ಪೋರ್ನ್ ವಿಡಿಯೋ ಕಾಲ್ ಮೂಲಕ ಕೇಂದ್ರ ಸಚಿವರಿಗೆ ಬೆದರಿಕೆ – ಪೊಲೀಸರ ಬಲೆಗೆ ಬಿದ್ದ ಮಿಕಗಳು..!
ಅವರು ಕೇಂದ್ರದ ಸಚಿವರು. ಅವರ ಜೊತೆ ಅದೆಂಥಾ ಸಲುಗೆಯಿತ್ತೋ ಏನೋ.. ವಿಡಿಯೋ ಕಾಲ್ ಮಾಡಿದ್ದಾರೆ. ಮಿನಿಸ್ಟರ್ ಕೂಡಾ ವಿಡಿಯೋ ಕಾಲ್ ರಿಸೀವ್ ಮಾಡಿದ್ದಾರೆ. ಆಗ ವಿಡಿಯೋ ಕಾಲ್ ಜೊತೆ ಅಶ್ಲೀಲ ವಿಡಿಯೋ ಕೂಡಾ ಪ್ಲೇ ಆಗಿದೆ. ಇದರಿಂದ ಕೇಂದ್ರ ಸಚಿವರು ಗಾಬರಿಯಾದರೆ, ವಿಡಿಯೋ ಕಾಲ್ ಮಾಡಿದವರಿಗೆ ಅದೇನೋ ಖುಷಿ. ನಂತರ ನಡೆದಿದ್ದೇ ಬೇರೆ.
ಇದನ್ನೂ ಓದಿ: ಇನ್ಸ್ಪೆಕ್ಟರ್, ಮೇಲಾಧಿಕಾರಿಗಳಷ್ಟೇ ಡ್ರಂಕ್ & ಡ್ರೈವ್ ತಪಾಸಣೆ ಮಾಡ್ಬೇಕು – ಸಂಚಾರಿ ಪೊಲೀಸರಿಂದ ಹೊಸ ರೂಲ್ಸ್
ಕೇಂದ್ರ ಸಚಿವರಿಗೆ ವೀಡಿಯೋ ಕಾಲ್ ಮಾಡಿದ ವ್ಯಕ್ತಿಗಳು ನಂತರ ಪೋರ್ನ್ ವೀಡಿಯೋ ಪ್ಲೇ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನೆ ಆಗಿಲ್ಲ. ಇದನ್ನೇ ಇಟ್ಟುಕೊಂಡು ಕೇಂದ್ರ ಸಚಿವರನ್ನ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ್ದಾರೆ. ವೀಡಿಯೋ ಕಾಲ್ನಲ್ಲಿ ಪೋರ್ನ್ ಪ್ಲೇ ಮಾಡಿ, ರೆಕಾರ್ಡ್ ಮಾಡಿಕೊಂಡ ಬಳಿಕ ಈ ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಸಚಿವರಿಗೆ ಬೆದರಿಕೆ ಹಾಕಿದ್ದಾರೆ. ಈ ಕೃತ್ಯ ಎಸಗಿದ ರಾಜಸ್ಥಾನದ ಇಬ್ಬರು ವ್ಯಕ್ತಿಗಳನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಕಳೆದ ಜೂನ್ನಲ್ಲಿ ಸಚಿವರಿಗೆ ವಾಟ್ಸಾಪ್ನಲ್ಲಿ ವೀಡಿಯೋ ಕರೆ ಬಂದಿತ್ತು. ಅವರು ಕರೆ ಸ್ವೀಕರಿಸಿದ ತಕ್ಷಣ ಪೋರ್ನ್ ವೀಡಿಯೋ ಪ್ಲೇ ಆಗಲು ಪ್ರಾರಂಭವಾಯಿತು. ಅವರ ಮುಖವೂ ಅದರಲ್ಲಿ ಸೆರೆಯಾಗಿತ್ತು. ಬಳಿಕ ವೀಡಿಯೋ ಕರೆ ಸ್ಥಗಿತಗೊಳಿಸಿದ ವ್ಯಕ್ತಿ ಸಚಿವರಿಗೆ ಮತ್ತೆ ಕರೆ ಮಾಡಿ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ದೂರು ದಾಖಲಾದ ನಂತರ ಆರೋಪಿ ಮೊಹಮ್ಮದ್ ವಕೀಲ್ ಮತ್ತು ಮೊಹಮ್ಮದ್ ಸಾಹಿಬ್ ಆರೋಪಿಗಳನ್ನ ಜುಲೈನಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಇನ್ನಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.