‘ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ’ – ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ಜಂಗೀಕುಸ್ತಿ
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಅಕ್ಕಿಗಾಗಿ ರಾಜಕೀಯ ಕಿತ್ತಾಟ ಶುರುವಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವೆಯೂ ಮಾತಿನ ಸಮರ ಜೋರಾಗಿದೆ. ಪ್ರದೀಪ್ ಈಶ್ವರ್ ಈ ಹಿಂದೆ ಬಿಜೆಪಿ ಸಂಸದರಾದ ತೇಜಸ್ವೀ ಸೂರ್ಯ, ಪ್ರತಾಪ್ ಸಿಂಹ ಮತ್ತು ಸಿ.ಟಿ ರವಿ ಅವರನ್ನು ತಾಕತ್ತು ಇದ್ದರೆ ನಿಮ್ಮ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆ ಮಾಡಲು ಬನ್ನಿ ಎಂದು ಓಪನ್ ಚಾಲೆಂಜ್ ಮಾಡಿದ್ರು. ಇದಕ್ಕೆ ಪ್ರತಿಯಾಗಿ ಪ್ರತಾಪ್ ಸಿಂಹ ಕೂಡಾ ಪ್ರದೀಪ್ ಈಶ್ವರ್ ಕಾಲೆಳೆದಿದ್ದರು.
ಇದನ್ನೂ ಓದಿ: ಎಡಪಂಥೀಯ ಮಹಿಳೆಯರಿಂತ ಬಲಪಂಥೀಯರೇ ಹೆಚ್ಚು ಸಂತೋಷದಿಂದ ಇರುತ್ತಾರೆ! – ಇದು ಭಾವನೆಗಳ ವಿಮರ್ಶೆ!
ಮೊದಲ ಬಾರಿ ಗೆದ್ದಿರುವ ಶಾಸಕರಿಗೆ , 40 ವರ್ಷ ಅನುಭವವುಳ್ಳ ಸಿದ್ದರಾಮಯ್ಯ ಅವರು ಒರಿಯಂಟೇಶನ್ ಪ್ರೋಗ್ರಾಂ ನಡೆಸುವ ಅಗತ್ಯ ಇದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಈ ಮಾತಿಗೆ ಪ್ರದೀಪ್ ಈಶ್ವರ್ ಮತ್ತೆ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ. ವಿಷಯಾಧಾರಿತ ಬಿಟ್ಟು ವೈಯಕ್ತಿಕ ವಿಚಾರದ ಬಗ್ಗೆ ಪ್ರತಾಪ್ ಸಿಂಹ ಮಾತನಾಡುತ್ತಿದ್ದಾರೆ. ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ರಿ. ಸಂಸದರಾದ ಮೇಲೆ ಓದುವುದನ್ನೇ ಬಿಟ್ಟಿದ್ದೀರಿ. ನಿಮಗೆ ತಲೆಗಿಲೆ ಏನಾದರೂ ಕೆಟ್ಟಿದೆಯಾ? ನಿಮಗೆ ತಾಕತ್ ಇದ್ದರೆ ಎಫ್‌ಸಿಐ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ನಾನೇನೋ ಮೊದಲ ಬಾರಿಗೆ ಶಾಸಕ. ನೀವು ಸಂಸದರಾಗಿ 9 ವರ್ಷಗಳಾಯ್ತಲ್ಲ. ನಿಮಗಿನ್ನೂ ಸರಿಯಾಗಿ ಮಾತು ಯಾರೂ ಕಲಿಸಿಲ್ಲವೇ?. ಪ್ರತಾಪ್ ಸಿಂಹ ಅವರೇ ನೀವು ಬಾಯಿಮುಚ್ಕೊಂಡು ಇರಬೇಕು ಅಷ್ಟೇ. ಮಾತನಾಡಲು ನಮಗೂ ಬರುತ್ತದೆ. ನೀವು ಗೆದ್ದಿದ್ದೇ ಮೋದಿ ವರ್ಚಸ್ಸಿನಿಂದಲೇ ಹೊರತು, ನೀವು ಏನ್ ಸಾಧನೆ ಮಾಡಿ ಗೆದ್ದಿದ್ದೀರಿ ಅಂತಾ ಮೊದಲು ಹೇಳಿ ಎಂದು ಪ್ರದೀಪ್ ಈಶ್ವರ್ ಸವಾಲ್ ಹಾಕಿದ್ದಾರೆ.
ಇದೇ ವೇಳೆ ಪ್ರದೀಪ್ ಈಶ್ವರ್, ಬಿಜೆಪಿ ಸಂಸದ ಮುನಿಸ್ವಾಮಿ ಒಂದು ತರ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ ಎಂದು ವ್ಯಂಗ್ಯವಾಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್, ಮುನಿಸ್ವಾಮಿ ಅಲ್ಲ ಅವರು ‘ಮನಿ’ ಸ್ವಾಮಿ. ನಾನು ಅವರನ್ನು ಮನಿಸ್ವಾಮಿ ಅನ್ಕೊಂಡೆ. ಚಿಂತಾಮಣಿ ಹಾಗೂ ಕೋಲಾರದ ಪ್ರಭಾವಿ ನಾಯಕರು ಮನಸ್ಸು ಮಾಡಲಿಲ್ಲ ಅಂದಿದ್ರೆ ಹೇಗೆ ಎಂಪಿ ಆಗ್ತಿದ್ರು. ಒಬ್ಬ ಎಂಪಿ ಹೇಗೆ ಇರಬೇಕು ಅನ್ನುವುದು ಗೊತ್ತಿಲ್ಲ ಅವರಿಗೆ ಎಂದಿದ್ದಾರೆ.