ಉದ್ಯಮಿ ಕಾರಿನಲ್ಲಿದ್ದಾಗ ನಾಗರಹಾವು ಬಿಟ್ಟರು – ಗೆಳತಿಯ ‘ವಿಷಜಾಲ’ಕ್ಕೆ ಪ್ರಾಣ ಬಿಟ್ಟ ಅಮಾಯಕ..!

ಉದ್ಯಮಿ ಕಾರಿನಲ್ಲಿದ್ದಾಗ ನಾಗರಹಾವು ಬಿಟ್ಟರು – ಗೆಳತಿಯ ‘ವಿಷಜಾಲ’ಕ್ಕೆ ಪ್ರಾಣ ಬಿಟ್ಟ ಅಮಾಯಕ..!

ಕಾರಿನಲ್ಲಿ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದರು. ಪೊಲೀಸರು ಕೂಡಾ ಇದೊಂದು ಅನುಮಾನಸ್ಪದ ಸಾವು ಇರಬಹುದು. ಬಹುಶಃ ವಿಷಾನಿಲದಿಂದ ಸಾವು ಆಗಿರಬಹುದು ಎಂದುಕೊಂಡಿದ್ದರು. ಆದರೆ, ಯಾವಾಗ ಆ ಉದ್ಯಮಿಯ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂತೋ ಅಲ್ಲಿಂದ ಖಾಕಿಟೀಮ್ ಫುಲ್ ಅಲರ್ಟ್ ಆದರು. ಈ ಸಾವಿನ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್ ಮೇಲೆ ಶಾಕ್ ಕಾದಿತ್ತು. ಒಬ್ಬ ವ್ಯಕ್ತಿಯನ್ನು ಹೀಗೂ ಸಾಯಿಸ್ತಾರಾ ಎಂದು ಸ್ವತಃ ಪೊಲೀಸರೇ ಅಚ್ಚರಿಪಡುವಂತಾಗಿತ್ತು.

ಇದನ್ನೂ ಓದಿ: ಉದ್ಯಮಿಯಿಂದ ಹಣ ಕೀಳಲು ರೇಪ್ ಕೇಸ್ ಡ್ರಾಮಾ – ಗುಪ್ತಾಂಗಕ್ಕೆ ಕೋಳಿ ರಕ್ತ ಹಚ್ಚಿಕೊಂಡ ಚಾಲಾಕಿ ಹೆಣ್ಣಿನ ಬಣ್ಣ ಬಯಲು..!

ಜುಲೈ15 ರಂದು ಉತ್ತರಖಾಂಡ್‌ನ ತೀನ್ಪಾನಿ ಪ್ರದೇಶದ ಬಳಿ 30 ವರ್ಷದ ಅಂಕಿತ್ ಚೌಹಾಣ್ ಎಂಬವರ ಶವ ಕಾರಿನೊಳಗೆ ಪತ್ತೆಯಾಗಿತ್ತು. ಮೃತರ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರೇ ಗಾಬರಿಯಾಗಿದ್ದರು. ಯಾಕೆಂದರೆ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಅಂಕಿತ್ ಚೌಹಾಣ್ ಹಾವಿನ ವಿಷ ಸೇರಿ ಮೃತಪಟ್ಟಿದ್ದು ತಿಳಿದು ಬಂದಿತ್ತು. ಬಳಿಕ  ಪೊಲೀಸರು ತನಿಖೆ ಮಾಡುವ ವೇಳೆ ಮೊಬೈಲ್ ಪರಿಶೀಲಿಸಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಅಂಕಿತ್ ಚೌಹಾಣ್ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು. ಬಳಿಕ ಮಹಿಳೆಯ ಕರೆಯ ವಿವರಗಳನ್ನು ಆಧರಿಸಿ ಆಕೆಯ ಫೋನ್ ಟ್ರ್ಯಾಕ್ ಮಾಡಲಾಗಿದೆ. ಈ ವೇಳೆ ಮಹಿಳೆ ಹಾವಾಡಿಗನನ್ನು ಸಂಪರ್ಕಿಸಿರುವುದು ತಿಳಿದು ಬಂದಿದೆ. ಅಲ್ಲದೇ ಆರಂಭದಲ್ಲಿ ಕಾರಿನಲ್ಲಿ ವಿಷಾನಿಲ ಹೊರ ಸೂಸುವಿಕೆಯಿಂದ ಈ ಸಾವು ಸಂಭವಿಸಿದೆ ಎಂದು ಊಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ನಂತರ ತನಿಖೆಯ ದಾರಿಯೇ ಬದಲಾಗಿತ್ತು. ಅಂಕಿತ್ ಮದ್ಯಪಾನದ ಅಮಲಿನಲ್ಲಿದ್ದಾಗ ಡಾಲಿಯನ್ನು ನಿಂದಿಸುತ್ತಿದ್ದ. ಇದರಿಂದ ಆಕ್ರೋಶಗೊಂಡಿದ್ದ ಡಾಲಿ ಈತನನ್ನು ಮುಗಿಸಲು ಹಾವಾಡಿಗನ ಸಹಾಯ ಪಡೆದದ್ದಳು. ಹಾವಾಡಿಗನ ಸಹಾಯದಿಂದ ಡಾಲಿ ಮತ್ತು ಈಕೆಯ ಸ್ನೇಹಿತ ನಾಗರಹಾವು ಕಚ್ಚಿಸಿ ಅಂಕಿತ್‌ನನ್ನು ಕೊಲೆ ಮಾಡಿದ್ದರು. ಅಲ್ಲದೇ ಆತ ಅಮಲಿನಲ್ಲಿದ್ದಾಗಲೇ ಈ ಹತ್ಯೆಯಾಗಿದೆ ಎಂದು ಬಂಧಿತ ಹಾವಾಡಿಗ ರಮೇಶ್ ನಾಥ್ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ. ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಡಾಲಿ ಆರ್ಯ ಹಾಗೂ ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ತಲೆ ಮರೆಸಿಕೊಂಡಿದ್ದಾರೆ.

ಈ ಸಂಬಂಧ ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ ಆರೋಪ) ಅಡಿಯಲ್ಲಿ ಐವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

suddiyaana