‘ಮಗಳು ಚೆನ್ನಾಗಿ ಹಾಡಿದ್ದಾಳೆ ತುಂಬಾ ಹೆಮ್ಮೆ ಆಗ್ತಿದೆ ಸಾನ್ವಿ’ – ಮುದ್ದಿನ ಪುತ್ರಿಯನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್

‘ಮಗಳು ಚೆನ್ನಾಗಿ ಹಾಡಿದ್ದಾಳೆ ತುಂಬಾ ಹೆಮ್ಮೆ ಆಗ್ತಿದೆ ಸಾನ್ವಿ’ – ಮುದ್ದಿನ ಪುತ್ರಿಯನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್, ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಜಿಮ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಚಿತ್, ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಟೈಟಲ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ತನ್ನ ಮಗಳ ಹಾಡು ಕೇಳಿ ಹೆಮ್ಮೆ ಪಟ್ಟಿದ್ದಾರೆ. ಮಗಳು ಹಾಡುತ್ತಾಳೆ ಎಂದು ಗೊತ್ತಿತ್ತು. ಆದರೆ, ಇಷ್ಟು ಚೆನ್ನಾಗಿ ಹಾಡುತ್ತಾಳೆ ಎಂದು ಗೊತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ ಎಂಬ ಪ್ರಶ್ನೆಗೆ ಆದಿಪುರುಷ್ ಸಿನಿಮಾದಲ್ಲಿದೆ ಉತ್ತರ -ಸೆಹ್ವಾಗ್ ಹೀಗೆ ಹೇಳಿದ್ಯಾಕೆ?

ಜಿಮ್ಮಿ ಚಿತ್ರದ ಮತ್ತೊಂದು ಸ್ಪೆಷಾಲಿಟಿ ಏನೆಂದರೆ ಸುದೀಪ್ ಪುತ್ರಿ ಹಾಲಿವುಡ್ ಗಾಯಕಿ ರೀತಿ ಹಾಡಿರುವುದು. ಸಾನ್ವಿ ಬಿಡುವಿನ ಸಮಯದಲ್ಲಿ ಹಾಡುತ್ತಿದ್ದರಂತೆ. ಮಗಳಿಗೆ ಇರುವ ವಿಭಿನ್ನ ಕಲೆ ಬಗ್ಗೆ ಈಗಾಗಲೆ ಅನೇಕ ಸಲ ಸುದೀಪ್ ಹೆಮ್ಮೆಯಿಂದ ಮಾತನಾಡಿದ್ದರು. ಜಿಮ್ಮಿ ವೇದಿಕೆ ಮೇಲೂ ಚಿತ್ರಕ್ಕೆ ಹಾಡಿರುವ ಹಾಡನ್ನು ಸಾನ್ವಿ ಹಾಡಿದ್ದಾರೆ. ಮಗಳು ಸ್ಟೇಜ್ ಮೇಲೆ ಹಾಡು ಹಾಡಿರುವ ಬಗ್ಗೆ ಸುದೀಪ್ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮುದ್ದಿನ ಪುತ್ರಿಯನ್ನು ಹಾಡಿ ಹೊಗಳಿದ್ದಾರೆ. ನನ್ನ ಮಗಳು ಸಾನ್ವಿ ಸಿನಿಮಾದಲ್ಲಿ ಹಾಡು ಹಾಡಿದ್ದಾಳೆ. ಇದು ಸಂಪೂರ್ಣ ಆಕೆಯ ನಿರ್ಧಾರ. ನನ್ನದೇನೂ ಇಲ್ಲ ಇದರಲ್ಲಿ. ಮಗಳ ಬಳಿ ಹಾಡಿಸಿರುವುದಕ್ಕೆ ವಾಸುಕಿ ವೈಭವ್ ಅವರಿಗೆ ಧನ್ಯವಾದಗಳನ್ನು ಹೇಳುವೆ. ನನ್ನ ಮಗಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತು ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಿರಲಿಲ್ಲ, ಇಷ್ಟು ಚೆನ್ನಾಗಿ ಹಾಡಿಸಿರುವುದಕ್ಕೆ ಥ್ಯಾಂಕ್ಯೂ. ತುಂಬಾ ಹೆಮ್ಮೆ ಫೀಲ್ ಆಗುತ್ತಿದೆ ಸಾನ್ವಿ’ ಎಂದು ಸುದೀಪ್ ಮಾತನಾಡಿದ್ದಾರೆ.

ಇನ್ನು ಸಾನ್ವಿ ಕೂಡಾ ಸಂಚಿತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ನನ್ನ ಅಣ್ಣ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ನಂಬಲಾಗದು. ಇದೊಂದು ಕ್ರೇಜಿ ಫೀಲಿಂಗ್ ತುಂಬಾ ಹೆಮ್ಮೆಯಾಗುತ್ತಿದೆ. ಎರಡು ದಿನಗಳ ಕಾಲ ಟೀಸರ್ ಚಿತ್ರೀಕರಣ ನಡೆಯಿತ್ತು ಆಗ ಸಂಚಿತ್ ಜೊತೆಗೆ ನಾನಿದ್ದೆ. ನಿನ್ನ ಶ್ರಮವನ್ನು ನಾನು ನೋಡಿರುವೆ…ಈ ಜರ್ನಿ ಬಗ್ಗೆ ಮಾತನಾಡಿದರೆ ಭಾವುಕಳಾಗುವೆ. ಏಕೆಂದರೆ ಸಂಚಿತ್ ಜೊತೆ ಆಟವಾಡಿಕೊಂಡು ಬೆಳೆದವಳು ನಾನು .ಖಂಡಿತಾ ದೊಡ್ಡ ಮಟ್ಟದಲ್ಲಿ ಅಣ್ಣ ಸಾಧನೆ ಮಾಡುತ್ತಾನೆ ಅನ್ನೋ ನಂಬಿಕೆ ನನಗಿದೆ’ ಎಂದು ಅಣ್ಣನ ಸಿನಿಮಾ ಬಗ್ಗೆ ಸಾನ್ವಿ ಮಾತನಾಡಿದ್ದಾರೆ.

suddiyaana