ರಸ್ತೆಯಲ್ಲಿ ಜಾನುವಾರುಗಳು ಓಡಾಡಿದ್ರೆ ಮಾಲೀಕನಿಗೆ ಬೀಳುತ್ತೆ ಚಪ್ಪಲಿ ಏಟು!

ರಸ್ತೆಯಲ್ಲಿ ಜಾನುವಾರುಗಳು ಓಡಾಡಿದ್ರೆ ಮಾಲೀಕನಿಗೆ ಬೀಳುತ್ತೆ ಚಪ್ಪಲಿ ಏಟು!

ಮಧ್ಯಪ್ರದೇಶ: ಹೆದ್ದಾರಿಗಳಿಗೆ ಏಕಾಏಕಿ ಜಾನುವಾರುಗಳು ನುಗ್ಗುತ್ತವೆ. ಜಾನುವಾರುಗಳು ಎಲ್ಲೆಂದರಲ್ಲಿ ಮಲಗುತ್ತವೆ. ವಾಹನ ಸವಾರರು ಎಷ್ಟೇ ಹಾರ್ನ್‌ ಹಾಕಿದರೂ, ಅಟ್ಟಿಸಿದರೂ ಅವುಗಳು ಒಂಚೂರು ಕದಲೋದಿಲ್ಲ. ಇನ್ನು ರಾತ್ರಿ ವೇಳೆಯೂ ರಸ್ತೆ ಮೇಲೆಯೇ ಜಾನುವಾರುಗಳು ಓಡಾಡುತ್ತಿರುತ್ತವೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತವೆ. ಇಂತಹ ದುರ್ಘಟನೆಗಳಲ್ಲಿ ಈಗಾಗಲೇ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ ಜಾನುವಾರುಗಳ ದಾಳಿ ಸಮಸ್ಯೆಗೆ ಮುಕ್ತಿ ಹಾಡುವ ಉದ್ದೇಶದಿಂದ ಇಲ್ಲೊಂದು ಗ್ರಾಮದಲ್ಲಿ ಸರಪಂಚ್ ಹೊಸ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕಾಶಿಯಾತ್ರೆ ಯೋಜನೆ ಮುಂದುವರೆಸಿದ ಕಾಂಗ್ರೆಸ್‌ ಸರ್ಕಾರ –  ಎಲ್ಲಿಂದ ಹೊರಡಲಿದೆ ನಾಲ್ಕನೇ ಟ್ರಿಪ್‌?

ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿರುವ ನಾಗನಡುಯಿ ಗ್ರಾಮದಲ್ಲಿ ಅಲ್ಲಿನ ಸರ್ಪಂಚರು ಹೊಸ ರೂಲ್ಸ್‌ ಜಾರಿ ಮಾಡಿದ್ದಾರೆ. ಜಾನುವಾರುಗಳು ರಸ್ತೆಯಲ್ಲಿ ತಿರುಗಾಡುತ್ತಿರುವುದು ಕಂಡು ಬಂದರೆ ಅವುಗಳ ಮಾಲೀಕರಿಗೆ ಐದು ಬಾರಿ ಚಪ್ಪಲಿಯಿಂದ ಹೊಡೆದು 500 ರೂಪಾಯಿ ದಂಡ ವಸೂಲಿ ಮಾಡಬೇಕು ಎಂದು ಸರಪಂಚ್ ಆದೇಶಿಸಿದ್ದಾರೆ.

ಈ ಹೊಸ ಆದೇಶದ ಕುರಿತಾಗಿ ಡಂಗೂರ ಬಾರಿಸುತ್ತಾ, ಗ್ರಾಮದಲ್ಲಿ ಜಾನುವಾರುಗಳು ಸ್ವಚ್ಛಂದವಾಗಿ ಓಡಾಡುತ್ತಿರುವುದು ಕಂಡು ಬಂದರೆ ಐದು ಬಾರಿ ಚಪ್ಪಲಿಯಿಂದ ಥಳಿಸಿ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ವ್ಯಕ್ತಿಯೊಬ್ಬ ಜೋರಾಗಿ ಸಾರುತ್ತಾ ಹೋಗುತ್ತಿರುವ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​​ ಆಗಿದೆ.

ಈ ಹೊಸ ಆದೇಶಕ್ಕೆ ಆ ಗ್ರಾಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲಗ್ರಾಮಸ್ಥರು ಈ ನಿಯಮವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ ಮಾಡಿದ್ದಾರೆ. ಆದರೆ ಈ ವಿಷಯದಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮಧ್ಯಸ್ಥಿಕೆಯನ್ನು ಗ್ರಾಮಸ್ಥರಿಗೆ ಗ್ರಾಮ ಮಧ್ಯದಲ್ಲಿ ತಿರುಗಾಡುವ ದನ, ಕರುಗಳಿಂದ ರಸ್ತೆಯಲ್ಲಿ ಓಡಾಡಲು ಸಮಸ್ಯೆ ಆಗುತ್ತದೆ. ಹೀಗಾಗಿ ಈ ಕ್ರಮವನ್ನು ತೆಗೆದುಕೊಳ್ಳಾಗಿದೆ ಎಂದು ತಿಳಿಸಿದ್ದಾರೆ.

2018ರಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗ್ರಾಮವೊಂದು ಮಹಿಳೆಯರು ಹಗಲು ಹೊತ್ತಿನಲ್ಲಿ ನೈಟಿ ಧರಿಸುವುದನ್ನು ನಿಷೇಧಿಸಲಾಗಿತ್ತು. ಈ ನಿಯಮ್ಮ ಪಾಲಿಸದಿದ್ದರೆ 2 ಸಾವಿರ ರೂಪಾಯಿ ದಂಡ ಹಾಕುದುದಾಗಿ ವಿಧಿಸಿದ ನಿಯಮ ಭಾರಿ​ ಸುದ್ದಿಯಾಗಿತ್ತು.

suddiyaana