ನು ಇತರರಿಂದ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್‌ ಆಗಿತ್ತು. ಇಂಟರ್‌ ನೆಟ್‌ ಸೇರಿದಂತೆ ಕೆಲ ಸುದ್ದಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿತ್ತು. ಇದೀಗ ನಟಿ ಸಮಂತಾ ಈ ಬಗ್ಗೆ ಮೌನ ಮುರಿದಿದ್ದಾರೆ. ಸುಳ್ಳು ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ.

ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ ರೂ. ಖರ್ಚು? ಯಾರೋ ಕೆಟ್ಟದಾಗಿ ಡೀಲ್‌ ಮಾಡಿಕೊಂಡಿದ್ದಾರೆ. ಇದರ ಚಿಕ್ಕ ಖರ್ಚನ್ನು ನಾನೇ ಮಾಡುತ್ತಿದ್ದೇನೆ ಎನ್ನುವುದು ನನಗೆ ಖುಷಿಯಿದೆ. ನಾನು ವೃತ್ತಿ ಜೀವನದಲ್ಲಿ ಮಾಡಿದ ಎಲ್ಲಾ ಕೆಲಸಗಳಿಗೆ ನಾನು ಮಾರ್ಬಲ್ಸ್‌ ಗಳಿಂದ ಪಾವತಿಸಿಲ್ಲ. ನನ್ನನು ನಾನು ಆರಾಮವಾಗಿ ನೋಡಿಕೊಳ್ಳುಬಹುದು. ಮಯೋಸಿಟಿಸ್ ನಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಚಿಕಿತ್ಸೆ ಸಂಬಂಧ ನೀಡುವ ಮಾಹಿತಿಯೊಂದಿಗೆ ನಾವು ಜವಬ್ದಾರಿಯುತವಾಗಿ ಇರಬೇಕು  ಎಂದು ನಟಿ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

suddiyaana