ಬೋಟ್‌ನಲ್ಲಿ ಹೋಗುವಾಗ ಎಚ್ಚರ – ಸ್ವಲ್ಪ ಯಾಮಾರಿದ್ರೂ ಶಾರ್ಕ್‌ಗೆ ಆಹಾರವಾಗುತ್ತೀರ!

ಬೋಟ್‌ನಲ್ಲಿ ಹೋಗುವಾಗ ಎಚ್ಚರ – ಸ್ವಲ್ಪ ಯಾಮಾರಿದ್ರೂ ಶಾರ್ಕ್‌ಗೆ ಆಹಾರವಾಗುತ್ತೀರ!

ಪ್ರವಾಸಕ್ಕೆ ತೆರಳಿದಾಗ ಕೆಲ ಮಂದಿ ತಮ್ಮ ಶೂರತ್ವ ಪ್ರದರ್ಶನ ಮಾಡುತ್ತಾರೆ. ಯಾವುದನ್ನು ಬೇಡ ಎನ್ನತ್ತೇವೋ ಅದನ್ನೇ ಮಾಡುತ್ತಾರೆ. ಇದರಿಂದಾಗಿ ಅನೇಕರು ತಮ್ಮ ಜೀವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೂದಲೆಳೆ ಅಂತರದಲ್ಲಿ ಪಾರಾದ ಉದಾಹರಣೆಯೂ ನಮ್ಮ ಮುಂದೆ ಇದೆ. ಇದೀಗ ಇಲ್ಲೊಬ್ಬ ವ್ಯಕ್ತಿ ಶಾರ್ಕ್‌ ಗೆ ಉಪಟಳ ಕೊಡಲು ಹೋಗಿ ಆತನೇ ಅಪಾಯಕ್ಕೆ ಸಿಲುಕಿದ್ದಾನೆ.

ಇದನ್ನೂ ಓದಿ: ಮೊಟ್ಟೆಗಳಿಗೆ ಕೈ ಹಾಕಿದ್ರೆ ಹುಷಾರ್‌..! – ಮೊಟ್ಟೆ ಮುಟ್ಟಲು ಬಂದವನಿಗೆ ಹೆಬ್ಬಾವು ಮಾಡಿದ್ದೇನು?

ಕೆಲ ವ್ಯಕ್ತಿಗಳೇ ಹಾಗೇ ಏನು ಮಾಡಬಾರದು ಎಂದು ಹೇಳುತ್ತೇವೋ ಅದನ್ನೇ ಮಾಡುತ್ತಾರೆ. ಕಡೆಗೆ ಪೇಚಿಗೆ ಸಿಲುಕುತ್ತಾರೆ. ಅಮೆರಿಕದ ವ್ಯಕ್ತಿಯೊಬ್ಬಅಂಥದ್ದೇ ದುಸ್ಸಾಹಸಕ್ಕೆ ಮುಂದಾಗಿದ್ದು, ಕೂದಲೆಳೆಯ ಅಂತರದಲ್ಲಿ ಶಾರ್ಕ್‌ನ ಬಾಯಿಗೆ ಆಹಾರವಾಗುವುದರಿಂದ ತಪ್ಪಿಸಿಕೊಂಡಿದ್ದಾನೆ. ಈ ದೃಶ್ಯ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ವೈರಲ್‌ ಆದ ವಿಡಿಯೋದಲ್ಲಿ ಫ್ಲೊರಿಡಾದ ಎವರ್‌ಗ್ಲೆಡ್ಸ್‌ ನ್ಯಾಷನಲ್‌ ಪಾರ್ಕ್‌ನಲ್ಲಿ ಪ್ರವಾಸಿಗನೊಬ್ಬ ಬೋಟಿಂಗ್‌ಗೆ ತೆರಳಿದ್ದಾನೆ. ನಾವಿಕ ಎಷ್ಟೇ ಎಚ್ಚರಿಕೆ ನೀಡಿದರೂ, ನಿರ್ಲಕ್ಷಿಸಿ ನೀರಿನಲ್ಲಿ ಕೈ ಆಡಿಸುತ್ತಿರುತ್ತಾರೆ. ಈ ವೇಳೆ ಏಕಾಏಕಿ ಶಾರ್ಕ್‌ ಮೀನೊಂದು ಆತನ ಬಳಿ ಬರುತ್ತದೆ. ಆದರೂ ಕೂಡ ಆತ ನೀರಿನಲ್ಲಿ ತನ್ನ ಕೈ ಆಡಿಸುತ್ತಿರುತ್ತಾನೆ. ಈ ವೇಳೆ ಶಾಕ್‌ ಆತನ ಕೈ ಕಚ್ಚುವುದಲ್ಲದೇ, ಆತನನ್ನ ಎಳೆದು ನೀರಿಗೆ ಎಳೆದು ಹಾಕುತ್ತದೆ. ಅದೃಷ್ಟವಶಾತ್‌ ಜತೆಯಲ್ಲಿದ್ದವರ ಸಹಾಯದಿಂದ ವ್ಯಕ್ತಿ ಮತ್ತೆ ಬೋಟ್‌ ಏರಿ ಬಚಾವ್‌ ಆಗಿದ್ದಾನೆ.

suddiyaana