ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ – ಟ್ರೈನ್ ಟಿಕೆಟ್ ದರದಲ್ಲಿ ಶೇಕಡಾ 25 ರಷ್ಟು ಕಡಿತ
ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ರೈಲು ಟಿಕೆಟ್ ದರ ಶೇಕಡಾ 25 ರಷ್ಟು ಕಡಿತ ಮಾಡಲಾಗಿದೆ. ವಂದೇ ಭಾರತ್ ರೈಲು ಟಿಕೆಟ್ ದರವೂ ಕೂಡಾ ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮೊದಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ ಜನರಿಗೆ ಸ್ವಲ್ಪ ನಿರಾಳವೆನೆಿಸಿದೆ. ಈ ಡಿಸ್ಕೌಂಟ್ ಆಫರ್ ಗರಿಷ್ಠ 6 ತಿಂಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಐದು ‘ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ – ಬೆಂಗಳೂರು To ಧಾರವಾಡ ಇಂದಿನಿಂದ ಸಂಚಾರ
ಕೇಂದ್ರ ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಎಸಿ ಕೋಚ್ ರೈಲು ಟೆಕೆಟ್ ದರವನ್ನು ಕಡಿತಗೊಳಿಸಲಾಗಿದ್ದು, ಇದರಲ್ಲಿ ವಂದೇ ಭಾರತ್ ರೈಲು ಕೂಡ ಸೇರಿದೆ. ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳ ಎಸಿ ಕೋಚ್ ಟಿಕೆಟ್ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸಲಾಗಿದೆ. ಕಾರಣ ಕಳೆದ 30 ದಿನಗಳಲ್ಲಿ ಎಸಿ ಕೋಚ್‌ಗಳಲ್ಲಿ ಶೇಕಡಾ 50 ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿದೆ. ಹೀಗಾಗಿ ಎಸಿ ಕೋಚ್ ಟಿಕೆಟ್ ಬೆಲೆಯಲ್ಲಿ ಶೇಕಡಾ 25 ರಷ್ಟು ಕಡಿತ ಮಾಡಿದೆ. ಎಸಿ ಕೋಚ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲಿನ ಎಸಿ ಕೋಚ್ ಟಿಕೆಟ್ ದರ ಇದೀಗ ಇಳಿಕೆ ಮಾಡಲಾಗಿದೆ. ಟಿಕೆಟ್‌ನ ಮೂಲ ಬೆಲೆಯಲ್ಲಿ ಶೇಕಡಾ 25 ರಷ್ಟು ಕಡಿತ ಮಾಡಲಾಗಿದೆ. ಆದರೆ ಮುಂಗಡ ಬುಕಿಂಗ್, ಸೂಪರ್ಫಾಸ್ಟ್ ಸರ್ಚಾರ್ಜ್, ಜಿಎಸ್ಟಿ ಸೇರಿದಂತೆ ಇತರ ಶುಲ್ಕ ಯಥಾ ಪ್ರಕಾರ ಇರಲಿದೆ. ಕಳದೆ 30 ದಿನದಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಭರ್ತಿಯಾದ ರೈಲು ಮಾರ್ಗದ ಎಸಿ ಕೋಚ್ಗಳ ಟಿಕೆಟ್ ಬೆಲೆ ಶೇಕಡಾ 25 ರಷ್ಟು ಕಡಿತಗೊಳ್ಳಲಿದೆ. ಇನ್ನು ಕಳೆದ 30 ದಿನಗಳಲ್ಲಿ ಯಾವ ಮಾರ್ಗದ ರೈಲಿನ ಎಸಿ ಕೋಚ್ ಸೀಟುಗಳು ಶೇಕಡಾ 50ಕ್ಕಿಂತ ಮೇಲ್ಪಟ್ಟು ಭರ್ತಿಯಾಗಿದ್ದರೆ ಅಂತಹ ಎಸಿ ಕೋಚ್ಗಳ ಟಿಕೆಟ್ ದರ ಇಳಿಕೆ ಇಲ್ಲ. ಟಿಕೆಟ್ ದರದಲ್ಲಿ ಶೇಕಡಾ 25 ರಷ್ಟು ಕಡಿತ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಈ ಡಿಸ್ಕೌಂಟ್ ಆಫರ್ ಗರಿಷ್ಠ 6 ತಿಂಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಇದರ ನಡುವೆ ಎಸಿ ಕೋಚ್ಗಳ ಸೀಟುಗಳಿಗೆ ಭಾರಿ ಬೇಡಿಕೆ ವ್ಯಕ್ತವಾದರೆ ಟಿಕೆಟ್ ದರ ಪರಿಷ್ಕರಣೆಯಾಗಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ಪರಿಷ್ಕೃತ ದರ ಅನ್ವಯಾಗುವುದಿಲ್ಲ. ಹೀಗಾಗಿ ಮುಂಗಡ ಟಿಕೆಟ್ ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ರಿಫಂಡ್ ಸೌಲಭ್ಯ ಇರುವುದಿಲ್ಲ.