ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಭೀಮಾನಾಯ್ಕ್‌ ಅವಿರೋಧವಾಗಿ ಆಯ್ಕೆ

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಭೀಮಾನಾಯ್ಕ್‌ ಅವಿರೋಧವಾಗಿ ಆಯ್ಕೆ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ನೂತನ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಆಪ್ತ, ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್‌ ಶಾಸಕ  ಭೀಮಾನಾಯ್ಕ್‌ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಅಪ್ಪನ ಜಾಗಕ್ಕೆ ಮಗಳು ವರ್ಗಾವಣೆ , ತಂದೆ ಕೈಯಿಂದಲೇ ಅಧಿಕಾರ ಸ್ವೀಕಾರ – ಮಂಡ್ಯದ ಪೊಲೀಸ್ ಠಾಣೆಯಲ್ಲಿ ಭಾವುಕ ಕ್ಷಣ..!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬಾಲಚಂದ್ರ ಜಾರಕಿಹೊಳಿ ಅವರ ಕೆಎಂಎಫ್ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಹೀಗಾಗಿ ಚುನಾವಣೆ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಬುಧವಾರ ನಡೆದ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ಭೀಮಾನಾಯ್ಕ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭೀಮಾನಾಯ್ಕ್‌ ಕೆಎಂಎಫ್‌ ಆಡಳಿತ ಮಂಡಳಿಯಲ್ಲಿ 15 ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳನ್ನು ಪ್ರತಿನಿಧಿಸುವ 15 ನಿರ್ದೇಶಕರಿದ್ದು, ಇವರೆಲ್ಲರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾನದ ಹಕ್ಕು ಹೊಂದಿರುತ್ತಾರೆ. ಅಲ್ಲದೇ ಕೆಎಂಎಫ್‌ನ ಒಬ್ಬ ನಾಮ ನಿರ್ದೇಶಿತ ನಿರ್ದೇಶಕರು ಸಹ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಜತೆಗೆ, ಸರಕಾರದ ಪಶು ಸಂಗೋಪನೆ, ಸಹಕಾರ ಇಲಾಖೆ, ಎನ್‌ಡಿಡಿಬಿಯಿಂದ ನಿಯೋಜಿಸುವ ಪ್ರತಿನಿಧಿಗಳು ಕೂಡ ಮತದಾನದ ಹಕ್ಕನ್ನು ಹೊಂದಿದ್ದರು. ಆದರೆ ಭೀಮಾ ನಾಯ್ಕ್​ಗೆ ಎದುರಾಳಿಯಾಗಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಇದರಿಂದ ಮತದಾನ ನಡೆಯದೇ ಭೀಮಾ ನಾಯ್ಕ್ ಅವರು​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

suddiyaana