ಹರಕೆ ಈಡೇರಿದ ಖುಷಿಗೆ ಮೇಕೆಯನ್ನು ಬಲಿ ಕೊಟ್ಟ – ಅದೇ ಮೇಕೆಯ ಕಣ್ಣಿಗೆ ಬಲಿಯಾದ ನತದೃಷ್ಟ..!
ಮನಸಿನಲ್ಲಿ ಏನಾದರೂ ನೆನೆಸಿಕೊಂಡು ದೇವರ ಮೊರೆ ಹೋಗುವುದು ಸಹಜ. ಇನ್ನು ಕೆಲವರು ತಮ್ಮ ಬಯಕೆಯ ಈಡೇರಿಕೆಗಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಚತ್ತೀಸಘಡದಲ್ಲಿ ಒಬ್ಬ ವ್ಯಕ್ತಿ ತಾನು ಇಷ್ಟಪಟ್ಟ ಕೆಲಸ ಆಗಿದಕ್ಕೆ ಕುರಿಯನ್ನು ಹರಕೆಯಾಗಿ ಬಲಿ ಕೊಟ್ಟಿದ್ದ. ಆದರೆ, ಅದೇ ಹರಕೆಯ ಕುರಿಯ ಕಣ್ಣಿಗೆ ದಾರುಣವಾಗಿ ಬಲಿಯಾಗಿದ್ದಾನೆ. ಆಶ್ಚರ್ಯವಾದರೂ ಇದೊಂದು ಸತ್ಯ ಘಟನೆ. ಆ ವ್ಯಕ್ತಿ ಯಾವ ಮೇಕೆಯನ್ನು ದೇವರಿಗೆ ಬಲಿ ಕೊಟ್ಟಿದ್ದಾನೋ ಅದೇ ಮೇಕೆಯ ಕಣ್ಣಿನಿಂದ ಆತ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ನಮೀಬಿಯಾದ ಮತ್ತೊಂದು ಚೀತಾ ಕಾಡಿಗೆ ರಿಲೀಸ್ – ಕುನೋ ಅರಣ್ಯದಲ್ಲಿ ಚೀತಾಗಳ ಸಂಖ್ಯೆ 10 ಕ್ಕೆ ಏರಿಕೆ
ಸುರಾಜ್ಪುರ ಜಿಲ್ಲೆಯ ಮದನಪುರ್ ಗ್ರಾಮದ 50 ವರ್ಷದ ಬಗರ್ ಸಾಯಿ ತನ್ನ ಕನಸು ನನಸಾಗಿಸಲು ಹಲವು ಪ್ರಯತ್ನ ಪಟ್ಟಿದ್ದ. ಪರಿಶ್ರಮ, ಪ್ರಯತ್ನಕ್ಕೆ ಫಲ ನೀಡಲಿಲ್ಲ. ಆದರೆ ತನ್ನ ಪ್ರಯತ್ನ ಮಾತ್ರ ಬಿಡಲಿಲ್ಲ. ಇತ್ತ ಕೋಪಾಧಾಮ್ ಬಳಿಯ ಗ್ರಾಮ ದೇವರಿಗೆ ತನ್ನ ಕನಸು ಕೈಗೂಡಿದರೆ ಮೇಕೆಯನ್ನು ಬಲಿ ಕೊಡುವುದಾಗಿ ಹರಕೆ ಹೊತ್ತಿದ್ದ. ಹರಕೆ ಹೊತ್ತ ಕೆಲ ದಿನಗಳಲ್ಲೇ ಈತನ ಕನಸು ನನಸಾಗಿದೆ. ಅಂದುಕೊಂಡಂತೆ ಕೆಲಸವೂ ಆಗಿದೆ. ಈತನ ಖುಷಿಗೆ ಪಾರವೇ ಇರಲಿಲ್ಲ. ಹೀಗಾಗಿ ಕೋಪಾಧಾಮಕ್ಕೆ ತೆರಳಿ ಮೇಕೆ ಬಲಿಕೊಡಲು ಮುಂದಾಗಿದ್ದಾನೆ. ಕೋಪಾಧಾಮ್ ಬಳಿಯ ಗುಡಿಯ ವಿಶೇಷತೆ ಅಂದರೆ ಮೇಕೆ ಅಥವಾ ಕೋಳಿಯನ್ನು ಬಲಿಕೊಟ್ಟು ಅಲ್ಲಿಯೇ ಅಡುಗೆ ಮಾಡಿ ಎಲ್ಲರೂ ಜೊತೆಯಾಗಿ ಆಹಾರ ಸೇವಿಸುವುದು ಪದ್ಧತಿ. ಕುಟುಂಬದೊಳಗಿನ ಮನಸ್ತಾಪ, ಇಷ್ಟಾರ್ಥಗಳು ಸೇರಿದಂತೆ ಎಲ್ಲವನ್ನು ಈ ಗುಡಿ ದೇವರು ಪರಿಹರಿಸುತ್ತಾರೆ ಅನ್ನೋದು ನಂಬಿಕೆ. ತನ್ನ ಇಷ್ಟಾರ್ಥ ಈಡೇರಿದ ಕಾರಣ ಬಗರ್ ಸಾಯಿ ಹಾಗೂ ಕೆಲ ಸ್ಥಳೀಯರು ಪೂಜೆ ಸಲ್ಲಿಸಿ ಮೇಕೆಯನ್ನು ಬಲಿಕೊಟ್ಟಿದ್ದಾರೆ. ಬಳಿಕ ಗ್ರಾಮಸ್ಥರು ಅಡುಗೆ ಮಾಡಿದ್ದಾರೆ. ಮೇಕೆಯ ಕಣ್ಣನ್ನು ಕೂಡಾ ಸೇರಿಸಿ ಅಡುಗೆ ಮಾಡಲಾಗಿದೆ. ಊಟ ಮಾಡುವಾಗ ಬಗರ್ ಸಾಯಿ ಒಂದು ಕಣ್ಣು ತೆಗೆದು ಬಾಯಿಗೆ ಹಾಕಿದ್ದಾನೆ. ಈ ಕಣ್ಣು ನೇರವಾಗಿ ಗಂಟಲಿನಲ್ಲಿ ಸಿಲುಕಿದೆ. ಕೆಲವೇ ಕ್ಷಣದಲ್ಲಿ ಈತ ಕುಸಿದು ಬಿದ್ದಿದ್ದಾನೆ. ಗಂಟಲಿನಲ್ಲಿ ಮೇಕೆ ಕಣ್ಣು ಸಿಲುಕಿಕೊಂಡ ಕಾರಣ ಉಸಿರಾಟದ ಸಮಸ್ಯೆಯಾಗಿದೆ. ತಕ್ಷಣವೇ ಸ್ಥಳೀಯರು ಸೂರಾಜ್ಪುರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಆಸ್ಪತ್ರೆ ಸಾಗಿಸುವ ದಾರಿಯ ಮಧ್ಯಯೇ ಬಗರ್ ಸಾಯಿ ಮೃತಪಟ್ಟಿದ್ದಾನೆ. ಮೇಕೆ ಕೊಂದು ಅಡುಗೆ ಮಾಡಿದ ಬಗರ್ ಸಾಯಿ ಇದೀಗ ಮೇಕೆಯ ಕಣ್ಣಿನಿಂದಲೇ ಮೃತಪಟ್ಟಿದ್ದಾನೆ. ಬಗರ್‌ಸಾಯಿ ಸಾವಿನಿಂದಾಗಿ ಪೂಜಾ ಕಾರ್ಯದಲ್ಲಿ ಲೋಪವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.