ಬಿಜೆಪಿ ಹಣಿಯಲು ಪಣ ತೊಟ್ಟ ‘INDIA’ – ‘ಲೋಕ’ಸಮರಕ್ಕೆ ವಿಪಕ್ಷಗಳಿಂದ ಹಲವು ನಿರ್ಣಯ

ಬಿಜೆಪಿ ಹಣಿಯಲು ಪಣ ತೊಟ್ಟ ‘INDIA’ – ‘ಲೋಕ’ಸಮರಕ್ಕೆ ವಿಪಕ್ಷಗಳಿಂದ ಹಲವು ನಿರ್ಣಯ

ಬಿಜೆಪಿ ಎಂಬ ಹೆಮ್ಮರವನ್ನ ಅಲುಗಾಡಿಸಲು ವಿಪಕ್ಷಗಳೆಲ್ಲಾ ಒಗ್ಗಟ್ಟಿನ ಬಲಪ್ರಯೋಗಕ್ಕೆ ಮುಂದಾಗಿವೆ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ 26 ಪಕ್ಷಗಳ 80ಕ್ಕೂ ಹೆಚ್ಚು ನಾಯಕರು ಈಗ ಕೈ ಜೋಡಿಸಿದ್ದಾರೆ. ಬಿಜೆಪಿ ಮತ್ತು ಮೋದಿಯನ್ನ ಹಣಿಯಲು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ 2 ದಿನ ಭರ್ಜರಿ ತಂತ್ರಗಾರಿಕೆ ಮಾಡಿದ್ದಾರೆ.  ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಕೂಡ ಮಾಡಿದ್ದಾರೆ. ಇಂಡಿಯಾ ಅಂದ್ರೆ Indian National Democratic Inclusive Alliance ಎಂದು ಪೂರ್ತಿ ಹೆಸರು. ಕನ್ನಡದಲ್ಲಿ ಹೇಳೋದಾದ್ರೆ ಭಾರತ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಂತರ್ಗತ ಒಕ್ಕೂಟ. ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರು ಚರ್ಚೆ ನಡೆಸಿ ಹಲವು ನಿರ್ಣಯಗಳನ್ನ ಕೈಗೊಂಡಿದ್ದಾರೆ.

ಇದನ್ನೂ ಓದಿ : ವರ್ಗಾವಣೆ ದಂಧೆಯಲ್ಲಿ 500 ಕೋಟಿ ರೂಪಾಯಿ ವ್ಯವಹಾರ..! – ಸರ್ಕಾರದ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ

ಒಕ್ಕೂಟದ ಉದ್ದೇಶ & ಗುರಿ ಸಾಧನೆಗೆ ಸಾಮೂಹಿಕ ಸಂಕಲ್ಪ ಮಾಡಬೇಕು. ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಒಂದಾಗಬೇಕು. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯ ಮಾಡಿದ್ರು. ಹಾಗೇ ಲೋಕಸಭೆಗೆ ಒಟ್ಟಾಗಿ ಸ್ಪರ್ಧೆ, ಸೀಟು ಹಂಚಿಕೆ ಸಂಬಂಧ ರಾಜ್ಯವಾರು ಸಮಿತಿಗಳ ರಚನೆ, ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ? ಸೀಟು ಹಂಚಿಕೆಗಾಗಿ ಪ್ರತ್ಯೇಕ ಸಮಿತಿ ಮಾಡಲು ತೀರ್ಮಾನ ಮಾಡಲಾಯ್ತು. ಹಾಗೇ ಸಾಮೂಹಿಕ ಸಂಕಲ್ಪಕ್ಕೆ ಸಮ್ಮತಿ ಸೂಚಿಸಿ 26 ಪಕ್ಷಗಳ ನಾಯಕರು ಸಹಿ  ಹಾಕಿದ್ರು. ಸಭೆ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ UPAಗೆ ಇಂಡಿಯಾ ಎಂದು ಮರುನಾಮಕ ಮಾಡಲಾಗಿದೆ. ಎನ್​ಡಿಎ ಸಭೆಯಲ್ಲಿ 30 ಪಕ್ಷಗಳು ಭಾಗಿಯಾಗಲಿವೆ ಎನ್ನಲಾಗಿದೆ. ಹಾಗಾದ್ರೆ ಆ 30 ಪಕ್ಷಗಳು ಎಲ್ಲಿವೆ ಎಂದು ತೋರಿಸಲಿ. ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಂಡಿವೆಯಾ? ನನ್ನ 52 ವರ್ಷಗಳ ಸಕ್ರಿಯ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದ ನಾಯಕರ ದನಿ ಹತ್ತಿಕ್ಕುವಂತಹ ಪ್ರತಿಕೂಲ ಪರಿಸ್ಥಿತಿಯನ್ನು ನಾನು ನೋಡೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ರು.

 

suddiyaana