ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮುಂದುವರಿದ ಚೀತಾಗಳ ಸಾವಿನ ಸರಣಿ – ‘ಧಾತ್ರಿ’ ಶವ ಕಂಡು ಅಧಿಕಾರಿಗಳು ಶಾಕ್

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮುಂದುವರಿದ ಚೀತಾಗಳ ಸಾವಿನ ಸರಣಿ – ‘ಧಾತ್ರಿ’ ಶವ ಕಂಡು ಅಧಿಕಾರಿಗಳು ಶಾಕ್

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸರಣಿ ಸಾವು ಮುಂದುವರೆದಿದೆ. ಬುಧವಾರ ಆಗಸ್ಟ್‌ 2 ರಂದು ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಧಾತ್ರಿ ಎಂಬ ಹೆಸರಿನ ಹೆಣ್ಣು ಚೀತಾ ಸಾವನ್ನಪ್ಪಿದೆ. ಮಾರ್ಚ್ ನಂತರ ಈ ಚೀತಾ ಸೇರಿ ಸಾವನ್ನಪ್ಪಿದ ಚೀತಾಗಳ ಸಂಖ್ಯೆ 9ಕ್ಕೇರಿದೆ. ಇದು ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ‘ನಭಾ’ ಜೊತೆ ‘ತೇಜಸ್’ ಮಿಲನ – ಸಂಗಾತಿಯನ್ನು ಸೇರುವ ಆತುರದಲ್ಲಿಯೇ ಪ್ರಾಣ ಬಿಟ್ಟ ತೇಜಸ್..!

ಬುಧವಾರ ಬೆಳಗ್ಗೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾದ ಮೃತ ದೇಹ ಪತ್ತೆಯಾಗಿದೆ. ಧಾತ್ರಿ ಹೆಸರಿನ ಹೆಣ್ಣು ಚೀತಾ ಹೇಗೆ ಸಾವನ್ನಪ್ಪಿದೆ ಎಂಬ ಬಗ್ಗೆ ನಿಖರ ಕಾರಣ ಇನ್ನೂ ಹೊರಬಿದ್ದಿಲ್ಲ. ಸಾವಿಗೆ ನಿಖರ ಕಾರಣವೇನು ಅನ್ನೋದನ್ನು ಪತ್ತೆ ಮಾಡಲಾಗುತ್ತಿದೆ. ಚೀತಾದ ಮರಣೋತ್ತರ ಪರೀಕ್ಷೆಯನ್ನೂ ಮಾಡಲಾಗುತ್ತಿದೆ ಎಂದು ಮಧ್ಯಪ್ರದೇಶದ ಕುನೋ ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿದ ಒಂಬತ್ತು ಚೀತಾಗಳಲ್ಲಿ ಮೂರು ಮರಿಗಳು ಸೇರಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಇಲ್ಲಿಗೆ ಬಂದ ಬಳಿಕ ಒಂದು ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಮೂರು ಮರಿಗಳು ಸಾವು ಕಂಡಿವೆ. ಕಳೆದ ತಿಂಗಳು ನಾಲ್ಕು ದಿನಗಳ ಅಂತರದಲ್ಲಿ ಎರಡು ಗಂಡು ಚೀತಾಗಳು ಸಾವನ್ನಪ್ಪಿದ್ದು, ತೇಜಸ್ ಜುಲೈ 11 ರಂದು ಸಾವನ್ನಪ್ಪಿದ್ದು, ಜುಲೈ 14 ರಂದು ಸೂರಜ್ ಶವ ಪತ್ತೆಯಾಗಿತ್ತು.

suddiyaana