ಬಂಡಾಯ ನಾಯಕರಿಗೆ ಬಿಜೆಪಿ ರೆಡ್ ಕಾರ್ಪೆಟ್ – ಮಹಾರಾಷ್ಟ್ರದ ಸಿಎಂ ಪಟ್ಟಕ್ಕೇರುತ್ತಾರಾ ಅಜಿತ್ ಪವಾರ್?!

ಬಂಡಾಯ ನಾಯಕರಿಗೆ ಬಿಜೆಪಿ ರೆಡ್ ಕಾರ್ಪೆಟ್ – ಮಹಾರಾಷ್ಟ್ರದ ಸಿಎಂ ಪಟ್ಟಕ್ಕೇರುತ್ತಾರಾ ಅಜಿತ್ ಪವಾರ್?!

ಮಹಾರಾಷ್ಟ್ರ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದೆ. ಈಗಾಗಲೇ ಎನ್ ಸಿಪಿಯಿಂದ ಬಂಡಾಯವೆದ್ದು ಬಿಜೆಪಿಗೆ ಬೆಂಬಲ ಘೋಷಿಸಿರುವ ಅಜಿತ್ ಪವಾರ್ ಇದೀಗ ಸಿಎಂ ಆಗುತ್ತಾರೆ ಎನ್ನಲಾಗಿದೆ. ಶಿವಸೇನೆ (Shiv Sena) ನಾಯಕ ಏಕನಾಥ್ ಶಿಂಧೆ (Eknath Shinde) ಬದಲಿಗೆ ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಅವರನ್ನು ಆಗಸ್ಟ್ 10 ರ ವೇಳೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ (Maharashtra CM) ಮಾಡಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ (prithviraj chavan) ಸ್ಫೋಟಕ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಸಂಚಲನ ಉಂಟು ಮಾಡಿದೆ.

ಇದನ್ನೂ ಓದಿ : ಪೊಲೀಸರಿಗೆ ರಕ್ಷಣೆಯೂ ಇಲ್ಲ, ಲಂಚವಿಲ್ಲದೆ ರಜೆಯೂ ಇಲ್ಲ.. ರಾಜ್ಯ ಸರ್ಕಾರದಲ್ಲಿ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ – ಬಿಜೆಪಿ ಟೀಕೆ

ಮಹಾರಾಷ್ಟ್ರ ಸಿಎಂ ಶಿಂಧೆ ಮತ್ತು ಇತರ 15 ಶಿವಸೇನೆ ಶಾಸಕರ ಅನರ್ಹತೆಯ ಬಗ್ಗೆ ಆಗಸ್ಟ್ 10 ರ ಸುಮಾರಿಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪೃಥ್ವಿರಾಜ್ ಚವಾಣ್ ದೊಡ್ಡ ಹೇಳಿಕೆಗೆ ಪ್ರತಿಕ್ರಿಯಿಸಿರುವ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಿಎಂ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಏಕನಾಥ್ ಶಿಂಧೆ ಮತ್ತು ಇತರ ಶಾಸಕರ ಅನರ್ಹತೆಯ ನಿರ್ಧಾರದ ನಂತರ, ಪ್ರಸ್ತುತ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಆಗಸ್ಟ್ 10 ರ ಸುಮಾರಿಗೆ ಸಿಎಂ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಏಕನಾಥ್ ಶಿಂಧೆ ಅವರ ತವರು ಜಿಲ್ಲೆ ಥಾಣೆಯನ್ನು ಹೊರತುಪಡಿಸಿ ರಾಜ್ಯದಲ್ಲಿ ಯಾವುದೇ ಪ್ರಭಾವವನ್ನು ಹೊಂದಿಲ್ಲದ ಕಾರಣ ಅವರ ನೇತೃತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಉತ್ಸುಕವಾಗಿಲ್ಲ ಎಂದು ಚವಾಣ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಗೆ ಈಗ ಪರ್ಯಾಯವಾಗಿ ಅಜಿತ್ ಪವಾರ್ ಮಾತ್ರ ಇದ್ದಾರೆ. ಯೂಸ್ ಅಂಡ್ ಥ್ರೋ ಎಂಬುದು ಪ್ರಧಾನಿ ಮೋದಿಯವರ ಕಾರ್ಯ ವಿಧಾನವಾಗಿದೆ ಎಂದು ಚವಾಣ್ ಆರೋಪಿಸಿದ್ದಾರೆ. ಬಿಜೆಪಿಯ ಉನ್ನತ ನಾಯಕತ್ವದ ಮೂಲಗಳ ಪ್ರಕಾರ ಅಜಿತ್ ಪವಾರ್ ಅವರನ್ನು ಸಿಎಂ ಮಾಡಿ ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಬಯಸಿದೆ ಎಂದು ತಿಳಿಸಿದ್ದಾರೆ. ಪೃಥ್ವಿರಾಜ್ ಚವಾಣ್ ಅವರ ಈ ಸ್ಫೋಟಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಏಕನಾಥ್ ಶಿಂಧೆ ಸಿಎಂ ಆಗಿ ಉಳಿಯುತ್ತಾರೆ ಎಂಬುದು ಸ್ಪಷ್ಟವಾಗಿದೆ. ಪ್ರತಿಪಕ್ಷಗಳು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.

ಈ ಮಧ್ಯೆ ಎನ್‌ಸಿಪಿ ವಕ್ತಾರ ಮತ್ತು ಶಾಸಕ ಅಮೋಲ್ ಮಿಟ್ಕರಿ ಕೂಡ ಅಜಿತ್ ಪವಾರ್ ಮುಖ್ಯಮಂತ್ರಿಯಾಗುತ್ತಾರೆ ಅಜಿತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಎಂದು ಟ್ವೀಟ್ ಮಾಡಿದ್ದಾರೆ. ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಅಜಿತ್ ಪವರ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಮಾಡಿರುವ ಟ್ವೀಟ್​ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

suddiyaana