ಕುಸ್ತಿ ಫೆಡರೇಷನ್ ಚುನಾವಣೆ – ಮತದಾರರ ಪಟ್ಟಿಯಲ್ಲಿ ಬ್ರಿಜ್ ಭೂಷಣ್, ಮಗ ಕರಣ್ ಹೆಸರಿಲ್ಲ!
ಮುಂಬರಲಿರುವ ಭಾರತೀಯ ಕುಸ್ತಿ ಫೆಡರೇಷನ್ ಚುನಾವಣಾ ಕಣದಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಮಗ ಕರಣ್ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಆಗಸ್ಟ್ 12 ರಂದು ಕುಸ್ತಿ ಫೆಡರೇಷನ್ ಚುನಾವಣೆ ನಡೆಯಲಿದೆ. ಬ್ರಿಜ್ ಭೂಷಣ್ ಅವರ ಕಿರಿಯ ಪುತ್ರ ಉತ್ತರ ಪ್ರದೇಶ ಕುಸ್ತಿ ಸಂಘದ ಅಧ್ಯಕ್ಷರಾಗಿರುವ ಕರಣ್ ಹೆಸರನ್ನು ಕೂಡಾ ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿದೆ! – ಬಿಜೆಪಿ ನಾಯಕರ ಕಿಡಿ
ಚುನಾವಣಾ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅರ್ಹ ಮತದಾರರ ಪಟ್ಟಿಯನ್ನು ಅಂತಿಮ ಪಡಿಸಿದ್ದಾರೆ. ಇವರಿಬ್ಬರ ಬದಲಾಗಿ ಪ್ರೇಮ್ ಕುಮಾರ್ ಮಿಶ್ರಾ ಮತ್ತು ಸಂಜಯ್ ಸಿಂಗ್ ಮತದಾನ ಮಾಡಲಿದ್ದಾರೆ. ಆದರೆ ಬ್ರಿಜ್ ಭೂಷಣ್ ಅಳಿಯ ವಿಶಾಲ ಪ್ರತಾಪ್ ಸಿಂಗ್ ಹೆಸರು ಪಟ್ಟಿಯಲ್ಲಿದೆ. ರಾಜ್ಯದ ಪರವಾಗಿ ವಿನಯ್ ಕುಮಾರ್ ಸಿಂಗ್ ಜತೆ ವಿಶಾಲ್ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ.
ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಹಾಗೆಯೇ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಹಾಗೂ ಬಂಧಿಸುವಂತೆ ಒತ್ತಾಯಿಸಿ ತಿಂಗಳುಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ್ದರು.