ಮಂಗಳೂರಿನಲ್ಲಿ ಮಕ್ಕಳಿಗೆ ಚಾಕೋಲೇಟ್ ಕೊಡುವ ಮೊದಲು ಹುಷಾರ್..! -ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಚಾಕೋಲೇಟ್ ಡ್ರಗ್ಸ್..!

ಮಂಗಳೂರಿನಲ್ಲಿ ಮಕ್ಕಳಿಗೆ ಚಾಕೋಲೇಟ್ ಕೊಡುವ ಮೊದಲು ಹುಷಾರ್..! -ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಚಾಕೋಲೇಟ್ ಡ್ರಗ್ಸ್..!

ಕರಾವಳಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ನಶೆಯ ಘಾಟು ಜಾಸ್ತಿಯಾಗುತ್ತಿದೆಯಾ.. ಶಿಕ್ಷಣ ಪಡೆಯಲು ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ಅಮಲಿನಲ್ಲಿ ತೇಲುತ್ತಿದ್ದಾರಾ.. ಇಂದಿನ ವಿದ್ಯಾರ್ಥಿಗಳೇ ಮುಂದಿನ ಆದರ್ಶ ಪ್ರಜೆಗಳಾಗಬೇಕು ಎಂದು ಬಯಸುವ ಶಿಕ್ಷಣಸಂಸ್ಥೆಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರಾ ಎಂಬ ಆತಂಕ ಎದುರಾಗಿದೆ.

ಕರಾವಳಿಯಲ್ಲಿ ಪದೇ ಪದೇ ಪೊಲೀಸರು ಮಾದಕ ದ್ರವ್ಯ ಜಾಲವನ್ನು ಬಯಲಿಗೆಳೆಯುತ್ತಲೇ ಇದ್ದರೂ ಈ ಮದ್ಯೆ ಬಾಂಗ್ ಚಾಕೋಲೇಟ್ ಎಂಬ ಡ್ರಗ್ಸ್ ಸದ್ದು ಮಾಡ್ತಿದೆ. ಇ-ಸಿಗರೇಟ್ ಹಾಗೂ ಅಮಲು ಪದಾರ್ಥದ ಬಾಂಗ್ ಚಾಕಲೇಟ್ ಮಾರಾಟ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ದೋಷದ ನಡುವೆಯೂ ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಮೊದಲ ದಿನ 60 ಸಾವಿರ ಮಹಿಳೆಯರ ನೋಂದಣಿ

ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಹಾಗೂ ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಚಾಕೋಲೇಟ್‌ಗಳು ಪತ್ತೆಯಾಗಿವೆ. ಇವುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಮಾರಾಟ ಮಾಡಲಾಗುತ್ತಿತ್ತು. ಉತ್ತರ ಭಾರತದಿಂದ ಇವುಗಳನ್ನು ತರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಾಶಕ್ತಿ ಮುನಕ್ಕಾ, ಬಮ್ಬಮ್ ಮುನೆಕ್ಕಾವಟಿ, ಪಾವರ್ ಮುನಕ್ಕಾವಟಿ ಹಾಗೂ ಆನಂದ ಚೂರ್ಣ ಹೆಸರಿನಲ್ಲಿ ಈ ಚಾಕ್ಲೇಟ್‌ಗಳು ಪತ್ತೆಯಾಗಿವೆ. ಒಂದು ಚಾಕ್ಲೇಟ್‌ಗೆ 30 ರೂಪಾಯಿನಂತೆ ಮಾರಾಟ ಮಾಡಲಾಗುತ್ತಿತ್ತು. ಮೂರು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಇಟ್ಟಿದ್ದ ಸುಮಾರು 48,000 ಮೌಲ್ಯದ ಚಾಕೋಲೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಕಾರ್ ಸ್ಟ್ರೀಟ್‌ನಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವರ್ಷಕ್ಕೊಮ್ಮೆ ರಥ ಸಪ್ತಮಿಯ ದಿನ ರಥೋತ್ಸವವಾಗುತ್ತದೆ. ರಥೋತ್ಸವದ ನಂತರದ ದಿನ ಕಲರ್ ಫುಲ್ ಓಕುಳಿ ಆಟದಲ್ಲಿ ಭರ್ಜರಿ ಡ್ಯಾನ್ಸ್ ಕುಣಿತ ಹಾಕುತ್ತಿದ್ದ ಯುವಕ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡ ಈ ಆರೋಪಿಗಳು ಅವರಿಗೆ ಬಾಂಗ್ ಮಾರಾಟ ಮಾಡುತ್ತಿದ್ದರು.

suddiyaana