ಬಾಹ್ಯಾಕಾಶದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಅನಾವರಣ
ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದೇ ಬಿಟ್ಟಿದೆ. ಒಂದೆಡೆ ಐಸಿಸಿ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ, ವಿಶ್ವಕಪ್ ಟ್ರೋಫಿಯನ್ನು ಅತ್ಯಂತ ವಿಶೇಷವಾಗಿ ಆಗಸದಿಂದ ಅನಾವರಣಗೊಳಿಸಲಾಗಿದೆ. ಭುವಿಯಿಂದ ಸುಮಾರು 1,20,000 ಅಡಿ ಎತ್ತರದಲ್ಲಿ ಬಲೂನ್ಗೆ ಕಟ್ಟಿದ ಪ್ರತಿಷ್ಠಿತ ಬೆಳ್ಳಿಯ ಟ್ರೋಫಿಯನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚಿತ್ತಾಕರ್ಷಕ ರೀತಿಯಲ್ಲಿ ಇಳಿಸಲಾಗಿದೆ.
ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಪ್ರಕಟ – ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಕ್ರಿಕೆಟ್ ಹಬ್ಬ
ಅತ್ಯಾಧುನಿಕ 4ಕೆ ಕ್ಯಾಮೆರಾಗಳ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಇದು ಗಗನಕ್ಕೇರಿದ ಮೊದಲ ಕ್ರೀಡಾ ಟ್ರೋಫಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೂಲಕ ಕ್ರೀಡಾಲೋಕದಲ್ಲಿ ವಿಶೇಷ ಸಾಧನೆಯೊಂದನ್ನು ಐಸಿಸಿ ಹಾಗೂ ಬಿಸಿಸಿಐ ಮಾಡಿದೆ. ಇನ್ನು ಈ ಬಾರಿಯ ಐಸಿಸಿ ವಿಶ್ವಕಪ್ ಟ್ರೋಫಿ ವಿಶ್ವಪರ್ಯಟನೆ ನಡೆಸಲಿದ್ದು ವಿಶ್ವದ ಅನೇಕ ನಗರಗಳಿಗೆ ತೆರಳಲಿದೆ. ಕುವೈಟ್, ಬಹ್ರೈನ್, ಮಲೇಷ್ಯಾ, ಯುಎಸ್ಎ, ನೈಜೀರಿಯಾ, ಉಗಾಂಡಾ, ಫ್ರಾನ್ಸ್, ಇಟೆಲಿ, ಸೇರಿದಂತೆ ಒಟ್ಟು 18 ರಾಷ್ಟ್ರಗಳಿಗೆ ಪ್ರಯಾಣಿಸಲಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ನಡೆಯಲಿದೆ.