ಸಮಂತಾಗೆ ಮತ್ತೆ ಕೈ ಕೊಟ್ಟ ಆರೋಗ್ಯ.. 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?

ಸಮಂತಾಗೆ ಮತ್ತೆ ಕೈ ಕೊಟ್ಟ ಆರೋಗ್ಯ.. 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?

ಸೌತ್ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ರುತ್​ ಪ್ರಭು ಅವರು ಅನಾರೋಗ್ಯದ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಸಮಂತ ಮಯೋಸೈಟೀಸ್ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿಂದೆ ಹಲವು ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಸಮಂತಾ ಬದುಕಿನಲ್ಲಿ ಎಲ್ಲವೂ ಸರಿಯಾಯಿತು ಎಂದು ಅಭಿಮಾನಿಗಳು ಖುಷಿಪಡುತ್ತಿರುವಾಗಲೇ ಮತ್ತೆ ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ಸಮಂತಾಗೆ ಮತ್ತೆ ಈ ಕಾಯಿಲೆ ಮರುಕಳಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮುಂಜಾನೆ ರಿಲೀಸ್ ಆದ ‘ಸಲಾರ್’ ಸಿನಿಮಾ ಟೀಸರ್ – ‘ಕೆಜಿಎಫ್ 2’ ಚಿತ್ರಕ್ಕೆ ಇದೆಯಂತೆ ಲಿಂಕ್..!

ಸಮಂತ ಅವರು ಒಂದು ವರ್ಷ ಚಿತ್ರರಂಗದಲ್ಲಿ ಬ್ರೇಕ್​ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಅಂತಾ ಸುದ್ದಿಯಾಗಿತ್ತು. ಇದಕ್ಕೆ ಕಾರಣ ಮಯೋಸೈಟೀಸ್ ಕಾಯಿಲೆ ಎಂದು ಹೇಳಲಾಗುತ್ತಿತ್ತು. ಇದೀಗ ಸಮಂತ ಈ ಕಾಯಿಲೆಗೆ  ವಿದೇಶದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಚಿಕಿತ್ಸೆ ಪಡೆಯುವ ಸಲುವಾಗಿಯೇ ಸಮಂತಾ ಅವರು ಬ್ರೇಕ್​ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಸಮಂತ ವಿಜಯ್​ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವರುಣ್ ಧವನ್​ ಜೊತೆ ಸಿಟಾಡೆಲ್​ ವೆಬ್​ ಸರಣಿಯ ಇಂಡಿಯನ್​ ವರ್ಷನ್​ನಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಒಂದು ಇಂಗ್ಲಿಷ್​ ಸಿನಿಮಾದಲ್ಲೂ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಸಮಂತಾ ಅವರು ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸಲು ಸಖತ್ ಆಸಕ್ತಿ ತೋರಿಸುತ್ತಾರೆ. ಅದೇ ಅವರಿಗೆ ಮುಳುವಾಗಬಹುದು ಎಂದು ಕೆಲವರು ಊಹಿಸಿದ್ದರು. ಅನಾರೋಗ್ಯದಿಂದ ಕೊಂಚ ಚೇತರಿಸಿಕೊಂಡ ಬಂದ ಬಳಿಕ ಅವರು ಕಿಂಚಿತ್ತೂ ವಿಶ್ರಾಂತಿ ಇಲ್ಲದೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಅದೂ ಸಾಲದೆಂಬಂತೆ ಹಲವು ದೇಶಗಳನ್ನು ಸುತ್ತಿದರು. ಇದರಿಂದ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿರಬಹುದು ಎನ್ನಲಾಗುತ್ತಿದೆ

ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ರುತ್​ ಪ್ರಭು ಅವರು ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರ ನಿಲುವು ಬದಲಾಯಿತು. ಎಷ್ಟೇ ಬೋಲ್ಡ್​ ಆದಂತಹ ಪಾತ್ರ ಮಾಡಲೂ ಅವರು ಹಿಂದೇಟು ಹಾಕುತ್ತಿಲ್ಲ. ‘ಖುಷಿ’ ಸಿನಿಮಾ ಮತ್ತು ‘ಸಿಟಾಡೆಲ್​’ ವೆಬ್​ ಸರಣಿ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.

suddiyaana