ತಿಮಿಂಗಿಲ ದೇಹದಲ್ಲಿತ್ತು ಬರೋಬ್ಬರಿ 10 ಕೆಜಿ ʼಫ್ಲೋಟಿಂಗ್‌ ಗೋಲ್ಡ್ʼ! – ʼತೇಲುವ ಚಿನ್ನʼ ಇಷ್ಟೊಂದು ದುಬಾರಿ ಏಕೆ?

ತಿಮಿಂಗಿಲ ದೇಹದಲ್ಲಿತ್ತು ಬರೋಬ್ಬರಿ 10 ಕೆಜಿ ʼಫ್ಲೋಟಿಂಗ್‌ ಗೋಲ್ಡ್ʼ! – ʼತೇಲುವ ಚಿನ್ನʼ ಇಷ್ಟೊಂದು ದುಬಾರಿ ಏಕೆ?

ವಾಷಿಂಗ್ಟನ್:‌ ಸಮುದ್ರ ತೀರದಲ್ಲಿ ಅಲೆಗಳು ಅಪ್ಪಳಿಸುವಾಗ ಭಾರಿ ಗಾತ್ರ  “ಸ್ಪರ್ಮ್‌ ತಿಮಿಂಗಿಲ” (ದೊಡ್ಡ ಹಲ್ಲುಗಳ ತಿಮಿಂಗಿಲ) ತೀರಕ್ಕೆ ಅಪ್ಪಳಿಸಿದೆ. ಆ ತಿಮಿಂಗಿಲದ ದೇಹದಲ್ಲಿ ಬರೋಬ್ಬರಿ 10 ಕೆಜಿ ಫ್ಲೋಟಿಂಗ್‌ ಗೋಲ್ಡ್ (ಅಂಬರ್ಗೀಸ್‌) ಪತ್ತೆಯಾಗಿದೆ.

ಕ್ಯಾನರಿ ದ್ವೀಪದ ಲಾ ಪಾಲ್ಮಾ ನೋಗಾಲ್ಸ್‌ ಸಮುದ್ರ ತೀರದಲ್ಲಿ ಸ್ಪರ್ಮ್‌ ತಿಮಿಂಗಿಲ ಅವಶೇಷ ಪತ್ತೆಯಾಗಿದೆ. ಈ ತಿಮಿಂಗಿಲದ ದೇಹದಲ್ಲಿ ತೇಲುವ ಚಿನ್ನ ಎಂದೇ ಬಿಂಬಿತವಾಗಿರುವ ಸುಮಾರು 10  ಕೆಜಿಗಳಷ್ಟು ಅನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ದುಬಾರಿ ಬೆಲೆಯ ಅಂಬರ್ಗೀಸ್‌ ಅನ್ನು ಲಾಸ್‌ ಪಾಲ್ಮಾಸ್‌ ಯೂನಿರ್ವಸಿಟಿಯ ಪ್ರಾಣಿ ಆರೋಗ್ಯ ಮತ್ತು ಆಹಾರ ಭದ್ರತಾ ಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಫೆರ್ನಾಂಡಿಸ್‌ ರೋಡ್ರಿಗಸ್‌ ಅವರು ವಶಕ್ಕೆ ಪಡೆದಿದ್ದಾರೆ. 10  ಕೆಜಿ ತಿಮಿಂಗಿಲ ವಾಂತಿಯ 3 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 35 ವರ್ಷಗಳ ನಂತರ ಪ್ರೇಮಿಗಳ ಪುನರ್ಮಿಲನ – ಪ್ರೀತಿ ಎಂದರೆ ಇದುವೆ ತಾನೇ…!

ಲಾಸ್‌ ಪ್ಲಾಮಾಸ್‌ ಡಿ ಗ್ರಾನ್‌ ಕೆನರಿಯಾ ವಿಶ್ವವಿದ್ಯಾಲಯದ ತಜ್ಞರ ಮಾಹಿತಿಯಂತೆ, ಅಂಬರ್‌ ಗ್ರೀಸ್‌ ಎಂದು ಕರೆಯಲ್ಪಡುವ ವಾಂತಿಯು ಸುಮಾರು 10 ಕೆಜಿಯಷ್ಟು ತೂಕವಿದೆ. ತಿಮಿಂಗಿಲದ ಕರುಳಿನಲ್ಲಿ ಹುಣ್ಣಾಗಲು ಕಾರಣವಾಗಿದ್ದರಿಂದ ಅದು ಸಾವನ್ನಪ್ಪಿದೆ. ಸಾವನ್ನಪ್ಪಿರುವ ಸ್ಪರ್ಮ್‌ ತಿಮಿಂಗಿಲ 33 ಅಡಿ ಉದ್ದವಿದ್ದು, 2 ಅಡಿ ಅಗಲವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ಫ್ಲೋಟಿಂಗ್ಗೋಲ್ಡ್

ಸ್ಪರ್ಮ್‌ ತಿಮಿಂಗಿಲದ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇದೆ. ಸ್ಪರ್ಮ್‌ ತಿಮಿಂಗಿಲದ ವಾಂತಿಯನ್ನು “ಅಂಬರ್‌ ಗ್ರೀಸ್”‌ ಎಂದು ಕರೆಯುತ್ತಾರೆ. ಈ ಅಂಬರ್‌ ಗ್ರೀಸ್‌ ಅನ್ನು ಸೌಂದರ್ಯವರ್ಧಕ ವಸ್ತುಗಳ ತಯಾರಿಕೆ ಹಾಗೂ ಸುಗಂಧ ದ್ರವ್ಯ ತಯಾರಿಕೆ ಉದ್ಯಮದಲ್ಲಿ ಭಾರೀ ಬೇಡಿಕೆ ಹೊಂದಿದೆ. ಕುತೂಹಲದ ವಿಷಯವೆಂದರೆ ಸ್ಪರ್ಮ್‌ ತಿಮಿಂಗಿಲದ ದೇಹದೊಳಗೆ ಈ ಅಂಬರ್‌ ಗ್ರೀಸ್‌ ವಸ್ತು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಈವರೆಗೂ ಸಾಧ್ಯವಾಗಿಲ್ಲ. ಆದರೆ ತಿಮಿಂಗಿಲ ಕೊಕ್ಕಿನಂತಹ ಜಲಚರವನ್ನು ತಿಂದ ಸಂದರ್ಭದಲ್ಲಿ ಅಂಬರ್‌ ಗ್ರೀಸ್‌ ಸೃಷ್ಟಿಯಾಗುತ್ತದೆ ಎಂದು ನಂಬಲಾಗಿದೆ.

suddiyaana