ಫಿಟ್‌ನೆಸ್‌ ಚಾಲೆಂಜ್‌ ಅಂತಾ ಅತೀ ಹೆಚ್ಚು ನೀರು ಕುಡಿದಳು.. ಕೊನೆಗೆ ಆಸ್ಪತ್ರೆ ಸೇರಿದಳು!

ಫಿಟ್‌ನೆಸ್‌ ಚಾಲೆಂಜ್‌ ಅಂತಾ ಅತೀ ಹೆಚ್ಚು ನೀರು ಕುಡಿದಳು.. ಕೊನೆಗೆ ಆಸ್ಪತ್ರೆ ಸೇರಿದಳು!

ಅತಿಯಾದರೆ ಅಮೃತವೂ ವಿಷ ಅನ್ನೋ ಮಾತು ಕೇಳಿರುತ್ತೇವೆ. ಈ ಮಾತಿಗೆ ನಿರ್ದಶನವೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಇಲ್ಲೊಬ್ಬ ಮಹಿಳೆ ತಾನು ಫಿಟ್‌ ಆಗಿ ಕಾಣಿಸಬೇಕು ಅಂತಾ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದಿದ್ದಾಳೆ. ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಸಾಮಾನ್ಯವಾಗಿ ಅತೀ ಹೆಚ್ಚು ನೀರು ಕುಡಿದರೆ ಆರೋಗ್ಯವಾಗಿರುತ್ತೇವೆ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿರುವುದನ್ನು ನಾವು ನೋಡಿರುತ್ತೇವೆ. ಅನಾರೋಗ್ಯವೆಂದು ಆಸ್ಪತ್ರೆಗೆ ತೆರಳಿದಾಗಲೂ ವೈದ್ಯರು ಹೆಚ್ಚು ಹೆಚ್ಚು ನೀರು ಕುಡಿಯಿರಿ.. ಎಲ್ಲವೂ ಸರಿಯಾಗುತ್ತೆ ಅಂತಾ ಹೇಳುತ್ತಾರೆ. ಮಿಚೆಲ್ ಫೇರ್‌ಬರ್ನ್ ಎಂಬ ಮಹಿಳೆ ಫಿಟ್‌ನೆಸ್ ಚಾಲೆಂಜ್‌ನ ಭಾಗವಾದ ಕೆನಡಾದ ಟಿಕ್‌ಟೋಕರ್ ನಲ್ಲಿ ಭಾಗವಹಿಸಿದ್ದಾಳೆ. ಸುಮಾರು 12 ದಿನಗಳ ಕಾಲ ಫಿಟ್‌ನೆಸ್‌ ಚಾಲೆಂಜ್‌ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಇದನ್ನೂ ಓದಿ: ಅಪ್ಪ, ಅಪ್ಪ ಒಪ್ಪಿದರೆ ಮಾತ್ರವೇ ಪ್ರೇಮ ವಿವಾಹಕ್ಕೆ ಅವಕಾಶ – ಸರ್ಕಾರದಿಂದ ಶೀಘ್ರದಲ್ಲೇ ಹೊಸ ಆದೇಶ?

ವಿದೇಶದಲ್ಲಿ 75 ಹಾರ್ಡ್ ಎಂದು ಹೆಸರಿಸಲಾದ ಫಿಟ್‌ನೆಸ್ ಚಾಲೆಂಜ್‌ವೊಂದು ಭಾರಿ ಸದ್ದು ಮಾಡುತ್ತಿದೆ. ಈ ಚಾಲೆಂಜ್‌ನಲ್ಲಿ ಭಾಗವಹಿಸುವವರು 75 ದಿನಗಳ ವರೆಗೆ ಪ್ರತಿನಿತ್ಯ ಸುಮಾರು ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಇದು ಅಲ್ಕೋಹಾಲ್ ಅಥವಾ ‘ಚೀಟ್ ಮೀಲ್ಸ್ ಇಲ್ಲದ ಆಹಾರಕ್ರಮವನ್ನು ಅನುಸರಿಸುವುದು, ದಿನಕ್ಕೆ 45 ನಿಮಿಷ ಎಕ್ಸರ್‌ಸೈಸ್ ಮಾಡುವುದು, ಪುಸ್ತಕದ ಹತ್ತು ಪುಟಗಳನ್ನು ಓದುವುದು, ದಿನದ ಚಟುವಟಿಕೆಯ ಫೋಟೋ ತೆಗೆಯುವುದನ್ನು ಒಳಗೊಂಡಿರುತ್ತದೆ. ಹೀಗೆ ಚಾಲೆಂಜ್‌ನಲ್ಲಿ ಭಾಗವಹಿಸಿದ ಮಿಚೆಲ್ ಫೇರ್‌ಬರ್ನ್, ಹೆಚ್ಚು ನೀರು ಕುಡಿದ ನಂತರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಮಿಚೆಲ್ ಫೇರ್‌ಬರ್ನ್ ಟಿಕ್‌ಟಾಕ್‌ನಲ್ಲಿ ಭಾಗವಹಿಸಿದ ಚಾಲೆಂಜ್ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ನೀರು ಕುಡಿದ ನಂತರ ನಾನು ಹೇಗೆ ಅಸ್ವಸ್ಥಳಾದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾಳೆ. ಚಾಲೆಂಜ್ ಸ್ವೀಕರಿಸಿ ಅದನ್ನು ಅನುಕರಿಸುತ್ತಿರುವಾಗಲೇ ನನಗೆ ಅಸ್ವಸ್ಥತೆಯ ಅನುಭವವಾಗಲು ಶುರುವಾಯಿತು. ನಾನು ವಾಕರಿಕೆ, ಸುಸ್ತು ಮೊದಲಾದ ಸಮಸ್ಯೆಯನ್ನು ಅನುಭವಿಸಿದೆ ಎಂದಿದ್ದಾಳೆ.

ಸತತವಾಗಿ ಅನಾರೋಗ್ಯದ ಅನುಭವ ಆದ ನಂತರ ಮಿಷೆಲ್‌ಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯನ್ನು ವೈದ್ಯರಲ್ಲಿ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಕೆಗೆ ತೀವ್ರವಾದ ಸೋಡಿಯಂ ಕೊರತೆಯಿರೋದು ತಿಳಿದು ಬಂತು. ದಿನಕ್ಕೆ ನಾಲ್ಕು ಲೀಟರ್‌ಗಿಂತ ಹೆಚ್ಚು ನೀರು ಸೇವಿಸುವ ಬದಲು, ದಿನಕ್ಕೆ ಅರ್ಧ ಲೀಟರ್‌ಗಿಂತ ಕಡಿಮೆ ನೀರನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಫಿಟ್‌ನೆಸ್ ಪ್ರೋಗ್ರಾಂನ್ನು 2019 ರಲ್ಲಿ ಪಾಡ್‌ಕಾಸ್ಟರ್ ಮತ್ತು ಪೂರಕ ಕಂಪನಿಯ ಸಿಇಒ ಆಂಡಿ ಫ್ರಿಸೆಲ್ಲಾಆರಂಭಿಸಿದರು. ಅವರು ಈ ಚಾಲೆಂಜ್‌ನ್ನು ‘ಮೆದುಳಿನ ಆರೋಗ್ಯಕ್ಕೆ ಐರನ್‌ಮ್ಯಾನ್’ ಎಂದು ಕರೆದರು. ಆದರೆ ಹಲವು ಆರೋಗ್ಯ ತಜ್ಞರು, ಯಾವುದೇ ಫಿಟ್‌ನೆಸ್ ಚಾಲೆಂಜ್‌ನ್ನು ಸ್ವೀಕರಿಸುವ ಮೊದಲು ವೈದ್ಯರನ್ನು ಅಥವಾ ಆಹಾರತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

suddiyaana