2 ರೂ. ಲಂಚ ಪಡೆದ ಐವರು ಪೊಲೀಸರು – 37 ವರ್ಷಗಳ ಬಳಿಕ ಹೊರಬಂತು ಕೋರ್ಟ್ ತೀರ್ಪು!
ಬಿಹಾರ: ಲಂಚ ಸ್ವೀಕರಿಸಿದ ಆರೋಪದ ಮೇಲೆ ಐವರು ಪೊಲೀಸ್ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಾಗಿದೆ. 37 ವರ್ಷಗಳ ಹಿಂದೆ ಪೊಲೀಸ್ ಸಿಬ್ಬಂದಿ ಲಕ್ಷ ಲಕ್ಷ ರೂಪಾಯಿ ಲಂಚ ಪಡೆದಿಲ್ಲ. ಕೇವಲ 2 ರೂಪಾಯಿ ಲಂಚ ಪಡೆದ್ದಾರೆ. 37 ವರ್ಷಗಳ ಬಳಿಕ ಬಿಹಾರದ ಭಾಗಲ್ಪುರದ ವಿಜಿಲೆನ್ಸ್ ನ್ಯಾಯಾಲಯವು 37 ವರ್ಷಗಳ ಕಾಲ ನಡೆದ ಪ್ರಕರಣವನ್ನು ಕೊನೆಗೊಳಿಸಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಎರಡು ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಧಿಕಾರಿ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 37 ವರ್ಷಗಳ ಹಿಂದಿನ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ತೀರ್ಪನ್ನು ನ್ಯಾಯಾಲಯ ಇತ್ತೀಚೆಗೆ ಪ್ರಕಟಿಸಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಪೊಲೀಸರನ್ನು ಕೊಂದು ಶಸ್ತ್ರಾಸ್ತ್ರ ದೋಚಿದ ಕಿಡಿಗೇಡಿಗಳು
ಏನಿದು ವಿಚಿತ್ರ ಪ್ರಕರಣ?
1986ರ ಜೂನ್ 10ರಂದು ರಾತ್ರಿ ಭಾಗಲ್ಪುರದ ಚೆಕ್ ಪೋಸ್ಟ್ನಲ್ಲಿ ಐವರು ಪೊಲೀಸರು ಕರ್ತವ್ಯದಲ್ಲಿದ್ದರು. ಆ ಮಾರ್ಗದಲ್ಲಿ ಹಾದು ಹೋಗುವ ವಾಹನಗಳ ತಪಾಸಣೆ ಮಾಡುತ್ತಿದ್ದರು. ಬೇಗುಸರಾಯ್ ಎಸ್ಪಿ ಅರವಿಂದ್ ವರ್ಮಾ ಅವರು, ಲಂಚ ಪಡೆಯುತ್ತಿರುವ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಚೆಕ್ ಪೋಸ್ಟ್ ಕಡೆಗೆ ಹೋಗುತ್ತಿದ್ದ ವಾಹನವನ್ನು ಎಸ್ಪಿ ತಡೆದಿದ್ದಾರೆ. ಆ ವಾಹನದ ಚಾಲಕನಿಗೆ ಎರಡು ರೂಪಾಯಿ ನೋಟುಗಳನ್ನು ನೀಡಲಾಯಿತು. ನೋಟು ಕೊಡುವ ಮುನ್ನ ಎಸ್ಪಿ ಸಹಿ ಮಾಡಿ ಕೊಟ್ಟರು. ನಂತರ ಆ ಮಾರ್ಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ವಾಹನ ಚಾಲಕರನ್ನು ತಡೆದ ಲಂಚ ಪಡೆದು ವಾಹನಗಳನ್ನು ಬಿಟ್ಟು ಕಳುಹಿಸಿದ್ದಾರೆ. ನಂತರ ಸ್ವಲ್ಪ ಸಮಯದ ನಂತರ ಭಾಗಲ್ಪುರದ ಚೆಕ್ ಪೋಸ್ಟ್ಗೆ ಎಸ್ಪಿ ಅರವಿಂದ್ ವರ್ಮಾ ಎಂಟ್ರಿ ಕೊಟ್ಟಿದ್ದಾರೆ. ಚೆಕ್ ಪೋಸ್ಟ್ ಕಾನ್ ಸ್ಟೆಬಲ್ ಜೇಬಿನಿಂದ ಸಹಿ ಹಾಕಿದ್ದ ನೋಟು ವಶಪಡಿಸಿಕೊಂಡಿದ್ದಾರೆ. ಬಳಿಕ ಐವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಸ್ಪಿ ಐವರು ಪೊಲೀಸರನ್ನು ರೆಡ್ ಹ್ಯಾಂಡ್ ಆಗಿ ಪತ್ತೆ ಮಾಡಿದರು. ಪೊಲೀಸರು ರಾಮ್ ರತನ್ ಶರ್ಮಾ, ಕೈಲಾಶ್ ಶರ್ಮಾ, ಗಿಯಾನಿ ಶಂಕರ್, ಯುಗೇಶ್ವರ್ ಮಹ್ತೋ ಮತ್ತು ರಾಮ್ ಬಾಲಕ್ ರಾಯ್ ವಿರುದ್ಧ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಈ ಪ್ರಕರಣ ಹಲವು ಬಾರಿ ತನಿಖೆ ನಡೆದು ಕೊನೆಗೂ ಭಾಗಲ್ಪುರದ ವಿಜಿಲೆನ್ಸ್ ಕೋರ್ಟ್ ಮೆಟ್ಟಿಲೇರಿದ್ದು, ಆದರೆ ಭಾಗಲ್ಪುರದ ಚೆಕ್ ಪೋಸ್ಟ್ನಲ್ಲಿ ಐವರ ಬಳಿ ಇನ್ನು ಹಲವು ನೋಟುಗಳು ಇದ್ದವು. ಆದರೆ ಸರಿಯಾದ ಸಾಕ್ಷ್ಯಾಧಾರಗಳು ಇರದ ಕಾರಣ ಇದಕ್ಕೆ ಸಂಬಧಿಸಿದ ಎಲ್ಲರೂ ನಿರಪರಾಧಿಗಳು ಎಂಬ ಇತ್ತೀಚಿನ ತೀರ್ಪು ಬಂದಿದ್ದು, ಹೀಗೆ 37 ವರ್ಷಗಳ ಕಾಲ ನಡೆದ ಈ ಪ್ರಕರಣದ ತನಿಖೆ ಕೊನೆಗೂ ಅಂತ್ಯಗೊಂಡಿದೆ.