ಡಬಲ್‌ ಸೆಂಚುರಿ ಹೊಡೆದು ಮುನ್ನುಗ್ಗುತ್ತಿರುವ ಟೊಮ್ಯಾಟೊ ಬೆಲೆ – ಕೆಜಿಗೆ ರೂ. 90 ರಂತೆ ಮಾರಾಟ ಆರಂಭಿಸಿದ ಕೇಂದ್ರ!

ಡಬಲ್‌ ಸೆಂಚುರಿ ಹೊಡೆದು ಮುನ್ನುಗ್ಗುತ್ತಿರುವ ಟೊಮ್ಯಾಟೊ ಬೆಲೆ – ಕೆಜಿಗೆ ರೂ. 90 ರಂತೆ ಮಾರಾಟ ಆರಂಭಿಸಿದ ಕೇಂದ್ರ!

ನವದೆಹಲಿ: ಒಂದು ಕೆಜಿ ಟೊಮ್ಯಾಟೊ ಒಂದು ಕೆಜಿ ಸೇಬು ಹಣ್ಣಿನ ದರವನ್ನೂ ಮೀರಿದೆ. ಹೀಗಾಗಿ ಅಡುಗೆ ಮನೆಯ ಕೆಂಪು ಸುಂದರಿಯನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ದಿನಬೆಳಗಾದರೆ ಚಿನ್ನದ ದರದಂತೆ ಟೊಮ್ಯಾಟೊ ಬೆಲೆ ಎಷ್ಟು ಎಂದು ಕೇಳುವಂತೆ ಆಗಿದೆ.  ಸೆಂಚುರಿ, ಡಬಲ್ ಸೆಂಚುರಿ ಹೊಡೆದು ಮುನ್ನುಗ್ಗುತ್ತಿರುವ ಟೊಮ್ಯಾಟೊ ಬೆಲೆಯಿಂದಾಗಿ  ರೈತರೇ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಬೆಲೆ ಗಗನಕ್ಕೇರಿರುವಂತೆಯೇ ಕೇಂದ್ರ ಸರ್ಕಾರ ಕೆಜಿಗೆ ರೂ. 90 ರಂತೆ ರಿಯಾಯಿತಿ ಬೆಲೆಯಲ್ಲಿ ಟೊಮ್ಯಾಟೊ ಮಾರಾಟ ಆರಂಭಿಸುವ ಮೂಲಕ ಗ್ರಾಹಕರಿಗೆ ತುಸು ನೆಮ್ಮದಿಯನ್ನು ನೀಡಿದೆ.

ಇದನ್ನೂ ಓದಿ:ಒಣಮೀನು ಮಾರಾಟಕ್ಕೆ ಇನ್ನುಮುಂದೆ ಲೈಸೆನ್ಸ್‌ ಕಡ್ಡಾಯ?

ಭಾರೀ ಮಳೆಯಿಂದಾಗಿ ದೇಶದ ಹಲವು ಕಡೆಗಳಲ್ಲಿ ಒಂದು ಕೆಜಿ ಟೊಮ್ಯಾಟೊ  ಬೆಲೆ ರೂ.244ಕ್ಕೆ ಏರಿದೆ. ಕಳೆದ ಕೆಲವು ವಾರಗಳಿಂದ ಟೊಮ್ಯಾಟೊ ಸಗಟು ದರ ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ಶುಕ್ರವಾರದಿಂದ ಭಾರತೀಯ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಕೇಂದ್ರ ಸರ್ಕಾರದ ಪರವಾಗಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಟೊಮ್ಯಾಟೊ ಮಾರಾಟ ನಡೆಸುತ್ತಿದೆ. ಗ್ರಾಹಕರಿಗೆ ಕೆಜಿಗೆ 90 ರೂಪಾಯಿಯಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ.

“17,000 ಕೆಜಿ ಟೊಮೆಟೊಗಳಲ್ಲಿ ಶೇ.80 ರಷ್ಟು ಶುಕ್ರವಾರ ಸಂಜೆಯವರೆಗೆ ಮಾರಾಟವಾಗಿದೆ. ಶನಿವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಅನಿಸ್ ಜೋಸೆಫ್ ಚಂದ್ರ ಹೇಳಿದ್ದಾರೆ.

ರಿಯಾಯಿತಿ ದರದಲ್ಲಿ ಟೊಮ್ಯಾಟೊ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಕೆಲವೆಡೆ ರಿಯಾಯಿತಿ ದರದ ಟೊಮ್ಯಾಟೊ ಖರೀದಿಗೆ ಜನರು ಸರತಿ ಸಾಲಿನಲ್ಲಿ ಬರುತ್ತಿದ್ದಾರೆ. ಕರೋಲ್ ಬಾಗ್, ಪಟೇಲ್ ನಗರ, ಪುಸಾ ರಸ್ತೆ, ಸಿಜಿಒ ಕಾಂಪ್ಲೆಕ್ಸ್, ನೆಹರು ಪ್ಲೇಸ್, ಗೋವಿಂದ್ ಲಾಲ್ ಶಿಕಾ ಮಾರ್ಗ್, ಆದರ್ಶ ನಗರ, ವಜೀರ್‌ಪುರದ ಜೆಜೆ ಸ್ಲಂ ಮತ್ತು ಧೋಧಪುರ್ ಶಿವಮಂದಿರದಂತಹ ಪ್ರದೇಶಗಳಲ್ಲಿ ಸುಮಾರು 20 ಸಂಚಾರ ವಾಹನಗಳನ್ನು ರವಾನಿಸಲಾಗಿದೆ ಎಂದು ಅವರು ತಿಳಿಸಿದರು.

suddiyaana