ಮುಖಕ್ಕೆ ಶೀಲ್ಡ್, ಕೆದರಿದ ಕೂದಲು – ‘ಬುದ್ಧಿವಂತ 2’ ಚಿತ್ರದಲ್ಲಿ ಉಪ್ಪಿ ಡಿಫರೆಂಟ್ ಲುಕ್

ಮುಖಕ್ಕೆ ಶೀಲ್ಡ್, ಕೆದರಿದ ಕೂದಲು – ‘ಬುದ್ಧಿವಂತ 2’ ಚಿತ್ರದಲ್ಲಿ ಉಪ್ಪಿ ಡಿಫರೆಂಟ್ ಲುಕ್

ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದರೂ ಸಮ್‌ಥಿಂಗ್ ಸ್ಪೆಷಲ್ ಆಗಿಯೇ ಇರುತ್ತದೆ. ಇದೀಗ ಉಪೇಂದ್ರ ಡಿಫರೆಂಟ್ ಗೆಟಪ್‌ನೊಂದಿಗೆ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ. ಇತ್ತೀಚೆಗಷ್ಟೇ   ‘ಬುದ್ಧಿವಂತ 2’ ಚಿತ್ರದಲ್ಲಿ ಉಪ್ಪಿ ಲುಕ್ ಫುಲ್ ಚೇಂಜ್ ಆಗಿದೆ ಅನ್ನೋ ಮಾತು ಕೇಳಿಬರುತ್ತಿತ್ತು. ಸಿನಿಮಾದ ಪೋಸ್ಟರ್ ಅನಾವರಣಗೊಂಡಿದ್ದು, ನಟ ಉಪೇಂದ್ರ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಇದನ್ನೂ ಓದಿ: ‘ಟೋಬಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ರಗಡ್ ಲುಕ್..! – ನಟನ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿ..!

‘ಬುದ್ಧಿವಂತ 2’ ಸಿನಿಮಾ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಈ ವಿಚಾರ ತಿಳಿದು ಉಪ್ಪಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ. 2008ರಲ್ಲಿ ‘ಬುದ್ಧಿವಂತ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಹಲವು ಗೆಟಪ್‌ಗಳಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚು ಇಷ್ಟ ಆಗಿತ್ತು. ಹಿಟ್ ಸಿನಿಮಾಗಳಿಗೆ ಸೀಕ್ವೆಲ್ ಮಾಡೋದು ಸಹಜ. ಅದೇ ರೀತಿ ‘ಬುದ್ಧಿವಂತ 2’ ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಪೋಸ್ಟರ್ ನಲ್ಲಿ ಉಪೇಂದ್ರ ಅವರು ಮುಖಕ್ಕೆ ಶೀಲ್ಡ್ ಧರಿಸಿದ್ದಾರೆ. ಅವರ ಕಣ್ಣುಗಳು ಭಯದಿಂದ ಕೂಡಿದೆ. ಕೂದಲು ಕೆದರಿಕೊಂಡಿದೆ. ‘ಬುದ್ಧಿವಂತ 2’ ಟೈಟಲ್ ಬಳಿ ಬೆಂಕಿ ಇದೆ. ಈ ಕಾರಣಕ್ಕೆ ಈ ಶೀರ್ಷಿಕೆ ಹೆಚ್ಚು ಗಮನ ಸೆಳೆಯುತ್ತಿದೆ. ಟಿಆರ್ ಚಂದ್ರಶೇಖರ್ ಅವರು ‘ಬುದ್ಧಿವಂತ 2’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜಯರಾಮ್ ಮಾಧವನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

suddiyaana