500ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕಿಂಗ್ ಕೊಹ್ಲಿ – ಹಲವು ದಾಖಲೆಗಳನ್ನು ಪುಡಿಗಟ್ಟಿದ ರನ್ ಮೆಷಿನ್ ವಿರಾಟ್..!

500ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕಿಂಗ್ ಕೊಹ್ಲಿ – ಹಲವು ದಾಖಲೆಗಳನ್ನು ಪುಡಿಗಟ್ಟಿದ ರನ್ ಮೆಷಿನ್ ವಿರಾಟ್..!

ರನ್ ಮೆಷಿನ್ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದ ಮೂಲಕ ತಮ್ಮ 29ನೇ ಟೆಸ್ಟ್ ಶತಕ ಹಾಗೂ ಒಟ್ಟಾರೆ 76ನೇ ಅಂತಾರಾಷ್ಟ್ರೀಯ ಶತಕ ಪೂರ್ಣಗೊಳಿಸಿದ್ದಾರೆ. ಅಷ್ಟೇ ಅಲ್ಲ,  ವಿರಾಟ್ ಕೊಹ್ಲಿ ಈ ಶತಕದೊಂದಿಗೆ ದಾಖಲೆಗಳ ಸರದಾರನಾಗಿ ಮೆರೆದಿದ್ದಾರೆ.

ಇದನ್ನೂ ಓದಿ: ಶತಕವನ್ನು ತಂದೆ ತಾಯಿಗೆ ಅರ್ಪಿಸಿದ ದಾಖಲೆಯ ಸರದಾರ – ಯಶಸ್ವಿ ಜೈಸ್ವಾಲ್ ಮಾತಿಗೆ ಅಭಿಮಾನಿಗಳ ಜೈಹೋ..

ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ, ಟೆಸ್ಟ್ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. ಇದು ವಿರಾಟ್ ಕೊಹ್ಲಿ ಅವರ ಅಂತರಾಷ್ಟ್ರೀಯ ವೃತ್ತಿಜೀವನದ 500 ನೇ ಪಂದ್ಯವಾಗಿದ್ದು, ಈ ಶತಕ ಅವರಿಗೆ ತುಂಬಾ ವಿಶೇಷವಾಗಿದೆ. 21 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಅಂದರೆ ಪೋರ್ಟ್ ಆಫ್ ಸ್ಪೇನ್ನಲ್ಲಿ ಕ್ರಿಕೆಟ್ ದೇವರು ಮಾಡಿದ ಸಾಧನೆಯನ್ನು ಇದೀಗ ವಿರಾಟ್ ಕೊಹ್ಲಿ ಪುನರಾವರ್ತಿಸಿದ್ದಾರೆ. ಟ್ರಿನಿಡಾಡ್ ನಗರದ ಈ ಐತಿಹಾಸಿಕ ಮೈದಾನದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯ ಅನೇಕ ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ಉಭಯ ದೇಶಗಳ ನಡುವಣ 100ನೇ ಟೆಸ್ಟ್ ಪಂದ್ಯವಾಗಿರುವುದರೊಂದಿಗೆ ಕಿಂಗ್ ಕೊಹ್ಲಿಯ 500ನೇ ಅಂತಾರಾಷ್ಟ್ರೀಯ ಪಂದ್ಯವೂ ಆಗಿದೆ. ತನ್ನ 500ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕಳೆದ 5 ವರ್ಷಗಳಿಂದ ವಿದೇಶಿ ನೆಲದಲ್ಲಿ ಎದುರಿಸುತ್ತಿದ್ದ ಟೆಸ್ಟ್ ಶತಕದ ಬರವನ್ನು ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನೀಗಿಸಿದ್ದಾರೆ.

suddiyaana