ವಂದೇ ಭಾರತ್​ಗೂ ಲಗ್ಗೆ ಇಟ್ಟ ನಂದಿನಿ! – ರೈಲಿನೊಳಗೆ ನಂದಿನಿ ಉತ್ಪನ್ನಗಳ ಮಾರಾಟ?

ವಂದೇ ಭಾರತ್​ಗೂ ಲಗ್ಗೆ ಇಟ್ಟ ನಂದಿನಿ! – ರೈಲಿನೊಳಗೆ ನಂದಿನಿ ಉತ್ಪನ್ನಗಳ ಮಾರಾಟ?

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಕರ್ನಾಟಕ ಚುನಾವಣೆಯ ಸಮಯದಲ್ಲಿ ನಂದಿನಿ ವರ್ಸಸ್​ ಅಮುಲ್ ವಿಚಾರ ಜೋರು ಚರ್ಚೆಯಾಗಿತ್ತು. ನಂದಿನಿಯ ಮಾರುಕಟ್ಟೆಯನ್ನು ಅಮುಲ್‌ ಕಬಳಸಿಲು ಮುಂದಾಗಿದೆ ಎಂದು ಬಿಂಬಿಸಲಾಗುತ್ತಿತ್ತು. ಬಳಿಕ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಪೂರೈಕೆ ಮಾಡುತ್ತಿದ್ದ ನಂದಿನಿ ತುಪ್ಪವನ್ನು ನಿಲ್ಲಿಸಲಾಗಿದೆ ಎಂಬ ವಿಚಾರಕ್ಕೂ ರಾಜಕೀಯ ಬಣ್ಣ ಬಳಿಯಲಾಗಿದೆ. ಈ ಬೆನ್ನಲ್ಲೇ  ಪ್ರಧಾನಿ ನರೇಂದ್ರ ಮೋದಿ ಕನಸಿನ ವಂದೇ ಭಾರತ್​ ರೈಲಿನ ಒಳಗಡೆ ನಂದಿನಿ ಉತ್ಪನ್ನ ಲಗ್ಗೆ ಇಡಲು ಸಜ್ಜಾಗಿದೆ.

ಇದನ್ನೂ ಓದಿ: ಇನ್ನುಮುಂದೆ ನಕಲಿ ಔಷಧಿಗಳ ಆಟ ನಡೆಯಲ್ಲ – ಔಷಧಿಗಳ ಮೇಲೆ QR ಕೋಡ್ ಕಡ್ಡಾಯ!

ಹೌದು.. ದೇಶದಾದ್ಯಂತ ನಂದಿನಿ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೆ ನಂದಿನಿ ಉತ್ಪನ್ನಗಳನ್ನು ವಂದೇ ಭಾರತ್‌ ರೈಲಿನಲ್ಲಿ ವಿತರಿಸಲು ಕೆಎಂಎಫ್‌ ಚಿಂತನೆ ನಡೆಸಿದೆ. ವಂದೇ ಭಾರತ್‌ ರೈಲಿನಲ್ಲಿ ಲಸ್ಸಿ, ಮಜ್ಜಿಗೆ, ಪೇಡಾ, ನಂದಿನಿ ಕೋಲ್ಡ್ ಹಾಲು, ಪ್ಲೇವರ್ಡ್ ಡ್ರಿಂಕ್ ಸೇರಿದಂತೆ ನಂದಿನ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್‌ ಪ್ಲ್ಯಾನ್ ಮಾಡಿದ್ದು ಈ ಸಂಬಂಧ ಸವಿಸ್ತಾರ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಈ ಪೈಕಿ 8 ರಿಂದ 9 ಲಕ್ಷ ಲೀಟರ್ ಹಾಲಿನಿಂದ ಇತರೇ ಉತ್ಪನ್ನಗಳ ತಯಾರಿಸಲಾಗುತ್ತಿದೆ. ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಚಿಂತಿಸಿರುವ ಕೆಎಂಎಫ್ 9 ರಿಂದ 11 ಅಥವಾ 12 ಲಕ್ಷ ಲೀಟರ್ ಹಾಲನ್ನು ಬಳಸಲು ಚಿಂತನೆ ನಡೆಸುತ್ತಿದೆ. ಉತ್ಪಾದನೆ ಜಾಸ್ತಿಯಾದರೆ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಹಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

suddiyaana