ಸಿಂಧಿಯಾ ಸಾಮ್ರಾಜ್ಯದ ಯುವರಾಜನಿಗೆ ದುಡಿಮೆಯೇ ಮೊದಲು – ‘ಮೈಮಂಡಿ’ಯಲ್ಲಿ ಸಕ್ಸಸ್ ಆದ ಕೇಂದ್ರಸಚಿವರ ಮಗ
ಗ್ವಾಲಿಯರ್ನ ರಾಜಮನೆತನದ ವಂಶಸ್ಥರಾದ ಜ್ಯೋತಿರಾದಿತ್ಯ ಸಿಂಧಿಯಾ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. 400 ಕೊಠಡಿಗಳನ್ನು ಹೊಂದಿರುವ 4000 ಕೋಟಿ ಬೆಲೆ ಬಾಳುವ ಬೃಹತ್ ಅರಮನೆಯೇ ಇವರ ಮನೆ. ಆದರೆ ಇವರ ಅಪಾರ ಸಂಪತ್ತಿನ ಹೊರತಾಗಿಯೂ, ಅವರ ಮಗ ಮಹಾನಾರಾಯಮನ್ ಸಿಂಧಿಯಾ ಮಾತ್ರ ತನ್ನದೇ ಆದ ಉದ್ಯಮದಲ್ಲಿ ಮುಂದುವರೆದಿದ್ದಾರೆ. ಮಹಾನಾರಾಯಮನ್ ಸಿಂಧಿಯಾ ಅವರು ತಮ್ಮ ಸ್ವಂತ ಕಂಪೆನಿ ಸ್ಥಾಪಿಸಿದ್ದು, ಕೇವಲ 11 ಲಕ್ಷ ರೂಪಾಯಿಗಳ ಸ್ಥಾಪಿಸಿದ ಕಂಪನಿ ಈಗ 5 ಕೋಟಿ ರೂಪಾಯಿಗಳ ಮೌಲ್ಯದವರೆಗೆ ಬೆಳೆದಿದೆ.
ಇದನ್ನೂ ಓದಿ: ಸಿಕ್ಸ್ಪ್ಯಾಕ್ ಲುಕ್ನಲ್ಲಿ ಅರ್ಜುನ್ ತೆಂಡೂಲ್ಕರ್ – ಸೋಶಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ತೆಂಡೂಲ್ಕರ್ ಹವಾ
ಸಿಂಧಿಯಾ ಸಾಮ್ರಾಜ್ಯದ ಉತ್ತರಾಧಿಕಾರಿ ತನ್ನ ಕುಟುಂಬದ ರಾಜಕೀಯ ಚಟುವಟಿಕೆ ಮತ್ತು ರಾಜಮನೆತನದ ಪರಂಪರೆಯಿಂದ ಹೊರಗುಳಿಯಲು ನಿರ್ಧರಿಸಿದ್ದು, ತನ್ನದೇ ಆದ ಉದ್ಯಮವನ್ನು ಆರಂಭಿಸುವ ಮೂಲಕ ಉದ್ಯಮಿಯಾಗಿ ತನ್ನ ಕಾಲು ಮೇಲೆ ತಾನೇ ನಿಲ್ಲಲು ನಿರ್ಧರಿಸಿದ್ದಾರೆ. ಇವರ ಕಂಪೆನಿಯು ಮಂಡಿಯಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ತರಕಾರಿಗಳನ್ನು ಒದಗಿಸುವ ಸ್ಟಾರ್ಟಪ್ ಕಂಪನಿ “ಮೈ ಮಂಡಿ” ಆಗಿದೆ. ಮಹಾನಾರಾಯಮನ್ ಸಿಂಧಿಯಾ ಅವರ ಮೈ ಮಂಡಿ ಕಂಪನಿಯು ಕಳೆದ ಎರಡು ವರ್ಷಗಳಿಂದ ಚಾಲನೆಯಲ್ಲಿದೆ. ಕೇವಲ 11 ಲಕ್ಷ ರೂ.ಗಳ ಬಂಡವಾಳದಲ್ಲಿ ಈ ತರಕಾರಿ ಕಂಪನಿಯನ್ನು ಸ್ಥಾಪಿಸಲಾಯಿತು. ಒಂದು ವರ್ಷದ ನಂತರ ಕಂಪೆನಿಯು 60 ಲಕ್ಷಕ್ಕೆ ಬೆಳೆಯಿತು. ಅಕ್ಟೋಬರ್ 2022 ರಲ್ಲಿ ಈ ಕಂಪೆನಿ ಮೌಲ್ಯ ರೂ 4.1 ಕೋಟಿಗೆ ಬಂದು ತಲುಪಿತು. ಪ್ರಸ್ತುತ ಈ ಕಂಪನಿಯ ಮೌಲ್ಯವು ರೂ 5 ಕೋಟಿಗೆ ಏರಿಕೆಯಾಗಿದೆ. ಕೃಷಿ ವಲಯದಲ್ಲಿ ಹೊಸತನಕ್ಕೆ ಪ್ರಯತ್ನಿಸುತ್ತಿರುವ 27 ವರ್ಷದ ಸಿಂಧಿಯಾ ಪುತ್ರ, 25 ವರ್ಷದ ಸೂರ್ಯಾಂಶ್ ರಾಣಾ ಜೊತೆಗೂಡಿ ತಾಜಾ ತರಕಾರಿಗಳ ಸಂಗ್ರಹಣೆ ಮತ್ತು ಮಾರಾಟದಲ್ಲಿನ ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮೈಮಂಡಿಯನ್ನು ಸ್ಥಾಪಿಸಿದರು ಮತ್ತು ಉತ್ಪನ್ನವನ್ನು ಕೈಗೆಟಕುವ ದರದಲ್ಲಿ ನೀಡುವುದು ಮುಖ್ಯ ಉದ್ದೇಶವಾಗಿದೆ.
ಮಹಾನಾರಾಯಮನ್ ಸಿಂಧಿಯಾ ತನ್ನ ಉದ್ಯಮಶೀಲತೆಯ ದೃಷ್ಟಿಯ ಮೂಲಕ, ಗ್ವಾಲಿಯರ್ ನಾದ್ಯಂತ ತಾಜಾ, ಕಡಿಮೆ-ವೆಚ್ಚದ ತರಕಾರಿಗಳು ಮತ್ತು ದಿನಸಿಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದಾರೆ. ಕುಟುಂಬದ ಅಪಾರ ಸಂಪತ್ತನ್ನು ಅವಲಂಭಿಸದೆ ಭವಿಷ್ಯದಲ್ಲಿ ಇಡೀ ಮಧ್ಯಪ್ರದೇಶ ರಾಜ್ಯಕ್ಕೆ ತನ್ನ ಕಂಪೆನಿ ವಿಸ್ತರಿಸುವುದು ಅವರ ಗುರಿಯಾಗಿದೆ.