ಟೆಲಿಗ್ರಾಮ್ ನಲ್ಲಿ ಹೊಸ ಫೀಚರ್! – ಜುಲೈನಿಂದ ʼಸ್ಟೋರಿಸ್ʼ ವೈಶಿಷ್ಟ್ಯ ಆರಂಭ
ನವದೆಹಲಿ: ಟೆಲಿಗ್ರಾಮ್ ವಿಶ್ವದಾದ್ಯಂತ ಮಿಲಿಯನ್ಗಟ್ಟಲೇ ಬಳಕೆದಾರರನ್ನು ಹೊಂದಿದೆ. ಈ ಅಪ್ಲಿಕೇಷನ್ನಲ್ಲಿ ಇಲ್ಲಿವರೆಗೆ ಕೇವಲ ವಾಯ್ಸ್ ಕಾಲ್ ಹಾಗೂ ಮೆಸೇಜ್ ಮಾಡಲು ಮಾತ್ರ ಅವಕಾಶವಿತ್ತು. ಆದರೆ ಇನ್ನು ಮುಂದೆ ಟೆಲಿಗ್ರಾಮ್ ವಾಟ್ಸಾಪ್ನಂತೆ ಕಾರ್ಯನಿರ್ವಹಿಸಲಿದೆ. ಈ ಅಪ್ಲಿಕೇಷನ್ ನಲ್ಲಿ ಹೊಸ ಫೀಚರ್ ವೊಂದನ್ನ ಬಳಕೆದಾರಿಗೆ ಪರಿಚಯಿಸಲಾಗುತ್ತಿದೆ.
ಇದನ್ನೂ ಓದಿ: ಹಸು ಸಾಕಾಣಿಕೆಯಿಂದಲೇ ಅದೆಷ್ಟೋ ಯುವಕರಿಗೆ ಸ್ಪೂರ್ತಿ – ಕೋಟಿ ಬೆಲೆಯ ಬಂಗಲೆ ಕಟ್ಟಿದ ರೈತನಿಗೆ ಶಹಬ್ಬಾಸ್ ಗಿರಿ..!
ಟೆಲಿಗ್ರಾಮ್ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತ್ವರಿತ ಸಂದೇಶ ಕಳುಹಿಸುವ ಟೆಲಿಗ್ರಾಮ್ ಆ್ಯಪ್ ʼಸ್ಟೋರಿಸ್ʼ ಎಂಬ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಟೆಲಿಗ್ರಾಮ್ ʼಸ್ಟೋರಿಸ್ʼ ಜುಲೈ ಆರಂಭದಿಂದಲೇ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಸ್ಟೋರಿಸ್ಗಳು ನಮ್ಮ ಜೀವನಕ್ಕೆ ಹತ್ತಿರವಾಗಿದ್ದು, ನಮ್ಮ ಜೀವನದ ಸಂಗತಿಗಳ ಬಗ್ಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇವುಗಳ ಮೂಲಕ ಸ್ನೇಹಿತರು ಸೇರಿದಂತೆ ಸಂಬಂಧಿಕರು ಕೂಡ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಸ್ಗಳು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳುತ್ತವೆ, ಆದರೆ ಟೆಲಿಗ್ರಾಮ್ನಲ್ಲಿ ಬಳಕೆದಾರರು ತಮ್ಮ ಸ್ಟೋರಿಸ್ ಅಪ್ಲೋಡ್ ಮಾಡಿದ ನಂತರ ಯಾವಾಗ ಮುಕ್ತಾಯವಾಗಬೇಕು ನಿರ್ಧರಿಸಲು ನಾಲ್ಕು ಆಯ್ಕೆಗಳನ್ನು ಹೊಂದಿರುತ್ತಾರೆ. ಈ ಸ್ಟೋರಿಸ್ಗಳು 6, 12, 24, ಹಾಗೂ 48 ಗಂಟೆಗಳ ಮುಕ್ತಾಯ ಅವಧಿಯನ್ನು ಒಳಗೊಂಡಿರುತ್ತದೆ. ಜತೆಗೆ ಬಳಕೆದಾರರು ಟೆಲಿಗ್ರಾಮ್ನಲ್ಲಿ ತಮ್ಮ ಪ್ರೊಫೈಲ್ ಪುಟದಲ್ಲಿ ಸ್ಟೋರಿಸ್ಗಳನ್ನು ಶಾಶ್ವತವಾಗಿ ಪ್ರದರ್ಶಿಸಬಹುದಾಗಿದೆ ಎಂದು ಹೇಳಿದ್ದಾರೆ.