ಜೈನಮುನಿಯನ್ನ ಒಬ್ಬರಲ್ಲ ಇಬ್ಬರೂ ಸೇರಿ ಕೊಲೆ ಮಾಡಿದ್ರು – ಎಫ್ ಐಆರ್ ನಲ್ಲಿದೆ ಸ್ಫೋಟಕ ಸತ್ಯ

ಜೈನಮುನಿಯನ್ನ ಒಬ್ಬರಲ್ಲ ಇಬ್ಬರೂ ಸೇರಿ ಕೊಲೆ ಮಾಡಿದ್ರು – ಎಫ್ ಐಆರ್ ನಲ್ಲಿದೆ ಸ್ಫೋಟಕ ಸತ್ಯ

ಜೈನಮುನಿಗಳ ಭೀಕರ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಈ ಮೊದಲು ಕಾಮಕುಮಾರ ನಂದಿ ಮಹಾರಾಜರನ್ನ ಒಬ್ಬರೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಎಫ್​ಐಆರ್ ನಲ್ಲಿ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿಲಾಗಿದೆ. ಜೈನ ಮುನಿಗಳ ಸಂಬಂಧ ಚಿಕ್ಕೋಡಿ ಪೊಲೀಸ್ (Chikkodi Police Station) ಠಾಣೆಯಲ್ಲಿ ಎಫ್​ಐಆರ್ (FIR) ದಾಖಲಾಗಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ (Nandi Parvata) ಆಶ್ರಮದ ಜೈನಮುನಿ (Jain Monk Murder Case) ಆಚಾರ್ಯ ಕಾಮಕುಮಾರ ನಂದಿ ಮಹರಾಜ (Acharya Kamakumar Nandi Maharaja) ಹತ್ಯೆ ಈಗ ಮತ್ತೊಂದು ಟ್ವಿಸ್ಟ್ ಪಡೆದಿದೆ. ನಾರಾಯಣ ಮಾಳಿ, ಹಸನ್ ದಲಾಯತ್ ಇಬ್ಬರು ಆರೋಪಿಗಳು (Accused) ಸೇರಿಯೇ ಜೈನಮುನಿಗಳ ಹತ್ಯೆ ಮಾಡಿದ್ದಾರೆ ಎಂದು ಎಫ್ಐಆರ್​ನಲ್ಲಿ (FIR) ಉಲ್ಲೇಖವಾಗಿದೆ. ಜೈನ ಮುನಿಗಳ ಸಂಬಂಧ ಚಿಕ್ಕೋಡಿ ಪೊಲೀಸ್ (Chikkodi Police Station) ಠಾಣೆಯಲ್ಲಿ ಎಫ್​ಐಆರ್ (FIR) ದಾಖಲಾಗಿದೆ. ನಾರಾಯಣ ಮಾಳಿ, ಹಸನಸಾಬ್ ದಲಾಯತ್ ಇಬ್ಬರೂ ಸೇರಿಯೇ ಜೈನಮುನಿಗಳ ಬರ್ಬರ ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ : ಕಲಾಪದಲ್ಲಿ ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಚರ್ಚೆ – ಗೃಹಸಚಿವರು ಬಂದ ಮೇಲೆ ಉತ್ತರ ನೀಡುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ

ಆರೋಪಿಗಳಿಬ್ಬರು ಮೊದಲು ಜೈನಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಯತ್ನಿಸಿದ್ದಾರೆ. ಬಳಿಕ ಇಬ್ಬರೂ ಸೇರಿ ಟವೆಲ್‌ನಿಂದ ಜೈನಮುನಿಗಳ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ. ನಾರಾಯಣ ಮಾಳಿಗೆ ಕೊಟ್ಟ ಹಣ ವಾಪಸ್ ಕೊಡುವಂತೆ ಜೈನಮುನಿಗಳು ಕೇಳಿದ್ದರು. ಇದರಿಂದ ಕುಪಿತಗೊಂಡಿದ್ದ ಎ1 ಆರೋಪಿ ನಾರಾಯಣ ಮಾಳಿ, ಸ್ನೇಹಿತ ಲಾರಿ ಚಾಲಕನಾಗಿದ್ದ ಎ2 ಆರೋಪಿ ಹಸನಸಾಬ್ ದಲಾಯತ್ ಸಹಾಯ ಪಡೆದು ಇಬ್ಬರೂ ಸೇರಿ ಕೊಲೆ‌ ಮಾಡಿದ್ದಾರೆ.

ಕೊಲೆ ಮಾಡಿ ಮೃತದೇಹವನ್ನ ಗೋಣಿಚೀಲದಲ್ಲಿ ಕಟ್ಟಿ ಬೈಕ್‌ನಲ್ಲಿ ಹಿರೇಕೋಡಿಯಿಂದ ಖಟಕಭಾವಿಯವರೆಗೂ ಸುಮಾರು 35 ಕಿಮೀ ಬೈಕ್ ಮೇಲೆ ಶವ ಸಾಗಾಟ ಮಾಡಿದ್ದಾರೆ. ಖಟಕಬಾವಿಯ ಕೊಳವೆ ಬಾವಿ ಬಳಿ ದೇಹ ಪೀಸ್ ಪೀಸ್ ಮಾಡಿದ್ದಾರೆ. ಬಳಿಕ ತಮ್ಮ ರಕ್ತ ಸಿಕ್ತ ಬಟ್ಟೆಗಳನ್ನು ಹಾಗೂ ಜೈನಮುನಿಗಳಿಗೆ ಸೇರಿದ ಡೈರಿ ಸುಟ್ಟು ಹಾಕಿದ್ದಾರೆ. ಸದ್ಯ ಆರೋಪಿಗಳಿಬ್ಬರು ಹಿಂಡಲಗಾ ಜೈಲಿನಲ್ಲಿದ್ದಾರೆ. ಇಬ್ಬರನ್ನು ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಈ ವೇಳೆ ಪ್ರಕರಣದ ತನಿಖಾಧಿಕಾರಿ  ಸಿಪಿಐ ಆರ್.ಆರ್.ಪಾಟೀಲ್ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಗಳಿವೆ.

ಮತ್ತೊಂದೆಡೆ ಬೆಳಗಾವಿಯಲ್ಲಿ ಜೈನಮುನಿ ಹತ್ಯೆ ಹಾಗೂ ಮೈಸೂರಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಹಿನ್ನೆಲೆ ಪ್ರಕರಣ ಸಂಬಂಧ ಸತ್ಯಾಸತ್ಯತೆ ತಿಳಿಯಲು ಬಿಜೆಪಿಯಿಂದ ಸಮಿತಿ ರಚನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದೆ.

suddiyaana