ರಾಮ್ ಚರಣ್ ಪುತ್ರಿಗೆ ಮುಕೇಶ್ ಅಂಬಾನಿಯಿಂದ ದುಬಾರಿ ಉಡುಗೊರೆ – 1ಕೋಟಿ ಮೌಲ್ಯದ ಚಿನ್ನದ ತೊಟ್ಟಿಲು ಗಿಫ್ಟ್
ಟಾಲಿವುಡ್ನ ಮೆಗಾ ಕುಟಂಬಕ್ಕೆ ಹೊಸ ಅತಿಥಿಯ ಆಗಮನವಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ರಾಮ್ ಚರಣ್ ಹಾಗೂ ಉಪಾಸನಾ ದಂಪತಿಯ ಮುದ್ದು ಮಗಳ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣ ಸಮಾರಂಭ ಶುಕ್ರವಾರ ನೆರವೇರಿದೆ. ಇದೀಗ ಮೆಗಾ ಕುಟಂಬದ ರಾಜಕುಮಾರಿಗೆ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.
ಸೂಪರ್ಸ್ಟಾರ್ ರಾಮ್ಚರಣ್ ಅವರ ಪತ್ನಿ ಉಪಾಸನಾ ಅವರು ಜೂನ್ 20ರ ಬೆಳಗ್ಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗು ಹುಟ್ಟುವ ಮೊದಲೇ ಸಾಕಷ್ಟು ಉಡುಗೊರೆಗಳು ಲಭಿಸಿವೆ. ಶುಕ್ರವಾರ ಮೆಗಾ ಕುಟುಂಬದಲ್ಲಿ ನಾಮಕರಣ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಇದರ ಬೆನ್ನಲ್ಲೇ ದೇಶದ ಉದ್ಯಮಿ ಮುಕೇಶ್ ಅಂಬಾನಿ. ಬಂಗಾರದ ತೊಟ್ಟಿಲನ್ನು ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಮಗಳ ಹೆಸರು ಕ್ಲಿಕಾಕೊ! – ವಿಚಿತ್ರ ಹೆಸರಿನ ಅರ್ಥವೇನು ಗೊತ್ತಾ?
ರಾಮ್ಚರಣ್ ಮಗಳಿಗೆ ಮುಕೇಶ್ ಅಂಬಾನಿ ಚಿನ್ನದ ತೊಟ್ಟಿಲು ನೀಡಿದ್ದಾರೆ. ಈ ಚಿನ್ನದ ತೊಟ್ಟಿಲಿನ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಆದರೆ ರಾಮ್ ಚರಣ್ ಆಗಲಿ ಅಥವಾ ಅಂಬಾನಿಯಾಗಲಿ ಈ ಕುರಿತು ಯಾವುದೇ ಮಾಹಿತಿಯನ್ನು ನೀಡದೇ ಇದ್ದರೂ, ಈ ಉಡುಗೊರೆಯ ಸುದ್ದಿಯಂತೂ ಭಾರಿ ವೈರಲ್ ಆಗಿದೆ.
ಮಗಳಿಗೆ ಏನೆಲ್ಲ ಗಿಫ್ಟ್ ಗಳು ಬಂದಿವೆ ಎನ್ನುವ ಕುರಿತು ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅವರಿಗೊಂದು ಧನ್ಯವಾದಗಳನ್ನು ತಿಳಿಸುತ್ತಾ ಬಂದಿದ್ದಾರೆ. ಮಗಳಿಗಾಗಿ ಸಂಗೀತ ನೀಡಿದ್ದ ಆರ್.ಆರ್.ಆರ್ ಗಾಯಕನ ಕುರಿತು ಈ ಹಿಂದೆ ಅವರು ಬರೆದಿದ್ದರು. ಆದರೆ, ತೊಟ್ಟಿಲು ಗಿಫ್ಟ್ ಕುರಿತು ಯಾವುದೇ ಮಾಹಿತಿಯನ್ನು ರಾಮ್ ಚರಣ್ ಹಂಚಿಕೊಂಡಿಲ್ಲ. ಆದರೆ, ಬಂಗಾರದ ತೊಟ್ಟಿಲಂತೂ ಭಾರೀ ಸದ್ದು ಮಾಡುತ್ತಿದೆ.
ರಾಮ್ ಚರಣ್ ಹಾಗೂ ಉಪಾಸನಾ ಅವರು ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ಕ್ಲಿನ್ ಕಾರ ಕೊನಿಡೆಲಾʼ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿಡಲು ಕಾರಣವೇನೆಂದರೆ, ಆ ಹೆಸರನ್ನು ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆಯಂತೆ. ಕ್ಲಿನ್ ಕಾರ ಎಂಬುದು ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ ಎಂದು ಮೆಗಾ ಕುಟುಂಬ ಹೇಳಿದೆ.