ಜುಲೈ 27ಕ್ಕೆ ರಸ್ತೆಗಿಳಿಯಲ್ಲ ಆಟೋ, ಕ್ಯಾಬ್, ಖಾಸಗಿ ಬಸ್ – ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್‌ಗೆ ಕರೆ

ಜುಲೈ 27ಕ್ಕೆ ರಸ್ತೆಗಿಳಿಯಲ್ಲ ಆಟೋ, ಕ್ಯಾಬ್, ಖಾಸಗಿ ಬಸ್ – ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್‌ಗೆ ಕರೆ

ಜುಲೈ 27ಕ್ಕೆ ಖಾಸಗಿ ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗಳು ಓಡಾಡಲು ಲಭ್ಯವಿರುವುದಿಲ್ಲ. ಹೀಗಾಗಿ ಮುಂದಿನ ಗುರುವಾರ ಆಟೋ, ಕ್ಯಾಬ್‌ಗಳನ್ನು ಅವಲಂಬಿಸಿ ಹೊರಗೆ ಹೊರಡುವವರು ಬೇರೆ ಪ್ಲಾನ್ ಮಾಡಿಕೊಳ್ಳಲೇಬೇಕು. ಯಾಕೆಂದರೆ ಜುಲೈ 27ಕ್ಕೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಬಸ್‌, ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.

ಇದನ್ನೂ ಓದಿ: ಬೆಂಗಳೂರಿನ ಶಂಕಿತ ಉಗ್ರರಿಗೆ ವಿದೇಶದಿಂದ ಫಂಡ್ – ತನಿಖೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸುವ ಸತ್ಯ

ರಾಜ್ಯ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯನ್ನು ಜಾರಿಗೆ ತಂದಿದೆ.   ಇದರಿಂದ ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್‌ಗಳಿಗೆ ದೊಡ್ಡ ಮಟ್ಟದ ತೊಂದರೆ ಉಂಟಾಗಿದೆ ಅನ್ನೋ ಆರೋಪ ಖಾಸಗಿ ಸಾರಿಗೆ ಮಾಲೀಕರದ್ದು. ಹೀಗಾಗಿ ಇದೇ ಜುಲೈ 26ರ ಮಧ್ಯರಾತ್ರಿಯಿಂದ ಜುಲೈ 27ರ ಮಧ್ಯರಾತ್ರಿವರೆಗೆ ಶಕ್ತಿ ಯೋಜನೆ ವಿರೋಧಿಸಿ ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇವೆ ಜೊತೆಗೆ ಖಾಸಗಿ ಬಸ್‌ಗಳು ಕೂಡ ಸೇವೆ ನಿಲ್ಲಿಸಲಿವೆ. ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದೆ. ಇನ್ನು ಬಂದ್ ಕುರಿತು ಮಾತನಾಡಿದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ‘ ಜುಲೈ 26 ನೇ ತಾರೀಖು ಮಧ್ಯರಾತ್ರಿ 12 ಗಂಟೆಯಿಂದ 27 ನೇ ತಾರೀಖು ರಾತ್ರಿ 12 ಗಂಟೆಯವರೆಗೂ ಆಟೋ, ಟ್ಯಾಕ್ಸಿ, ಓಲಾ, ಊಬರ್ ಯಾವುದೇ ವೆಹಿಕಲ್ ಓಡಾಟ ಮಾಡಲ್ಲ. ಇವತ್ತು ಖಾಸಗಿ ಸಾರಿಗೆಯ ಮಾಲೀಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಹಾಗಾಗಿ ಸರ್ಕಾರದ ಗಮನ ಸೆಳೆಯುತ್ತೇವೆ. ಅಂದು ಖಾಸಗಿ ಬಸ್‌ಗಳು ಕೂಡ ಓಡಾಟ ಮಾಡಲ್ಲ ಎಂದರು.

suddiyaana