ಬಿಎಂಟಿಸಿ ಎಸಿ ಬಸ್‌ನಲ್ಲಿ ಸೊಳ್ಳೆ ಕಾಟ! – ʼಸೊಳ್ಳೆಗೆ ಮುಕ್ತಿ ಕೊಡಿಸಿ ಎಂದ ಪ್ರಯಾಣಿಕ
ಬೆಂಗಳೂರು: ಎಲ್ಲಿ ಹೋದ್ರೂ ಸೊಳ್ಳೆ ಕಾಟ ತಪ್ಪಲ್ಲ. ಕೂತಲ್ಲಿ.. ನಿಂತಲ್ಲಿ.. ಎಲ್ಲಾ ಕಡೆ ಬಂದು ಕಚ್ಚುತ್ತೆ. ಇದರಿಂದಾಗಿ ಕಿರಿಕಿರಿಯಾಗುವುದು ಸಹಜ. ಇದರ ಕಾಟದಿಂದ ತಪ್ಪಿಸಿಕೊಳ್ಳುವುದು ಬಲು ಕಷ್ಟ. ಇನ್ನೂ ಎಸಿ ಬಸ್ಸುಗಳಲ್ಲಿ ಸೊಳ್ಳೆ ಸೇರಿಕೊಂಡರೆ ಹೇಗಿರುತ್ತದೆ. ಪ್ರಯಾಣಿಕರ ಪರದಾಟ ಕೇಳಬೇಕೆ? ಇಲ್ಲೂ ಕೂಡ ಪ್ರಯಾಣಿಕರೊಬ್ಬರು ಎಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಸೊಳ್ಳೆಯ ಕಾಟದಿಂದ ಕಿರಿಕಿರಿ ಅನುಭವಿಸಿದ್ದಾರೆ.
ಇದನ್ನೂ ಓದಿ: ಉದ್ಯಮಿ ಕಾರಿನಲ್ಲಿದ್ದಾಗ ನಾಗರಹಾವು ಬಿಟ್ಟರು – ಗೆಳತಿಯ ‘ವಿಷಜಾಲ’ಕ್ಕೆ ಪ್ರಾಣ ಬಿಟ್ಟ ಅಮಾಯಕ..!
ಎಸಿ ಬಸ್‍ನಲ್ಲಿ ಹೊರಗಿನ ಗಾಳಿ ಒಳ ಬಂದರೂ ಅದು ನಿಯಂತ್ರಿತವಾಗಿರುತ್ತದೆ. ನೇರವಾಗಿ ಕಿಟಕಿ ತೆಗೆಯುವ ಆಯ್ಕೆ ಸಾಧಾರಣವಾಗಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಒಳಗೆ ಸೊಳ್ಳೆಗಳಿದ್ದರೆ ಹೇಗೆನಿಸಬಹುದು? ತುಂಬಾ ಕಿರಿಕಿರಿ ಉಂಟಾಗುತ್ತದೆ. ಜನಜಂಗುಳಿಯಿಂದ ಕೂಡಿದ್ದ ಬಸ್‌ನಲ್ಲಿ ಸೊಳ್ಳೆಗೆ ಹೊಡೆಯಲು ಹೋದರೆ, ಸೊಳ್ಳೆಗೆ ಕೊಟ್ಟ ಪೆಟ್ಟು ಬೇರೆ ಪ್ರಯಾಣಿಕರಿಗೆ ಬೀಳುವ ಸಾಧ್ಯತೆ ಇರುತ್ತದೆ. ಇದೀಗ ಬೆಂಗಳೂರಿನಲ್ಲಿ ಬಿಎಂಟಿಸಿ ಎಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ಸೊಳ್ಳೆಯೊಂದು ಕಿರಿಕ್ ಮಾಡಿದೆ. ತೊಂದರೆ ಕೊಟ್ಟ “ಸೊಳ್ಳೆಗೆ ಮುಕ್ತಿ ಕೊಡಿಸಿ”ಅದರ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
@SocialCop ಎನ್ನುವ ಟ್ವಿಟರ್ ಖಾತೆಯಲ್ಲಿ ಬಳಕೆದಾರರೊಬ್ಬರು ಟಿಕೆಟ್‍ನ ಫೋಟೊ, ತನಗೆ ಕಾಟ ಕೊಟ್ಟ ಸೊಳ್ಳೆಯನ್ನು ಸಾಯಿಸಿದ ಸೊಳ್ಳೆಯ ಫೊಟೋ ಸಮೇತ ಸೊಳ್ಳೆಗೆ ಮುಕ್ತಿ ಕೊಡಿಸಿ ಎಂದು BMTCಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ.
ಈ ಫೋಟೊದಲ್ಲಿ ತನ್ನ ಬೆರಳ ಮೇಲೆ ಸಾಯಿಸಿದ ಸೊಳ್ಳೆ ಮತ್ತು ಪ್ರಯಾಣದ ಟಿಕೆಟ್ ಫೋಟೋವನ್ನೂ ಪ್ರಯಾಣಿಕ ಟ್ವೀಟರ್ನಲ್ಲಿ ಜುಲೈ 7ರಂದು ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇ ಸಂದರ್ಭ ಟ್ವೀಟ್‍ನಲ್ಲಿ, ಕಾಂಗ್ರೆಸ್ ಸರ್ಕಾರ ಬಿಎಂಟಿಸಿ ಎಸಿ ಬಸ್ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೋಷಿಸಿದೆಯಾ? ಎಂದು ಪ್ರಶ್ನಿಸಲಾಗಿದೆ.