ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲಿಯೇ ಮದ್ದು– ಇವುಗಳನ್ನು ಹಚ್ಚಿದರೆ ಕೂದಲ ಕಾಂತಿ ಹೆಚ್ಚಾಗುತ್ತದೆ!

ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲಿಯೇ ಮದ್ದು– ಇವುಗಳನ್ನು ಹಚ್ಚಿದರೆ ಕೂದಲ ಕಾಂತಿ ಹೆಚ್ಚಾಗುತ್ತದೆ!

ಇತ್ತೀಚೆಗೆ ಸಣ್ಣ ವಯಸ್ಸಿನವರಿಗೂ ಕೂದಲು ಬಿಳಿಯಾಗುವುದು ಸರ್ವೇ ಸಾಮಾನ್ಯವಾಗಿದೆ. ಕನ್ನಡಿ ಮುಂದೆ ನಿಂತು ಕೂದಲು ಬಿಳಿಯಾಗುತ್ತಿದೆಯಲ್ಲಾ ಅಂತಾ ಮಂಡೆಬಿಸಿ ಮಾಡಿಕೊಳ್ಳುತ್ತಾರೆ. ಕೂದಲು ಬಿಳಿಯಾಗಿದ್ದರೆ ಎಲ್ಲರೂ ನಗುತ್ತಾರೆ, ವಯಸ್ಸಾದವರಂತೆ ಕಾಣುತ್ತೇವೆ ಎಂದು ಕೂದಲು ಕಪ್ಪಾಗಲು ಮಾರುಕಟ್ಟೆಗಳಲ್ಲಿ ಸಿಗುವ ಹೇರ್‌ಡೈ ಹಚ್ಚಿಕೊಳ್ಳುತ್ತಾರೆ. ಕೆಮಿಕಲ್‌ ಮಿಶ್ರಿತ  ಹೇರ್‌ಡೈಗಳನ್ನು ನಿಮ್ಮ ಕೂದಲಿಗೆ ಹಾನಿಯುಂಟಾಗುತ್ತದೆ. ಇದ್ದ ನಾಲ್ಕೂ ಕೂದಲು ಉದುರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚರ್ಮದ ಅಲರ್ಜಿಯಿರುವವರಿಗೆ ಹೇರ್‌ಡೈನಿಂದಲೂ ಅಲರ್ಜಿಯಾಗುತ್ತದೆ.

ಇನ್ನು ಮಾರುಕಟ್ಟೆಯಲ್ಲಿ ಸಿಗುವ ಹೇರ್‌ ಡೈಗಳನ್ನು ಪದೇ ಪದೆ ಬಳಸುವುದರಿಂದ ಮುಖದ ಚರ್ಮ ವರ್ಷಗಳ ನಂತರ ಕಪ್ಪಾಗಬಹುದು. ಇದರಿಂದಾಗಿ ಮತ್ತೆ ಇನ್ನೊಂದು ರೀತಿಯ ಸಮಸ್ಯೆ ನಮ್ಮನ್ನ ಕಾಡಬಹುದು. ಹೀಗಾಗಿ ಬಿಳಿಕೂದಲನ್ನು ಸುಲಭವಾಗಿ ಕಪ್ಪಾಗಿಸಲು ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿದರೆ ಉತ್ತಮ.

ನೆಲ್ಲಿಕಾಯಿ

ನೆಲ್ಲಿಕಾಯಿ ಆಂಟಿಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ಯನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡುತ್ತದೆ. ಇದನ್ನು ಸೇವಿಸುವುದು ಅಥವಾ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಅನ್ವಯಿಸಿಕೊಳ್ಳುವುದರಿಂದಲೂ ಕೂದಲು ಕಪ್ಪಾಗಿಯೇ ಇರುವಂತೆ ಕಾಯ್ದುಕೊಳ್ಳಬಹುದು. ನೆಲ್ಲಿಕಾಯಿಯ ಕೆಲವು ತುಂಡು ಅಥವಾ ಚೂರುಗಳನ್ನು ತೆಂಗಿನ ಎಣ್ಣೆಯಲ್ಲಿ ಸೇರಿಸಿ ಬೇಯಿಸಬೇಕು. ಬಳಿಕ ಎಣ್ಣೆಯನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಮಿಶ್ರಣದ ಎಣ್ಣೆಯನ್ನು ವಾರಕ್ಕೊಮ್ಮೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಮದರಂಗಿ/ಗೋರಂಟಿ

ಇದು ನೈಸರ್ಗಿಕವಾದ ಕೂದಲ ಬಣ್ಣ. ಇದು ಕೂದಲ ಬಣ್ಣವನ್ನು ಕಾಪಾಡುವುದರ ಜೊತೆಗೆ ಬಲಪಡಿಸುತ್ತದೆ. ಅಲ್ಲದೆ ಆರೋಗ್ಯಕರವಾಗಿ ಇರುವಂತೆ ಮಾಡುವುದು. ಕ್ಯಾಸ್ಟರ್ ಎಣ್ಣೆ, ನಿಂಬೆ ರಸ, ಮದರಂಗಿ ಪುಡಿ ಮತ್ತು ಸ್ವಲ್ಪ ರಸವನ್ನು ಸೇರಿಸಿ ಮಿಶ್ರಗೊಳಿಸಿ. ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ, 2 ಗಂಟೆಗಳ ಕಾಲ ಹೀರಿಕೊಳ್ಳಲು ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿ ವಾರಕ್ಕೊಮ್ಮೆ ಈ ಕ್ರಮವನ್ನು ಹಚ್ಚಿ.

ಕರಿಬೇವಿನ ಎಲೆ

ಕರಿಬೇವಿನ ಎಲೆಯು ಕೂದಲ ರಕ್ಷಣೆ ಹಾಗೂ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿ ಕರಿಬೇವಿನ ಎಲೆಯನ್ನು ಸೇರಿಸಿ ಕುದಿಸಿ. ನಂತರ ತೈಲವನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಿ. ತಲೆ ಸ್ನಾನ ಮಾಡುವ ಮೊದಲು ನೆತ್ತಿ ಹಾಗೂ ಕೂದಲಿಗೆ ಅನ್ವಯಿಸಿ ಒಂದು ಗಂಟೆಗಳ ಕಾಲ ಬಿಡಿ. ಬಳಿಕ ತೊಳೆಯಿರಿ. ಈ ವಿಧಾನದಿಂದ ಉತ್ತಮ ಕೇಶ ವೃದ್ಧಿ ಹಾಗೂ ಬಣ್ಣಗಳ ರಕ್ಷಣೆ ಮಾಡಬಹುದು.

ತೆಂಗಿನ ಎಣ್ಣೆ

ಕೂದಲ ಅನೇಕ ಸಮಸ್ಯೆಗಳಿಗೆ ದಿವ್ಯ ಔಷಧಿ ತೆಂಗಿನ ಎಣ್ಣೆ. ಸೂಕ್ಷ್ಮಗ್ರಾಹಿ ಎಣ್ಣೆಯಾದ ತೆಂಗಿನ ಎಣ್ಣೆಯನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಅನ್ವಯಿಸುವುದರಿಂದ ಅನೇಕ ಸಮಸ್ಯೆಗಳ ನಿವಾರಣೆಯ ಜೊತೆಗೆ ಬಣ್ಣ ಬದಲಾವಣೆಯನ್ನು ನಿಯಂತ್ರಿಸಬಹುದು.

suddiyaana