ಗೃಹ ಜ್ಯೋತಿ ಯೋಜನೆಗೆ ಉತ್ತಮ ರೆಸ್ಪಾನ್ಸ್‌ – ಐದು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸಲ್ಲಿಕೆ

ಗೃಹ ಜ್ಯೋತಿ ಯೋಜನೆಗೆ ಉತ್ತಮ ರೆಸ್ಪಾನ್ಸ್‌ – ಐದು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸಲ್ಲಿಕೆ

ಬೆಂಗಳೂರು: ಗೃಹಜ್ಯೋತಿ ಯೋಜನೆ ನೋಂದಣಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೋಂದಣಿ ಪ್ರಕ್ರಿಯೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಸರ್ವರ್ ಸಮಸ್ಯೆಯ ಮಧ್ಯೆಯೂ ಗುರುವಾರ ಐದು ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಖುಷಿ ಸುದ್ದಿ! – ಸಿಲಿಕಾನ್‌ ಸಿಟಿಯಲ್ಲಿ ಮತ್ತೆ 3 ಕಡೆಗಳಲ್ಲಿ ‘ನಮ್ಮ ಮೆಟ್ರೋ’ ಮಾರ್ಗ?

ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯು ಜೂನ್‌ 18 ರಂದು ಆರಂಭಗೊಂಡಿತ್ತು. ಮೊದಲ ದಿನ – 96,305, ಎರಡನೆಯ ದಿನ- 3,34,845 ಮೂರನೇ ದಿನ 4,64,225,ನಾಲ್ಕನೇ ದಿನ 3.56 ಲಕ್ಷ, ಐದನೇ ದಿನ 5,89,158  ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಈವರೆಗೆ ಒಟ್ಟು 20.10 ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ.

ಕಳೆದ ಐದು ದಿನಗಳಿಗಿಂತ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ  ನಿನ್ನೆ ಅತೀ ಹೆಚ್ಚು ನೋಂದಣಿಯಾಗಿದ್ದು, ಪ್ರತಿದಿನ 2.50-5 ಲಕ್ಷ ಅರ್ಜಿ ಸ್ವೀಕಾರದ ಟಾರ್ಗೆಟ್ ಅನ್ನು ಕಾಂಗ್ರೆಸ್ ಹೊಂದಿತ್ತು. ಅಲ್ಲದೇ ತಾಂತ್ರಿಕ ‌ಸಮಸ್ಯೆಯಿಂದ‌ ಪ್ರತಿದಿನ  2.50-5 ಲಕ್ಷ ಅರ್ಜಿ ಸ್ವೀಕಾರದ ಟಾರ್ಗೆಟ್ ಕನಸಾಗಿಯೇ ಉಳಿದಿತ್ತು. ಗುರುವಾರ  ಸರ್ವರ್ ಡೌನ್ ಮಧ್ಯೆಯು 5 ಲಕ್ಷ ಅರ್ಜಿ ನೋಂದಣಿ ಗಡಿಯನ್ನು ಕಾಂಗ್ರೆಸ್ ದಾಟಿತ್ತು. ಸದ್ಯ ರಾಜ್ಯದಲ್ಲಿ ಈವರೆಗೂ ಒಟ್ಟು 20,10,486 ಜನರಿಂದ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅರ್ಜಿ ಸಲ್ಲಿಕೆ ಆಗುವ ನಿರೀಕ್ಷೆಯಿದೆ.

ಗೃಹ ಜ್ಯೋತಿ ನೋಂದಣಿ ವೇಳೆ ಸರ್ವರ್‌ ಮೇಲೆ ಉಂಟಾಗುತ್ತಿದ್ದ ಒತ್ತಡ ತಡೆಯಲು ಗುರುವಾರದಿಂದ ಎರಡು ಲಿಂಕ್‌ ಒದಗಿಸಿದ್ದರೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರ್ವರ್‌ ಸಮಸ್ಯೆ ಮುಂದುವರೆದಿದೆ. ಪರಿಣಾಮ 5ನೇ ದಿನವೂ ಸಾರ್ವಜನಿಕರು ನೋಂದಣಿಗೆ ಪರದಾಡುವಂತಾಗಿದ್ದು, ಅಂತಿಮವಾಗಿ 5.25 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಗುರುವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿದ್ದ https://sevasindhugs.karnataka.gov.in ಲಿಂಕ್‌ ಜತೆಗೆ ಒಟ್ಟು 2 ಸಾವಿರ ನೋಂದಣಿ ಕೇಂದ್ರಗಳಲ್ಲಿ ಹೆಚ್ಚುವರಿ ಲಿಂಕ್‌ ಮೂಲಕ ನೋಂದಣಿಗೆ ಅವಕಾಶ ನೀಡಿರುವುದಾಗಿ ಇಂಧನ ಇಲಾಖೆ ತಿಳಿಸಿತ್ತು. ಇದರಿಂದ ಸರ್ವರ್‌ ಸಮಸ್ಯೆ ಬಗೆಹರಿದು ಸಲೀಸಾಗಿ ನೋಂದಣಿ ಆಗಲಿದೆ ಎಂಬ ವಿಶ್ವಾಸದಿಂದ ಬೆಂಗಳೂರಿನ ಹಲವು ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಹೊಸ ಲಿಂಕ್‌ನಲ್ಲೂ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮ ಹಲವು ಕಡೆ ಗಂಟೆಗಟ್ಟಲೇ ನೋಂದಣಿ ವಿಳಂಬವಾಗಿದ್ದು ಸಾರ್ವಜನಿಕರು ಎಂದಿನಂತೆ ಪರದಾಡಿದ್ದಾರೆ.

suddiyaana