ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಗೆ ಬೆಂಕಿ..! – ಜಾಗದ ವಿಚಾರಕ್ಕೆ ಹೀಗೆ ಮಾಡೋದಾ?
ತುಳುನಾಡಿನ ಸತ್ಯ, ಕರಾವಳಿಯ ಕಾರಣಿಕ ದೈವ ಕೊರಗಜ್ಜ. ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಮೇಲೆ ನಂಬಿಕೆಯೂ ಹೆಚ್ಚಾಗಿದೆ. ತುಳುನಾಡಿನಲ್ಲಿ ಹೆಚ್ಚು ಪೂಜಿಸುವ ದೇವರೆಂದರೆ ಅದು ಕೂಡಾ ಕೊರಗಜ್ಜ. ಕಳೆದುಹೋಗಿದ್ದನ್ನು ಮರಳಿ ಪಡೆಯಲು, ಇಷ್ಟಾರ್ಥ ನೆರವೇರಿಸಿಕೊಳ್ಳಲು, ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಭಕ್ತರು ಕೊರಗಜ್ಜನಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಆದರೆ, ಈಗ ಒಬ್ಬ ವ್ಯಕ್ತಿ ತುಳುನಾಡಿನ ಕಾರಣಿಕ ದೈವವಾಗಿದ್ದ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟಿದ್ದಾನೆ.
ಇದನ್ನೂ ಓದಿ: ಜೈನಮುನಿಯನ್ನ ಒಬ್ಬರಲ್ಲ ಇಬ್ಬರೂ ಸೇರಿ ಕೊಲೆ ಮಾಡಿದ್ರು – ಎಫ್ ಐಆರ್ ನಲ್ಲಿದೆ ಸ್ಫೋಟಕ ಸತ್ಯ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಭೂಮಿ ವಿಚಾರವಾಗಿ ಗಲಾಟೆ ನಡೆದು ಕಾರ್ಣಿಕ ದೈವ ಕೊರಗಜ್ಜನ ಗುಡಿಗೇ ವ್ಯಕ್ತಿಯೊಬ್ಬ ಬೆಂಕಿ ಇಟ್ಟಿದ್ದಾನೆ. ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಬಾಡಾರಿನಲ್ಲಿ ಕೊರಗಕಲ್ಲು ಬಳಿ ಕೊರಗಜ್ಜನ ಕಟ್ಟೆ ಇದೆ. ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಇಲ್ಲಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಖಾಸಗಿ ಜಾಗದಲ್ಲಿ ಗುಡಿಯಿದೆ. ಖಾಸಗಿ ಜಾಗದಲ್ಲಿ ಆರಾಧನೆ ನಡೆಯುತ್ತಿದೆ ಎಂಬ ವಿಚಾರಕ್ಕೆ ತಗಾದೆ ನಡೆಯುತ್ತಿತ್ತು. ಆದರೀಗ ಆ ವ್ಯಕ್ತಿ ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚಿದ್ದು, ಇದನ್ನು ಖಂಡಿಸಿದ ಸ್ವಾಮಿ ಕೊರಗಜ್ಜ ಸಮಿತಿಯು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದೆ.