ಹೆತ್ತ ಮಗುವನ್ನೇ ಮಾರಿ ಐಫೋನ್ ಖರೀದಿಸಿದ ದಂಪತಿ! – ಬೀಚ್ಗಳಲ್ಲಿ ದಂಪತಿಯ ಹನಿಮೂನ್!
ಹಣಕಾಸಿನ ತೊಂದರೆ ಉಂಟಾದರೆ ಯಾರ ಬಳಿಯಾದರೂ ಸಾಲ ಕೇಳುತ್ತೇವೆ. ಸಾಲ ಸಿಕ್ಕಿಲ್ಲವೆಂದರೆ ಮನೆಯಲ್ಲಿರುವ ದುಬಾರಿ ವಸ್ತುಗಳನ್ನು ಗಿರವಿ ಇಡುತ್ತೇವೆ. ಇಲ್ಲದಿದ್ದರೆ ಚಿನ್ನಾಭರಣಗಳನ್ನು ಮಾರಾಟ ಮಾಡಿ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದಂಪತಿ ತಮ್ಮ ದುರಾಸೆಗೆ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾರೆ!
ಪಶ್ಚಿಮ ಬಂಗಾಳದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ದಂಪತಿ ಐಫೋನ್ ಖರೀದಿಸಲು ಮುಂದಾಗಿದ್ದಾರೆ. ಈ ವೇಳೆ ತಮ್ಮ ಬಳಿ ಐಫೋನ್ ಖರೀದಿಸುವಷ್ಟು ಹಣವಿಲ್ಲದೇ ಇದ್ದಾಗ ತಮ್ಮ ಎಂಟು ತಿಂಗಳ ಹಸುಳೆಯನ್ನು ಮಾರಾಟ ಮಾಡಿದ್ದಾರೆ. ಹೆತ್ತ ಮಗುವನ್ನು ಒಂಚೂರು ಕರುಣೆ ಇಲ್ಲದೆ ಮಾರಾಟ ಮಾಡಿದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ: ಅಮೆರಿಕ ಸರ್ಕಾರದ ವಶದಲ್ಲಿ ‘ಅನ್ಯಗ್ರಹ ಜೀವಿಗಳು’! – ಮಾಜಿ ಗುಪ್ತಚರ ಅಧಿಕಾರಿ ಸ್ಫೋಟಕ ಹೇಳಿಕೆ
ಘಟನೆಯ ವಿವರ
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಯದೇವ್ ಘೋಷ್ ಮತ್ತು ಸತಿ ಹೊಸ ಐಫೋನ್ ಒಂದನ್ನು ಖರೀದಿಸಿದ್ದಾರೆ. ಬಳಿಕ ದಂಪತಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ತಮ್ಮ ಹನಿಮೂನ್ಗಾಗಿ ದಿಘಾ ಮತ್ತು ಮಂದಾರಮಣಿ ಬೀಚ್ಗಳು ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿ 8 ತಿಂಗಳ ಮಗು ಕಾಣದೇ ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ದಂಪತಿ ಬಳಿ ಹೊಸ ಐಫೋನ್ ಇರುವುದನ್ನು ಕಂಡು ಸ್ಥಳೀಯರಲ್ಲಿ ಅನುಮಾನ ಮೂಡಿದೆ. ಈ ಹಿನ್ನೆಲೆ ಸ್ಥಲೀಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳೀಯರ ದೂರಿನ ಬೆನ್ನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ದಂಪತಿಗಳ ದುಷ್ಕೃತ್ಯ ಬಯಲಾಗಿದೆ. ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದಾರೆ. ಪಾಪಿ ದಂಪತಿಗಳು ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.
ಜಯದೇವ್ ಘೋಷ್ ಮತ್ತು ಸತಿ ತಮ್ಮ ಮಗುವನ್ನು ರೂ 2 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ನಂತರ, ಅವರು ತಮ್ಮ ಹನಿಮೂನ್ಗಾಗಿ ದಿಘಾ ಸಮುದ್ರದಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮಗುವನ್ನು ಮಾರಾಟ ಮಾಡಿದ ಹಣದಲ್ಲಿ ಮೊಬೈಲ್ ಫೋನ್ ಸಹ ಖರೀದಿಸಿದರು. ಅಫೀಮು ಮತ್ತು ಗಾಂಜಾ ಖರೀದಿಸಲು ದಂಪತಿಗಳು ಮಗುವನ್ನು ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ದಂಪತಿಗಳು ಶಿಶುವನ್ನು ಮಾರಾಟ ಮಾಡಿದ ಮತ್ತೊಬ್ಬ ಮಹಿಳೆ ಪ್ರಿಯಾಂಕಾ ಘೋಷ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕಾ ಖರ್ದಾಹ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಆದರೆ ಅವರು ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ. ‘ಮಗುವನ್ನು ಸತಿ ತಾಯಿಯ ಮಾವನ ಮನೆಗೆ ಕಳುಹಿಸಲಾಗಿದೆ ಎಂದು ನನಗೆ ತಿಳಿದಿತ್ತು. ನಂತರ, ಮಗುವನ್ನು ಮಾರಾಟ ಮಾಡಲಾಗಿದೆ ಎಂದು ನನಗೆ ತಿಳಿದಿತ್ತು. ಮಗು ಏಕೆ ಮತ್ತು ಯಾರಿಗೆ ಎಂದು ನಾನು ಹೇಳಲಾರೆ. ಮಗುವನ್ನು ಮಾರಾಟ ಮಾಡಿದ ನಂತರ ನನಗೆ ತಿಳಿಯಿತು ಎಂದು ವಿಚಾರಣೆ ವೇಳೆ ಹೇಳಿದ್ದಾಳೆ.