ಜೂ. 26 ರವರೆಗೆ ಕರ್ನಾಟಕದ ಹಲವೆಡೆ ಭಾರಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಕಳೆದ ಕೆಲ ತಿಂಗಳುಗಳಿಂದ ಉತ್ತರ ಭಾರತವನ್ನ ಕಾಡುತ್ತಿದ್ದ ಹೀಟ್ವೇವ್ ಅಂತ್ಯಗೊಂಡಿದ್ದು, ಬಿಸಿಲಿನ ಪ್ರಮಾಣ ಇಳಿಕೆಯಾಗಿದೆ. ಇನ್ನೇನಿದ್ರೂ ಮಳೆಯ ಆರ್ಭಟ ಶುರುವಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ: ವರುಣ ದೇವನ ಕೃಪೆಗಾಗಿ ನಡೆಯಿತು ಮಕ್ಕಳ ಮದುವೆ! – ವಿಶಿಷ್ಟ ಕಲ್ಯಾಣಕ್ಕೆ ಸಾಕ್ಷಿಯಾಯ್ತು ಸಕ್ಕರೆ ನಾಡು
ಜೂನ್ 26ರವರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿಪರೀತ ಮಳೆಯಾಗಲಿದೆ. ಜೂನ್ 25 ರಿಂದ ಜೂನ್ 27ರವರೆಗೆ ದೆಹಲಿಯಲ್ಲಿ ಭಾರಿ ಮಳೆಯಾಗಲಿದೆ. ಜೂನ್ 26ರ ಬಳಿಕ ರಾಜಸ್ಥಾನದಲ್ಲಿ ವಿಪರೀತ ಮಳೆಯಾಗಬಹುದು. ಹಾಗೆಯೇ ಹರಿಯಾಣ, ಪಂಜಾಬ್, ಛತ್ತೀಸ್ಗಢ, ಮಧ್ಯಪ್ರದೇಶದಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಅಂತಾ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಭಾರತದ ಜನತೆ ಇನ್ನು ವರುಣ ಅಬ್ಬರ ಎದುರಿಸೋಕೆ ಸಿದ್ಧವಾಗಬೇಕಿದೆ.