ಇಂದಿನಿಂದ ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಜಾರಿ – ಇಲ್ಲಿದೆ ಮಹತ್ವದ ಮಾಹಿತಿ

ಇಂದಿನಿಂದ ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಜಾರಿ – ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು: ಸಾಲು ಸಾಲು ಸವಾಲು, ವಿಪಕ್ಷನಾಯಕರ ಟೀಕೆ ನಡುವೆಯೇ ರಾಜ್ಯ ಸರ್ಕಾರ ಮತ್ತೆರಡು ಯೋಜನೆಗಳ ಚಾಲನೆಗೆ ಮುಂದಾಗಿದೆ. ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗೆ ಕೌಂಟ್​ಡೌನ್ ಶುರುವಾಗಿದೆ. ಜುಲೈ 1ರಿಂದ ಬಳಸುವ 200 ಯುನಿಟ್ ಒಳಗಿನ ಸರಾಸರಿ ವಿದ್ಯುತ್​ಗೆ ಬಿಲ್ ಕಟ್ಟುವಂತಿಲ್ಲ. ಹಾಗೇ ಅನ್ನಭಾಗ್ಯ ಯೋಜನೆ ಕೂಡ ಜುಲೈ 1ರಿಂದಲೇ ಜಾರಿಯಾಗಲಿದೆ.

ಇದನ್ನೂ ಓದಿ:  ಜುಲೈ 1 ರಿಂದ ಅನ್ನಭಾಗ್ಯ ಜಾರಿ – ಅಕ್ಕಿ ಜೊತೆ ಖಾತೆಗೆ ಜಮೆಯಾಗುತ್ತೆ ಹಣ

ಗೃಹಜ್ಯೋತಿ ಯೋಜನೆಗೆ ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ರಾಜ್ಯಾದ್ಯಂತ ಈಗಾಗಲೇ ಸುಮಾರು 90 ಲಕ್ಷ ಗ್ರಾಹಕರಿಂದ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜು. 1ರಿಂದ 200 ಯುನಿಟ್ ಒಳಗೆ ಬಳಸಿದ ವಿದ್ಯುತ್ ಬಿಲ್ ಪಾವತಿ ಮಾಡಬೇಕೆಂದಿಲ್ಲ. ಜುಲೈ ತಿಂಗಳಲ್ಲಿ ಬಳಸುವ ವಿದ್ಯುತ್ ಬಿಲ್ ಆಗಸ್ಟ್ ಗೆ ಬರಲಿದೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿ ಲಾಭ ಸಿಗಲಿದೆ. ಸರಾಸರಿ ಬಿಲ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ರೆ ಬಿಲ್ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೇ ಜೂನ್‌ ತಿಂಗಳ ಬಿಲ್‌ ನಲ್ಲಿ ಯಾವುದೇ ಬಾಕಿ ಉಳಿಸುವಂತಿಲ್ಲ.

ಇನ್ನು ಅನ್ನಭಾಗ್ಯ ಯೋಜನೆ ಕೂಡ ಶನಿವಾರದಿಂದ್ಲೇ ಜಾರಿಯಾಗಿದೆ. ಆದ್ರೆ ಸರ್ಕಾರ 10 ಕೆಜಿ ಅಕ್ಕಿ ನೀಡುವ ಬದಲಿಗೆ 5 ಕೆಜಿ ಅಕ್ಕಿ, ಉಳಿದ 5 ಕೆಜಿ ಅಕ್ಕಿಗೆ ಹಣ ನೀಡಲಿದೆ. 34 ರೂ.ನಂತೆ 170 ರೂಪಾಯಿ, ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಿದೆ. ಒಟ್ಟು 1 ಕೋಟಿ 28 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿದ್ದು, ಅದರಲ್ಲಿ ಒಟ್ಟು 1.22 ಕೋಟಿ ಕಾರ್ಡ್‌ ಗಳ ಆಧಾರ್ ಸೀಡಿಂಗ್ ಆಗಿದೆ. ಬಾಕಿ ಇರುವ 6 ಲಕ್ಷ ಕಾರ್ಡ್‌ ಗಳು ಆಧಾರ್ ಲಿಂಕ್ ಆಗಬೇಕು. ಆಧಾರ್ ಲಿಂಕ್ ಆಗುತ್ತಿದ್ದಂತೆ ಬ್ಯಾಂಕ್ ಅಕೌಂಟ್ ಅಪ್ಡೇಟ್ ಆಗಲಿದೆ.

suddiyaana