ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ..! – ಪ್ರಶ್ನೆ ಮಾಡಿದವರಿಗೆ ಇದೇ ಸ್ಥಿತಿ.. – ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ..! – ಪ್ರಶ್ನೆ ಮಾಡಿದವರಿಗೆ ಇದೇ ಸ್ಥಿತಿ.. – ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಭಾರಿ ಹೈಡ್ರಾಮ ನಡೆದಿತ್ತು. ಸದನದಲ್ಲಿ ಬಿಜೆಪಿ ನಾಯಕರು ಸ್ಪೀಕರ್ ಪೀಠದ ಮೇಲೆ ಬಿಲ್ ಪ್ರತಿ ಹರಿದು ಸ್ಪೀಕರ್‌ ಮುಖದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಸದನಕ್ಕೆ ಅಗೌರವ ತೋರಿಸ ಹಿನ್ನೆಲೆ ಬಿಜೆಪಿಯ 10 ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿತ್ತು. ಸದನದಿಂದ ಶಾಸಕರನ್ನು ಅಮಾನತುಗೊಳಿಸಿರುವುದಕ್ಕೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.  ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಪ್ರಜಾಪ್ರಭುತ್ವದ ಬಗ್ಗೆ ವಿದೇಶಗಳಲ್ಲಿ ಸುಳ್ಳು ಮಾತನಾಡುವ ಕಾಂಗ್ರೆಸ್ ಪಕ್ಷದ ಆಡಳಿತವಿರುವ ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನೇ ದಮನಿಸುವ ಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಶಂಕಿತ ಉಗ್ರರಿಗೆ ವಿದೇಶದಿಂದ ಫಂಡ್ – ತನಿಖೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸುವ ಸತ್ಯ

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಅರ್ಹತೆ ಇಲ್ಲದ ಅಸಮರ್ಥ ಕಾಂಗ್ರೆಸ್ ಸರ್ಕಾರ ಪ್ರಶ್ನೆ ಕೇಳುವುದಕ್ಕೆ ಅವಕಾಶ ಕೊಡದೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿದೆ.‌ ಖಾಸಗಿ ರಾಜಕೀಯ ಕಾರ್ಯಕ್ರಮಕ್ಕೆ ಅನೈತಿಕವಾಗಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಹೇಗೆ..?  ಬಂಧಿತ ಐವರು ಉಗ್ರರ ವಿರುದ್ಧ ಪ್ರೈಮಾಫೇಸಿ ಸಾಕ್ಷಿಗಳಿದ್ದರೂ ಗೃಹ ಸಚಿವರು ಕ್ಲೀನ್ ಚೀಟ್ ಕೊಟ್ಟಿದ್ದೇಕೆ..? ಮುಂಗಾರು ಕೈಕೊಟ್ಟು ಕಂಗಾಲಾದ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. 42 ರೈತರು ಸಾವಿಗೆ ಶರಣಾಗಿದ್ದಾರೆ. ಸರಕಾರದ ಕ್ರಮಗಳೇನು ಎಂದು ಪ್ರಶ್ನಿಸಿದೆ.

ಕಾನೂನು ಸುವ್ಯವಸ್ಥೆ ಹದಗೆಟ್ಟು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಶೇಕಡಾ 35 ರಷ್ಟು ಕ್ರೈಮ್ ರೇಟ್ ಹೆಚ್ಚಾಗಿದೆ. ಗೃಹ ಸಚಿವರು ಮಾಡುತ್ತಿರುವುದಾದರೂ ಏನು..? ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಗದ್ದುಗೆ ಹಿಡಿದು ಇದೀಗ ಕಂಡೀಷನ್ ಹಾಕಿದ್ದು ಅಲ್ಲದೆ, ಅದನ್ನು ಜಾರಿ ಮಾಡದೆ ಕಾಲ ಹರಣ ಮಾಡುತ್ತಿರುವುದು ಏಕೆ..? ತರಕಾರಿ, ಹಾಲು, ವಿದ್ಯುತ್, ನೀರು ಹೀಗೆ ಎಲ್ಲಾ ಬೆಲೆಗಳನ್ನು ಏರಿಸುತ್ತಾ ಜನರ ರಕ್ತವನ್ನು ಹೀರುತ್ತಿರುವುದು ಏಕೆ.. ? ನೂರಾರು ಕೋಟಿ ಕೈಬದಲಾಗಿರುವ ಶ್ಯಾಡೋ ಸಿಎಂ  ನೇತೃತ್ವದ ವರ್ಗಾವಣೆ ದಂಧೆಗೆ ಕೊನೆ ಎಂದು ಎಂಬುದಾಗಿ ಪ್ರಶ್ನೆಗಳ ಸುರಿಮಳೆ ಸುರಿಸಿದೆ.

ಸರಕಾರಿ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ಮಾಡುವ, ಟಾರ್ಗೆಟ್ ನೀಡುವ ಅಧಿಕಾರ ಸುರ್ಜೇವಾಲಾರಿಗೆ ಕೊಟ್ಟಿದ್ದು ಯಾರು..?  ಕಲುಷಿತ ನೀರು ಪೂರೈಕೆ, ಬಿಸಿಯೂಟದಲ್ಲಿ ವಿಷಪ್ರಾಶನ, ಕೊಳೆತ ಮೊಟ್ಟೆಗಳನ್ನು ಕೊಟ್ಟು ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುತ್ತಿರುವುದು ಏಕೆ..?  ರೈತ ವಿರೋಧಿ, ಜನ ವಿರೋಧಿ, ನಾಡ ವಿರೋಧಿ, ಧರ್ಮ ವಿರೋಧಿ ನಿಲುವುಗಳನ್ನು ಕೈಗೊಂಡು ಏನನ್ನು ಸಾಧಿಸಲು ಹೊರಟಿದ್ದೀರಿ..? ಸರಕಾರ ಬಂದು ಕೇವಲ 2 ತಿಂಗಳಲ್ಲಿ ನೂರೆಂಟು ಸಮಸ್ಯೆಗಳು, ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ ಎಂದು ಬಿಜೆಪಿ ಕಿಡಿಕಾರಿದೆ.

ಇನ್ನೂ ಶಾಸಕರನ್ನು ಸದನದಿಂದ ಅಮಾನತು ಮಾಡಿರುವ ಹಿನ್ನೆಲೆ ರಾಜ್ಯ ಬಿಜೆಪಿ ಕಾರ್ಟೂನ್‌ ಅನ್ನು ಪೋಸ್ಟ್‌ ಮಾಡಿದೆ. ಕಾಂಗ್ರೆಸ್ ಈ ಪ್ರಶ್ನೆಗಳಿಂದ ದೂರ ಓಡುತ್ತಿದೆ, ಪ್ರಶ್ನಿಸುವ ನಮ್ಮ ಶಾಸಕರನ್ನು ಅಮಾನತು ಮಾಡಿ ಪ್ರಜಾಪ್ರಭುತ್ವವನ್ನು ದಮನಿಸುತ್ತಿದೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲಾಗುತ್ತಿದೆ ದಾಳಿ..! ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.  ಅಷ್ಟೇ ಅಲ್ಲದೇ ಟ್ವಿಟರ್‌ ಖಾತೆಯ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದೆ. ಕಾಂಗ್ರೆಸ್‌ ತುಘಲಕ್‌ ಸರ್ಕಾರಕ್ಕೆ ಧಿಕ್ಕಾರ.. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಅಂತಾ ಶೀರ್ಪಿಕೆ ನೀಡಿ ಕಪ್ಪು ಬಣ್ಣದ ಫೋಟೋ  ಹಾಕಿದೆ.

suddiyaana