ಅಮೆರಿಕ ಅಧ್ಯಕ್ಷ ಬೈಡನ್ ಗೆ ಕೊಕೇನ್ ಕೊಟ್ಟು ಭಾಷಣ ಮಾಡಿಸುತ್ತಾರೆ! – ಟ್ರಂಪ್ ಸ್ಪೋಟಕ ಹೇಳಿಕೆ!
ಅಮೆರಿಕ ಅಧ್ಯಕ್ಷರು ವಾಸಿಸುವ ವೈಟ್ಹೌಸ್ ಆವರಣದಲ್ಲಿ ಕೆಲ ದಿನಗಳ ಹಿಂದೆ ಮಾದಕ ವಸ್ತು ಕೊಕೇನ್ ಪತ್ತೆಯಾಗಿತ್ತು. ಇದು ಹಲವು ಅಂತೆಕಂತೆಗಳ ಸುದ್ದಿಯನ್ನ ಸೃಷ್ಟಿಸಿತ್ತು. ಈ ಕೊಕೇನ್ ಕೇಸ್ಗೆ ಸಂಬಂಧಿಸಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೊಕೇನ್ ಸೇವಿಸಿಯೇ ಭಾಷಣ ಮಾಡ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿಯೆಂದು ಭಾವಿಸಿ ಸಹಿಸಿಕೊಂಡಿದೆ! – ಬಿಜೆಪಿ ಟ್ವೀಟ್
ಬೈಡೆನ್ ಭಾಷಣ ಮಾಡೋದನ್ನ ನೋಡುವಾಗಲೇ ಅವರು ಕೊಕೇನ್ ಅಮಲಿನಲ್ಲಿರೋದು ಸ್ಪಷ್ಟವಾಗಿ ಕಾಣುತ್ತೆ. ನಿಂತಲ್ಲೇ ಪುಟಿದೇಳುತ್ತಾರೆ. ಭಾಷಣ ಮುಗಿಸಿ ನಡೆದುಕೊಂಡು ಹೋಗಲು ಪರದಾಡುತ್ತಾರೆ. ಕೆಲವೊಮ್ಮೆ ಅವರಿಗೆ ದಾರಿಯೂ ಕಾಣೋದಿಲ್ಲ. ಕೇವಲ ಬೈಡೆನ್ ಮಾತ್ರವಲ್ಲ ಅವರ ಪುತ್ರ ಕೂಡ ಮಾದಕ ವಸ್ತುವಿನ ವ್ಯಸನಿಯಾಗಿದ್ದಾರೆ. ಅದರಿಂದ ಹೊರ ಬರೋಕೆ ಪ್ರಯತ್ನ ಮಾಡುತ್ತಿದ್ದಾರೆ. ವೈಟ್ಹೌಸ್ ಆವರಣದಲ್ಲಿ ಸಿಕ್ಕಿರೋದು ಬೈಡೆನ್ ಮತ್ತು ಅವರ ಪುತ್ರನಿಗೆ ಸೇರಿದ ಕೊಕೇನ್ ಅಂತಾ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳನ್ನ ಕಂಟ್ರೋಲ್ನಲ್ಲಿಟ್ಟುಕೊಂಡಿರುವವರು ಮತ್ತು ಜಾಗತಿಕ ನಾಯಕರ ಜೊತೆ ವ್ಯವಹರಿಸುವವರು ಅಧ್ಯಕ್ಷ ಸ್ಥಾನದಲ್ಲಿರೋದು ಸರಿಯಲ್ಲ. ಕೊಕೇನ್ ಸೇವಿಸುವವರನ್ನ ಅಧ್ಯಕ್ಷ ಪಟ್ಟದಲ್ಲಿ ಇಟ್ಟುಕೊಳ್ಳೋದು ಸಾಧ್ಯವಿಲ್ಲ. ಇದು ದೇಶಕ್ಕೆ ತುಂಬಾ ಅಪಾಯಕಾರಿ ಅಂತಾ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇವೆಲ್ಲದರ ಮಧ್ಯೆ, ಕೊಕೇನ್ ಶ್ವೇತಭವನಕ್ಕೆ ಹೇಗೆ ಬಂತು? ಇದ್ರ ಹಿಂದೆ ಯಾರಿದ್ದಾರೆ ಅನ್ನೋ ಬಗ್ಗೆ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ಕೊಕೇನ್ ಪತ್ತೆಯಾದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ವೈಟ್ಹೌಸ್ನಲ್ಲಿ ಇರಲಿಲ್ಲ ಅಂತಾ ಅಮೆರಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.