ಮೌಂಟ್ಎವರೆಸ್ಟ್ ಬಳಿ ಹೆಲಿಕಾಪ್ಟರ್ ಪತನ – 5 ವಿದೇಶಿ ಪ್ರವಾಸಿಗರು ಸೇರಿ 6 ಮಂದಿಯ ದಾರುಣ ಅಂತ್ಯ

ಮೌಂಟ್ಎವರೆಸ್ಟ್ ಬಳಿ ಹೆಲಿಕಾಪ್ಟರ್ ಪತನ – 5 ವಿದೇಶಿ ಪ್ರವಾಸಿಗರು ಸೇರಿ 6 ಮಂದಿಯ ದಾರುಣ ಅಂತ್ಯ

ಅವರು ಹೋಗಿದ್ದು ಮೌಂಟ್ ಎವರೆಸ್ಟ್ ಸೌಂದರ್ಯ ವೀಕ್ಷಿಸಲು. ವೀಕ್ಷಣೆ ಮುಗಿದ ಮೇಲೆ ಪ್ರಯಾಣ ಶುರುಮಾಡಿ ಕೇವಲ 15 ನಿಮಿಷಗಳಾಗಿತ್ತಷ್ಟೇ.. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಅವರೆಲ್ಲರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದು ಐವರು ಮೆಕ್ಸಿಕನ್ ಪ್ರವಾಸಿಗರ ದುರಂತ ಕಥೆ. ಐವರು ಸೇರಿದಂತೆ ಆರು ಮಂದಿಯನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ನೇಪಾಳದ ಮೌಂಟ್ ಎವರೆಸ್ಟ್ ಸಮೀಪದ ಲಂಜುರಾ ಎಂಬಲ್ಲಿ ಪತನವಾಗಿದ್ದು, ಎಲ್ಲಾ ಆರು ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಜೆಡಿಎಸ್ ಮಾಜಿ ಶಾಸಕ ಆಂಬುಲೆನ್ಸ್ ತಡೆದ ದೃಶ್ಯ ವೈರಲ್

ಈ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್, ಪ್ರಯಾಣ ಆರಂಭಿಸಿದ 15 ನಿಮಿಷಗಳ ಬಳಿಕ ಸಂಪರ್ಕ ಕಳೆದುಕೊಂಡಿತ್ತು. ಮೌಂಟ್ ಎವರೆಸ್ಟ್ ಹಾಗೂ ಇತರೆ ಎತ್ತರದ ಪರ್ವತ ಪ್ರದೇಶಗಳಿರುವ ಸೊಲುಖುನ್ಹು ಜಿಲ್ಲೆಯ ಸುರ್ಕೆಯಿಂದ ಈ ಹೆಲಿಕಾಪ್ಟರ್ ಹೊರಟಿತ್ತು. ವಿದೇಶಿ ಪ್ರವಾಸಿಗರನ್ನು ಮೌಂಟ್ ಎವರೆಸ್ಟ್ ವೀಕ್ಷಣೆಗೆ ಕರೆದೊಯ್ದು, ನಂತರ ಕಠ್ಮಂಡುವಿಗೆ ಮರಳಿ ಹೋಗುತ್ತಿತ್ತು. ಸುರ್ಕೆ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.04ಕ್ಕೆ ಹೊರಟ ಮನಾಂಗ್ ಏರ್ ಚಾಪರ್ 9N-AMV, ಬೆಳಿಗ್ಗೆ 10.15ರ ಸುಮಾರಿಗೆ ಕಂಟ್ರೋಲ್ ಟವರ್ ಜತೆಗಿನ ಸಂಪರ್ಕ ಕಡಿದುಕೊಂಡಿದೆ. ಆಗ ಹೆಲಿಕಾಪ್ಟರ್ 12,000 ಅಡಿಗಳಷ್ಟು ಎತ್ತರದಲ್ಲಿತ್ತು.

ಈ ಪೈಕಿ ಐವರು ಮೃತದೇಹ  ಸ್ಥಳದಲ್ಲಿ ಪತ್ತೆಯಾಗಿದೆ ಎಂದು ವರದಿ ಮಾಡಿದೆ. ಸೊಲೊಕುಂಬು ಜಿಲ್ಲೆಯ ಲಮ್ಜುರಾ ಪರ್ವತ ಶ್ರೇಣಿಯಲ್ಲಿ ವಿಮಾನ ಪತನಗೊಂಡಿದೆ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ. ಹೆಲಿಕಾಪ್ಟರ್ ಪತನವಾದಾಗ ಬಾರಿ ಶಬ್ದ ಕೇಳಿಸಿದೆ. ಬಳಿಕ ದಟ್ಟ ಹೊಗೆಯೂ ಕಾಣಿಸಿಕೊಂಡಿದೆ. ಪರ್ವತ ಶ್ರೇಣಿ ದಾಟಿದ ಶಬ್ದ ಬಂದ ಸ್ಥಳಕ್ಕೆ ತೆರಳಿದ ಸ್ಥಳೀಯರು ಪತನಗೊಂಡ ಹೆಲಿಕಾಪ್ಟರ್ ಪತ್ತೆ ಹಚ್ಚಿದ್ದಾರೆ. ಒಟ್ಟು 6 ಮಂದಿಯ ಪೈಕಿ ಐವರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬರ ಸುಳಿವಿಲ್ಲ ಎನ್ನಲಾಗಿದೆ..

suddiyaana