ಶತಕವನ್ನು ತಂದೆ ತಾಯಿಗೆ ಅರ್ಪಿಸಿದ ದಾಖಲೆಯ ಸರದಾರ – ಯಶಸ್ವಿ ಜೈಸ್ವಾಲ್ ಮಾತಿಗೆ ಅಭಿಮಾನಿಗಳ ಜೈಹೋ..

ಶತಕವನ್ನು ತಂದೆ ತಾಯಿಗೆ ಅರ್ಪಿಸಿದ ದಾಖಲೆಯ ಸರದಾರ – ಯಶಸ್ವಿ ಜೈಸ್ವಾಲ್ ಮಾತಿಗೆ ಅಭಿಮಾನಿಗಳ ಜೈಹೋ..

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿರುವ ಯಶಸ್ವಿ ಜೈಸ್ವಾಲ್ ತನ್ನ ಶತಕವನ್ನು ತಂದೆ ತಾಯಿಗೆ ಅರ್ಪಿಸಿದ್ದಾರೆ. ಡೊಮಿನಿಕಾದ ವಿಂಡ್ಸರ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡುತ್ತಿರುವ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ್ದರು. ಎರಡನೇ ದಿನದಾಟದ ಅಂತ್ಯಕ್ಕೆ 143 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಯಶಸ್ವಿ, ತಾನು ಶತಕ ಸಿಡಿಸಿದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಜೈಸ್ವಾಲ್ ಮಾತು ಕೇಳಿದ ಕ್ರಿಕೆಟ್ ಅಭಿಮಾನಿಗಳು ಕೂಡಾ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: 

ತನ್ನ ಚೊಚ್ಚಲ ಟೆಸ್ಟ್ ಶತಕದ ಬಗ್ಗೆ ಮನಬಿಚ್ಚಿ ಮಾತನಾಡಿರುವ ಜೈಸ್ವಾಲ್, ‘ಈ ಇನ್ನಿಂಗ್ಸ್ ನನಗೆ ತುಂಬಾ ಭಾವುಕವಾಗಿತ್ತು. ತಾನು ಮುಕ್ತವಾಗಿ ಆಡಲು ಮೈದಾನಕ್ಕೆ ಹೋಗಿದ್ದೆ. ಅದರಲ್ಲಿ ಯಶಸ್ವಿಯಾಗಿದ್ದೇನೆ. ಶತಕ ಬಾರಿಸಿದ್ದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣವಾಗಿದ್ದು, ಇದಕ್ಕೆ ನಾನು ಹೆಮ್ಮೆಪಡುತ್ತೇನೆ. ಇದು ಆರಂಭವಷ್ಟೇ, ಮುಂದೆ ಹೋಗಲು ಎಲ್ಲವನ್ನೂ ಮಾಡುತ್ತೇನೆ ಎಂದಿದ್ದಾರೆ. “ಈ ಶತಕ ನನಗೆ, ನನ್ನ ತಂದೆ-ತಾಯಿಗೆ ಮತ್ತು ನನ್ನೀ ಪಯಣದಲ್ಲಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೆ ಅರ್ಪಿಸುತ್ತೇನೆ. ನನ್ನ ಪಾಳಿಗೆ ಇದು ಬಹುದೊಡ್ಡ ಪಯಣ. ಇದರ ಭಾಗವಾದ ಪ್ರತಿಯೊಬ್ಬರಿಗೆ ಧನ್ಯವಾದ ಹೇಳುತ್ತೇನೆ. ಆ ದೇವರಿಗೆ ಮತ್ತು ತಂದೆ-ತಾಯಿಗೆ ಈ ಶತಕ ಅರ್ಪಿಸುತ್ತೇನೆ. ಇದು ಆರಂಭ ಅಷ್ಟೇ, ನಾನು ಸಾಧಿಸುವುದು ಇನ್ನೂ ಬಹಳಷ್ಟಿದೆ,” ಎಂದು ಯಶಸ್ವಿ ಜೈಸ್ವಾಲ್‌ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಜೈಸ್ವಾಲ್, ‘ಕ್ರೀಸ್‌ನಲ್ಲಿ ಇದ್ದಷ್ಟೂ ಸಮಯ ರೋಹಿತ್‌ ತಮ್ಮನ್ನು ಹುರಿದುಂಬಿದಿಸಿದರು. ಪದಾರ್ಪಣೆಯ ಟೆಸ್ಟ್‌ನಲ್ಲಿ ದೊಡ್ಡ ಶತಕ ಬಾರಿಸುವಂತೆ ಆತ್ಮವಿಶ್ವಾಸ ತುಂಬಿದರು. ಒಟ್ಟಿಗೆ ಬ್ಯಾಟ್‌ ಮಾಡುವಾಗ ರೋಹಿತ್‌ ಶರ್ಮಾ ಜೊತೆಗೆ ಬಹಳ ಮಾತನಾಡಿದೆ. ಇಂತಹ ಪಿಚ್‌ನಲ್ಲಿ ಹೇಗೆ ಬ್ಯಾಟ್‌ ಮಾಡಬೇಕು ಎಂಬುದನ್ನು ಅವರು ಹೇಳಿಕೊಟ್ಟರು. ಯಾವ ಮೂಲೆಯಲ್ಲಿ ಹೆಚ್ಚು ಸ್ಕೋರ್‌ ಮಾಡಬಹುದು ಎಂದು ತಿಳಿಸಿದರು. ನಮ್ಮಿಬ್ಬರ ನಡುವಣ ಸಂಭಾಷಣೆ ಅತ್ಯುತ್ತಮವಾಗಿತ್ತು. ಪಂದ್ಯ ಆರಂಭಕ್ಕೂ ಮೊದಲೇ ಅವರು ನನ್ನ ಬಳಿ ಹೇಳಿದ್ದರು. ಪದಾರ್ಪಣೆಯ ಟೆಸ್ಟ್‌ನಲ್ಲಿ ಶತಕ ಬಾರಿಸಬೇಕು, ಇದು ಸಾಧ್ಯ ಎಂದಿದ್ದರು. ದೊಡ್ಡ ಸ್ಕೋರ್‌ ಮಾಡಲು ಮಾನಸಿಕವಾಗಿ ಸಜ್ಜಾದೆ. ಈ ಪಂದ್ಯದಿಂದ ಸಾಕಷ್ಟು ಕಲಿತಿದ್ದೇನೆ. ಭವಿಷ್ಯದಲ್ಲಿಯೂ ಇದೇ ಮಾದರಿ ಆಟ ಮುಂದುವರಿಸುವ ಪ್ರಯತ್ನ ಮಾಡಲಿದ್ದೇನೆ” ಎಂದು ಹೇಳಿದ್ದಾರೆ.

suddiyaana