ತಾಯಿಗಿಂತ ತ್ಯಾಗಮಯಿ ಯಾರಿಲ್ಲ..! – ಕರುಳಕುಡಿಗಳ ರಕ್ಷಣೆಗಾಗಿ ಜೀವವನ್ನೇ ಪಣಕ್ಕಿಟ್ಟ ಅಮ್ಮ..!

ತಾಯಿಗಿಂತ ತ್ಯಾಗಮಯಿ ಯಾರಿಲ್ಲ..! – ಕರುಳಕುಡಿಗಳ ರಕ್ಷಣೆಗಾಗಿ ಜೀವವನ್ನೇ ಪಣಕ್ಕಿಟ್ಟ ಅಮ್ಮ..!

ಅಮ್ಮ ಅನ್ನುವ ಪದಕ್ಕೆ ಬೆಲೆ ಕಟ್ಟಲು ಸಾಧ್ಯವೇ. ತಾಯಿ ಮಕ್ಕಳಿಗಾಗಿ ಯಾವ ತ್ಯಾಗಕ್ಕೂ ಸಿದ್ಧಳು ಅನ್ನೋ ಮಾತು ಬರೀ ಬಾಯಿ ಮಾತಲ್ಲ. ಜನ್ಮಕೊಟ್ಟ ಕರುಳಕುಡಿಗಳಿಗಾಗಿ ಅಮ್ಮ ಎಂಥಾ ಅಪಾಯ ಬೇಕಿದ್ದರೂ ಎದುರಿಸಬಲ್ಲಳು ಎಂಬುವುದಕ್ಕೆ ಈ ಸ್ಟೋರಿಯೇ ಸಾಕ್ಷಿ. ಇದು ನಿಜಕ್ಕೂ ಮನಕಲಕುವ ರಿಯಲ್ ಸ್ಟೋರಿ. ನೀವು ಇದನ್ನು ಓದಿದರೆ, ಇದರ ವಿಡಿಯೋ ನೋಡಿದರೆ ನಿಮಗರಿವಿಲ್ಲದೆ, ನಿಮ್ಮ ಕಣ್ಣಂಚಿನಲ್ಲಿ ನೀರು ಬರುತ್ತದೆ. ಅಷ್ಟೇ ಅಲ್ಲ, ತನ್ನ ಕರುಳಕುಡಿಗಳಿಗಾಗಿ ಆ ತಾಯಿ ಮಾಡಿರುವ ತ್ಯಾಗ ನಿಮ್ಮ ಹೃದಯ ಹಿಂಡುತ್ತದೆ. ಇದನ್ನು ನೋಡಿದಾಗಲೇ ಅನಿಸುವುದು ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತು.

ಇದನ್ನೂ ಓದಿ: 35 ವರ್ಷಗಳ ನಂತರ ಪ್ರೇಮಿಗಳ ಪುನರ್ಮಿಲನ – ಪ್ರೀತಿ ಎಂದರೆ ಇದುವೆ ತಾನೇ…!

ಮನುಷ್ಯರೇ ಆಗಲಿ, ಪ್ರಾಣಿ ಪಕ್ಷಿಗಳೇ ಆಗಲಿ, ತಾಯಿ ಎಂದೆಂದಿಗೂ ತಾಯಿಯೇ. ಇಲ್ಲಿ ಮರಿಗಳ ರಕ್ಷಣೆಗೆ ಪಕ್ಷಿಯೊಂದು ತನ್ನ ಪ್ರಾಣದ ಹಂಗನ್ನೇ ಬಿಟ್ಟು ಹೋರಾಡಿದೆ. ಅದೊಂದು ಮರದ ಪೊಟರೆಯಲ್ಲಿ ಹಕ್ಕಿಯೊಂದು ಮರಿಗಳನ್ನು ಬಿಟ್ಟು ಇನ್ನೇನು ಆಹಾರ ತರಲು ಹೊರಟಿತ್ತು. ಪುಟ್ಟ ಮರಿಗಳನ್ನು ಜೋಪಾನ ಮಾಡಿ ಕಾಯತ್ತಿದ್ದ ಹಕ್ಕಿ, ಸದ್ಯ ಯಾರೂ ತನ್ನ ಮರಿಗಳ ಮೇಲೆ ಕಣ್ಣು ಹಾಕಿಲ್ಲ ಎಂಬ ಸಮಾಧಾನದಿಂದ ಹೊರಟಿತ್ತು. ಆಗ ಮತ್ತೊಮ್ಮೆ ತನ್ನ ಮರಿಗಳಿದ್ದ ಪೊಟರೆಯತ್ತ ತಿರುಗಿ ನೋಡಿದೆ. ಅಷ್ಟರಲ್ಲಾಗಲೇ ಆಹಾರ ಹುಡುಕಿ ಬಂದಿದ್ದ ಹಾವಿಗೆ ಈ ಮರದ ಪೊಟರೆ ಕಾಣಿಸಿದೆ. ಹೀಗಾಗಿ ಹಾವು ಆಹಾರ ಸಿಕ್ಕ ಖುಷಿಯಲ್ಲಿ ಪೊಟರೆಗೆ ನುಗ್ಗಿದೆ. ಇದನ್ನು ನೋಡಿದ ತಾಯಿ ಹಕ್ಕಿ, ಹಾವನ್ನು ಓಡಿಸುವುದಕ್ಕಾಗಿ ಹಾವಿಗೆ ಕುಕ್ಕುತ್ತಾ, ಚೀರಾಡುತ್ತಾ ಹಾರುತ್ತದೆ. ಹಾವು ಹೊರಗೆ ಬರುವವರೆಗೂ ಕುಕ್ಕಿದೆ. ಇದರಿಂದ ರೊಚ್ಚಿಗೆದ್ದ ಹಾವು ತಾಯಿ ಹಕ್ಕಿಯನ್ನು ಕೂಡಾ ತಿನ್ನಲು ಬಾಯಿ ಹಾಕಿದೆ. ಪಾಪದ ತಾಯಿ ಹಕ್ಕಿ, ಹಾವಿನ ಬಾಯಿಗೆ ಸಿಕ್ಕಿದೆ. ಹಕ್ಕಿಯನ್ನು ಬಾಯಲ್ಲಿ ಹಿಡಿದುಕೊಂಡೇ ಹಾವು ಮರದಿಂದ ಕೆಳಗೆ ಜಾರಿದೆ. ಹಕ್ಕಿಯ ಜೊತೆಗೆ ಕೆಳಗೆ ಬಿದ್ದ ಹಾವು ಹಕ್ಕಿಯನ್ನು ಸಂಪೂರ್ಣವಾಗಿ ಸುತ್ತಿಕೊಂಡಿದೆ. ತನ್ನ ಮರಿಗಳನ್ನು ರಕ್ಷಣೆ ಮಾಡಲು ಹಾವಿನ ಜೊತೆ ಹೋರಾಡಿದ ಹಕ್ಕಿ ಸುಸ್ತಾಗಿ ಹೋಗಿದೆ. ಸಮಾಧಾನದ ವಿಚಾರ ಏನಂದರೆ, ಈ ಹಕ್ಕಿಯನ್ನು ವಿಡಿಯೋ ಮಾಡಿದ ಪುಣ್ಯಾತ್ಮರೇ ಹಾವಿನ ಕೈಯಿಂದ ಬಿಡಿಸಿದ್ದಾರೆ.

ಈ ವೀಡಿಯೋವನ್ನು Nature Is Metal ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ಶೇರ್ ಮಾಡಿ ಅವರು ಹೀಗೆ ಬರೆದುಕೊಂಡಿದ್ದಾರೆ. ಈ ಹಕ್ಕಿ ಕ್ರೂರಿ ಬುಲ್ ಹಾವಿನಿಂದ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು, ಪ್ರಯತ್ನಿಸುತ್ತಿದೆ. ಹಾವುಗಳು ಪುಟ್ಟ ಮರಿಗಳನ್ನು ಹಾಗೂ ಹಕ್ಕಿಗಳ ಮೊಟ್ಟೆಗಳನ್ನು ಹುಡುಕಿಕೊಂಡು ಬಂದು ತಿನ್ನುವುದೇನು ಅಚ್ಚರಿ ಅಲ್ಲ, ಏಕೆಂದರೆ ಹಾವುಗಳಿಗೆ ಇವು ಸುಲಭವಾಗಿ ಸಿಗುವ ಆಹಾರವಾಗಿದೆ. ಆದರೆ ಹಾವು ಹಕ್ಕಿಯ ಗೂಡಿರುವ ಮರದ ಪೊಟರೆಯನ್ನು ಪ್ರವೇಶಿಸಿದನ್ನು ಗಮನಿಸಿದ ಹಕ್ಕಿ 20 ನಿಮಿಷಗಳ ಕಾಲ ತನ್ನ ಮರಿಗಳ ರಕ್ಷಣೆಗೆ ನಿರಂತರ ಹೋರಾಡಿದೆ. ನಂತರ ಹಾವಿನ ಸೆರೆಯಲ್ಲಿ ಸಿಲುಕಿದ ಹಕ್ಕಿಯನ್ನು ರಕ್ಷಿಸಿ ಕಾಪಾಡಲಾಗಿದೆ ಎಂದು ವೀಡಿಯೋ ಮಾಡಿದವರು ಹೇಳಿದ್ದಾರೆ ಎಂದು ಬರೆಯಲಾಗಿದೆ.

ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದೆ. ಸುಮಾರು 20 ನಿಮಿಷಗಳ ಹೋರಾಟದ ಬಳಿಕ ಈ ಹಕ್ಕಿಯನ್ನು ವೀಡಿಯೋ ಮಾಡುತ್ತಿದ್ದವರು ರಕ್ಷಣೆ ಮಾಡಿದ್ದಾರೆ. ಆದರೆ ಈ ವೀಡಿಯೋದಲ್ಲಿ ಹಕ್ಕಿಯ ರಕ್ಷಣೆಯ ದೃಶ್ಯವಿಲ್ಲ.  ವೀಡಿಯೋ ನೋಡಿದ ಒಬ್ಬರು ತಾಯಿ ಪ್ರೀತಿ ಎಂದಿಗೂ ತಾಯಿ ಪ್ರೀತಿಯೇ ಅದು ಪ್ರಾಣಿ ಪಕ್ಷಿಗಳಾದರೂ ಸರಿ ಮನುಷ್ಯರಾದರೂ ಸರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಾಯಿ ತನ್ನ ಮಕ್ಕಳ ರಕ್ಷಣೆಯ ವಿಚಾರದಲ್ಲಿ ಎಂಥಹಾ ತ್ಯಾಗ ಹಾಗೂ ಧೈರ್ಯ ಶೌರ್ಯಕ್ಕೆ ಸಿದ್ದಳಾಗಿರುತ್ತಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದಾಗ ಅನ್ನಿಸುವುದು ಒಂದೇ.. ತಾಯಿಗೆ ಮಿಗಿಲಾದ ದೇವರಿಲ್ಲ. ತಾಯಿಗಿಂತ ತ್ಯಾಗಮಯಿ ಯಾರಿಲ್ಲ…

suddiyaana