ಬೀದಿ ನಾಯಿಗೆ ಇಟಲಿಗೆ ಹೋಗುವ ಅವಕಾಶ –ಪಾಸ್‌ಪೋರ್ಟ್ ಮಾಡಿಸಿದ ದತ್ತು ಪಡೆದ ಒಡತಿ

ಬೀದಿ ನಾಯಿಗೆ ಇಟಲಿಗೆ ಹೋಗುವ ಅವಕಾಶ –ಪಾಸ್‌ಪೋರ್ಟ್ ಮಾಡಿಸಿದ ದತ್ತು ಪಡೆದ ಒಡತಿ

ವಿದೇಶಕ್ಕೆ ಹೋಗಬೇಕು ಎಂಬ ಕನಸು ಅನೇಕರಿಗಿದೆ. ಆದರೆ, ಎಲ್ಲರಿಗೂ ಈ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದೇ ದೊಡ್ಡ ಕೆಲಸ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಪ್ರೀತಿಯ ನಾಯಿಗೆ ಪಾಸ್‌ಪೋರ್ಟ್ ಮಾಡಿಸಿಕೊಟ್ಟಿದ್ದಲ್ಲದೇ, ವಿದೇಶಕ್ಕೆ ನಾಯಿಯನ್ನು ಕರೆದುಕೊಂಡು ಹೋಗಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಇದನ್ನೂ ಓದಿ: ಮುದ್ದಿನ ಶ್ವಾನ ನೋಡಿಕೊಳ್ಳುವವರು ಬೇಕಾಗಿದ್ದಾರೆ..! – ಒಂದು ಕೋಟಿ ರೂಪಾಯಿ ಸಂಬಳ ನೀಡಲಾಗುವುದು..! 

ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ಇತ್ತೀಚೆಗೆ ಈ ಅವಕಾಶವನ್ನು ತನ್ನದಾಗಿಸಿಕೊಂಡಿದೆ. ಮೋತಿ ಎಂಬ ನಾಯಿ ಪಾಸ್‌ಪೋರ್ಟ್ ಪಡೆದಿಕೊಂಡಿದ್ದು, ಈ ತಿಂಗಳು ಇಟಲಿಗೆ ಹೋಗಲು ಸಿದ್ಧವಾಗಿದೆ. ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ಮೋತಿಯನ್ನು ದತ್ತು ಪಡೆದಿದ್ದಾರೆ. ಇಟಾಲಿಯನ್ ಲೇಖಕಿ ವೆರಾ, ಕಳೆದ ಹತ್ತು ವರ್ಷಗಳಿಂದ ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ವಾರಾಣಸಿಯಲ್ಲಿ ಈ ಬೀದಿ ನಾಯಿ ಜತೆಗೆ ಒಲವು ಬೆಳೆಸಿಕೊಂಡು ಅದನ್ನು ಸಾಕಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆನ್ಲೈನ್ ಸಂದರ್ಶನವೊಂದರಲ್ಲಿ ಮಾತನಾಡಿದಾಗ ಮೋತಿ ಈ ಹಿಂದೆ ಹಿಂಸೆಗೆ ಒಳಗಾಗಿತ್ತು. ಇಲ್ಲಿನ ಜನರು ಆ ನಾಯಿಗೆ ಹೊಡೆದು ಹಿಂಸೆ ನೀಡುತ್ತಿದ್ದರು, ಈ ಕಾರಣಕ್ಕೆ ಅವರಿಂದ ಕಾಪಾಡಿ ನಾನು ಮೋತಿಯನ್ನು ಸಾಕಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ. ಇದೀಗ ಮೋತಿಯನ್ನು ದತ್ತ ಪಡೆದು ಇಟಲಿಗೆ ಕರೆದುಕೊಂಡು ಹೋಗಲು ದೆಹಲಿಗೆ ವಿಮಾನದ ಮೂಲಕ ಹಾರಾಟ ನಡೆಸಿದ್ದಾರೆ. ಪ್ರಾಣಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವಾಗ ವ್ಯಾಕ್ಸಿನೇಷನ್ ಸೇರಿದಂತೆ ಇನ್ನೂ ಅನೇಕ ತಪಾಸಣೆ ಮತ್ತು ದಾಖಲೆ ಮಾಡಬೇಕಿದೆ. ಮೋತಿಯ ಹಿಂಭಾಗದಲ್ಲಿ ಮೈಕ್ರೋಚಿಪ್ ಕೂಡ ಅಳವಡಿಸಲಾಗುವುದು. ಮೈಕ್ರೊಚಿಪ್ ವಿಶೇಷ ಗುರುತಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇನ್ನೂ ಪ್ರಾಣಿಗಳ ಬಗ್ಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಮತ್ತು ಅದನ್ನು ಯಾವ ಉದ್ದೇಶಕ್ಕೆ ವಿದೇಶಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ವರದಿಯನ್ನು ಕೂಡ ನೀಡಬೇಕು. ಇದಕ್ಕೆ ಅಲ್ಲಿನ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

suddiyaana