ಹೋಟೆಲ್ ತಿಂಡಿ ಪ್ರಿಯರಿಗೆ ಬಿಗ್ ಶಾಕ್!- ಹೋಟೆಲ್ನಲ್ಲಿ ಕಾಫಿ-ಟೀ, ತಿಂಡಿ, ಊಟದ ದರ ಹೆಚ್ಚಳ?
ಬೆಂಗಳೂರು: ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಸರ್ಕಸ್ ನಡೆಸುತ್ತಿದೆ. ಆದ್ರೆ ಈ ಯೋಜನೆ ಜಾರಿಗೂ ಮುನ್ನ ಇಂಧನ ಇಲಾಖೆ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ದರ ಹೆಚ್ಚಳ ಮಾಡಿ ಶಾಕ್ ನೀಡಿದೆ. ಹೀಗಾಗಿ ಹೋಟೆಲ್ ಮಾಲೀಕರು ಸಹ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಹೋಟೆಲ್ಗಳಲ್ಲಿ ಕಾಫಿ, ಟೀ-ತಿಂಡಿ ಹಾಗೂ ಊಟದ ದರ ಹೆಚ್ಚಳವಾಗಿದೆ.
ಇದನ್ನೂ ಓದಿ: ಶಾಲಾ ಮಕ್ಕಳಿಗೆಗುಡ್ ನ್ಯೂಸ್ – ಬ್ಯಾಗ್ ಹೊರೆ ಇಳಿಸಿದ ಶಿಕ್ಷಣ ಇಲಾಖೆ
ವಿದ್ಯುತ್ ದರ ಏರಿಕೆಯಾದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೋಟೆಲ್ ಗಳಲ್ಲಿ ಕಳೆದ ಒಂದು ವಾರದಿಂದ ಊಟ, ತಿಂಡಿಗಳ ದರ ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಸೂಚನೆ ನೀಡಿದ್ದರು. ಅದರಂತೆ ಊಟ, ತಿಂಡಿಯ ಬೆಲೆ ಹೆಚ್ಚಳ ಮಾಡಲಾಗಿದೆ. ಊಟ ಹಾಗೂ ತಿಂಡಿ ದರ ಕನಿಷ್ಠ ಐದು ರೂ. ನಿಂದ ಹತ್ತು ರೂಪಾಯಿ ವರೆಗೆ ಏರಿಕೆಯಾಗಿದೆ. ಇನ್ನು ಕಾಫಿ ಮತ್ತು ಟೀ ದರಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ವರದಿಯಾಗಿದೆ.
ಹೋಟೆಲ್ ಮಾಲೀಕರು ಪ್ರತಿಯೊಂದು ಉಪಹಾರದ ಬೆಲೆ ಏರಿಕೆ ಮಾಡಿದ್ದಾರೆ. ಹಿಂದೆ ಮಸಾಲ ದೋಸೆಗೆ 45 ರಿಂದ 50 ರೂಪಾಯಿ ಇತ್ತು. ವಿದ್ಯುತ್ ದರ ಏರಿಕೆಯಿಂದಾಗಿ ಮಸಾಲದೋಸೆಗೆ 60 ರಿಂದ 70 ರುಪಾಯಿ ಆಗಿದೆ. ಇನ್ನು ಟೀ, ಕಾಫಿ, ಲೇಮನ್ ಟೀ ಮೊದಲು ಹತ್ತು ರುಪಾಯಿ ಇತ್ತು. ಈಗ 12 ರಿಂದ 15 ರುಪಾಯಿಗೆ ಏರಿಕೆಯಾಗಿದೆ.
ಇನ್ನು ಹಾಲಿನ ದರ ಸಹ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನೂತನ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಒಂದು ವೇಳೆ ಹಾಲಿ ದರ ಹೆಚ್ಚಳಕ್ಕೆ ಸಮ್ಮತಿಸಿದರೆ ಹಾಲಿನ ಉತ್ಪನ್ನಗಳ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.