ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ದೊಡ್ಡ ಸಂಚು – ಐವರು ಶಂಕಿತ ಉಗ್ರರನ್ನ ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ದೊಡ್ಡ ಸಂಚು – ಐವರು ಶಂಕಿತ ಉಗ್ರರನ್ನ ಬಂಧಿಸಿದ ಸಿಸಿಬಿ ಪೊಲೀಸರು

ಐಟಿ ಸಿಟಿ, ಉದ್ಯಾನನಗರಿ, ಸಿಲಿಕಾನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿಗೆ ನಿತ್ಯ ಲಕ್ಷಾಂತರ ಜನ ಬರುತ್ತಾರೆ ಹೋಗುತ್ತಾರೆ. ಕೋಟ್ಯಂತರ ಜನ ಹೊರಗಿನಿಂದ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಇದೇ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು ನಡೆದಿತ್ತು ಅನ್ನೋ ಸ್ಫೋಟಕ ರಹಸ್ಯ ಬಯಲಾಗಿದೆ.

ಸಿಸಿಬಿ ಪೊಲೀಸರು (CCB Police) ರೋಚಕ ಆಪರೇಷನ್ ಮಾಡಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು (Suspected Terrorists Arrested) ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್, ಜೀವಂತ ಗುಂಡು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್​ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕೆಲವು ಪ್ರಮುಖ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ತಯಾರಿ ಮಾಡಿದ್ದವರನ್ನು ಬಂಧಿಸಲಾಗಿದೆ. ಇದರೊಂದಿಗೆ ಅವರ ಪ್ಲ್ಯಾನ್​ ವಿಫಲಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಕ್ಕಳ ಶುಲ್ಕ ಭರಿಸಲು ಸಾಧ್ಯವಾಗದೇ ಅಮ್ಮನ ಹತಾಶೆ – ಸತ್ತರೆ ಪರಿಹಾರ ಸಿಗಬಹುದು ಎಂದು ಬಸ್‌ಗೆ ಅಡ್ಡಬಂದು ಪ್ರಾಣಬಿಟ್ಟ ತಾಯಿ..!

ಹಾಗೇ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಐದು ಜನರ ಮನೆ ಮೇಲೆ ದಾಳಿ ಮಾಡಲಾಗಿದ್ದು, ಏಳು ಪಿಸ್ತೂಲ್ 45 ಗುಂಡು, ಹನ್ನೆರಡು ಮೊಬೈಲ್ ಫೋನ್, ಡ್ಯಾಗರ್, ವಾಕಿ ಟಾಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಬಂಧಿತರು ಬೆಂಗಳೂರು ನಗರದಲ್ಲಿ ಕೃತ್ಯವೆಸಗಲು ಪ್ಲ್ಯಾನ್​​ ಮಾಡಿದ್ದರು. ವಿದೇಶದಿಂದ ವಿಧ್ವಂಸಕ ಕೃತ್ಯಕ್ಕೆ ವಿದೇಶದಿಂದ ಫಂಡಿಂಗ್ ಆಗುತ್ತಿತ್ತು ಎಂದು ಆತಂಕಕಾರಿ ವಿಚಾರ ತಿಳಿಸಿದ್ದಾರೆ.

ಇನ್ನು 2008ರಲ್ಲಿ ನಡೆದಿದ್ದ ಸೀರಿಯಲ್ ಸ್ಫೋಟ ಆರೋಪಿ ನಸೀರ್​ ಸಂಚು ರೂಪಿಸಿದ್ದ. ಟಿ.ನಸೀರ್​​​ ಹಾಗೂ ಜುನೈದ್ ಈ ಪ್ರಕರಣದ ಮಾಸ್ಟರ್ ಮೈಂಡ್​ಗಳಾಗಿದ್ದು, ಸದ್ಯ ಟಿ.ನಸೀರ್​ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾನೆ. 2008 ರ ಸೀರಿಯಲ್ ಬ್ಲಾಸ್ಟ್ ಕೇಸ್ ನ ಅರೋಪಿ ಟಿ ನಜೀರ್ ಎಲ್ ಇ ಟಿ ಸಂಘಟನೆಗೆ ಸೇರಿದ್ದವನು. ಈ ಶಂಕಿತರ ಉಗ್ರರು ಕೃತ್ಯವೆಸಗಲು ವಿದೇಶದಿಂದ ಹಣ ಬಂದಿದೆ. ಆರೋಪಿಗಳಿಗೆ ಆನ್​ಲೈನ್ ಹಾಗೂ ನಗದು ರೂಪದಲ್ಲಿ ಹಣ ಪೂರೈಕೆಯಾಗಿದೆ. ಈ ಬಗ್ಗೆ ಐವರು ಆರೋಪಿಗಳನ್ನು 15 ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ  ಎಂದು ಹೇಳಿದರು.

suddiyaana