ಸೌಜನ್ಯ ಪ್ರಕರಣದ ಬಗ್ಗೆ ಮೌನ ಮುರಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ..!

ಸೌಜನ್ಯ ಪ್ರಕರಣದ ಬಗ್ಗೆ ಮೌನ ಮುರಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ..!

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಚರ್ಚೆ ಶುರುವಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹಾಗೂ ಕುಟುಂಬಸ್ಥರ ವಿರುದ್ಧ ಆರೋಪವೂ ಜೋರಾಗಿಯೇ ಕೇಳಿಬರುತ್ತಿದೆ. ಈ ಬಗ್ಗೆ ಇಷ್ಟು ಸಮಯ ಮೌನವಾಗಿದ್ದ ವಿರೇಂದ್ರ ಹೆಗ್ಗಡೆ ಇದೀಗ ಮೌನ ಮುರಿದಿದ್ದಾರೆ. ಸೌಜನ್ಯ ಪ್ರಕರಣ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಜೈನ ಮುನಿ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ – ಸದನದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಇತ್ತೀಚೆಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಚರ್ಚೆ ಶುರುವಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧವೂ ಆರೋಪ ಕೇಳಿಬಂದಿದೆ. ಕೊನೆಗೂ ಈ ಪ್ರಕರಣದ ಬಗ್ಗೆ ಡಾ. ಡಿ ವಿರೇಂದ್ರ ಹೆಗ್ಗಡೆಯವರು ಮೌನ ಮುರಿದಿದ್ದಾರೆ. ಈ ಕುರಿತು ಮಾತನಾಡಿದ ವೀರೇಂದ್ರ ಹೆಗ್ಗಡೆಯವರು ಎಚ್ಚರಿಕೆ ಸಂದೇಶವನ್ನು ಕೂಡಾ ನೀಡಿದ್ದಾರೆ. ಧರ್ಮಸ್ಥಳ ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಕ್ಷೇತ್ರದ ವತಿಯಿಂದ ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಸಮಾಜದಲ್ಲಿ ಒಳ್ಳೆಯ ಕೆಲಸ ಅನ್ನೋದು ಎರಡು ಬದಿಯ ಕತ್ತಿ ಇದ್ದ ಹಾಗೆ.  ಎರಡೂ ಕಡೆಯಿಂದಲೂ ಕೊಯ್ಯುತ್ತದೆ. ಪ್ರಚಾರದ ದೃಷ್ಟಿಯಿಂದ ಒಳ್ಳೆಯದು. ಆದರೆ ದ್ವೇಷ ಸೃಷ್ಟಿಸುತ್ತದೆ. ಈ ಪ್ರಕರಣದ ಹಿಂದೆ ದ್ವೇಷ,ಅಸೂಯೆ ಕಾರಣ. ಧರ್ಮಸ್ಥಳ ಹೆಸರಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿದೆ. ಇದು ಹಲವರಲ್ಲಿ ದ್ವೇಷದ ವಿಷ ಬೀಜ ಬಿತ್ತಿದೆ ಎಂದು ಹೆಗ್ಗಡೆ ಹೇಳಿದ್ದಾರೆ. ಧರ್ಮಸ್ಥಳದ ಸಂಪತ್ತನ್ನು ಹೇಗೆ ಬಳಸ್ತೇವೆ ಅನ್ನೋದರ ಮೇಲೆ ಪರಿಣಾಮ ಇದೆ. ನಮ್ಮ ಮೇಲೆ ಮಾಡುತ್ತಿರುವ ಆರೋಪಗಳಿಗೂ ನಮಗೂ ಸಂಬಂಧವಿಲ್ಲ. ಸೌಜನ್ಯ ಪ್ರಕರಣವನ್ನು ತನಿಖೆ ಮಾಡಲು  ಮೊದಲು ಸರ್ಕಾರಕ್ಕೆ ಪತ್ರ ಬರೆದಿದ್ದು ನಾನು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ, ಸಂಶೋಧನೆ ನಡೆಯಲಿ. ಇದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೆಗ್ಗಡೆ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಕ್ಷೇತ್ರದ ವಿಚಾರವನ್ನು ಯಾಕೆ ಎಳೆದು ತರುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ. ಇದು ಕೇವಲ ಅಮಾಯಕ ಹುಡುಗಿಯ ಸಾವಿನ ವಿಚಾರವಲ್ಲ. ಇದರ ಹಿಂದೆ ಕ್ಷೇತ್ರದ ವಿಚಾರವಿದೆ. ನನಗೆ ಯಾವುದೇ ಭಯ, ಸಂಕೋಚ, ಸಂದೇಹ ಇಲ್ಲ. ನಮ್ಮ ವಿರುದ್ಧ ಶತುೃತ್ವಕ್ಕೆ ಕಾರಣ ಏನು? ನಮ್ಮ ಮೇಲೆ ಸತತ ಆರೋಪ ಮಾಡುತ್ತಿದ್ದರೂ ನಾವು ಸುಮ್ಮನಿದ್ದೇವೆ ಎಂದು ಮತ್ತಷ್ಟು ಆರೋಪ ಮಾಡಲಾಗುತ್ತದೆ. ನಾವು ಸುಮ್ಮನಿದ್ದೇವೆ ಅನ್ನೋದೇ ಒಂದು ಸಂಭಾಷಣೆ ಆಗಬಾರದು ಅನ್ನೋ ಕಾರಣಕ್ಕೆ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಒಳ್ಳೆಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆ ಬಂದ ಮೋಡ ಇದು.  ಈ ಪರದೆ ತೆಗೆಯಬೇಕು. ಅದನ್ನು ದೇವರು ತೆಗೆಯುತ್ತಾನೆ. ನಿಮ್ಮ ಶಿಸ್ತು, ನಿಯಮ ಮೀರಬೇಡಿ. ನನಗೆ ಯಾವ ಭಯವೂ ಇಲ್ಲ. ವೈಯುಕ್ತಿಕ ಅವಮಾನ, ವೈಯುಕ್ತಿಕ ಸಂಭಾಷಣೆ ಸರಿಯಲ್ಲ. ಇದನ್ನು ನಿಲ್ಲಿಸಬೇಕು. ನಮ್ಮ ಅಭಿಮಾನಿಗಳು ಏನು ಬೇಕಾದರು ಮಾಡಲು ರೆಡಿ ಇದ್ದಾರೆ. ಆದರೆ ನಾನು ಅವರಿಗೆ ಏನೂ ಮಾಡದಂತೆ ಸಂಯಮ ಪಾಲಿಸಲು ಮನವಿ ಮಾಡಿದ್ದೇನೆ. ನೈತಿಕ ಶಕ್ತಿ ದೊಡ್ಡು ಎಂದು ಅವರಿಗೆ ಹೇಳಿದ್ದೇನೆ ಎಂದು ಹೆಗ್ಗಡೆ ಹೇಳಿದ್ದಾರೆ.

suddiyaana