ಬಿಸಿಗಾಳಿಯ ಹೊಡೆತಕ್ಕೆ ಬೆಂದು ಹೋಗುತ್ತಿದೆ ಜನ ಜೀವನ – ಉತ್ತರ ಪ್ರದೇಶದಲ್ಲಿ ಹೀಟ್‌ವೇವ್‌ಗೆ ಏರುತ್ತಿದೆ ಸಾವಿನ ಲೆಕ್ಕ

ಬಿಸಿಗಾಳಿಯ ಹೊಡೆತಕ್ಕೆ ಬೆಂದು ಹೋಗುತ್ತಿದೆ ಜನ ಜೀವನ – ಉತ್ತರ ಪ್ರದೇಶದಲ್ಲಿ ಹೀಟ್‌ವೇವ್‌ಗೆ ಏರುತ್ತಿದೆ ಸಾವಿನ ಲೆಕ್ಕ

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆ ಸುರಿಯುತ್ತಿದೆ. ಮುಂಗಾರು ಮಳೆ ಆಗಮನದಿಂದ ದಕ್ಷಿಣ ಭಾರತ ತಕ್ಕ ಮಟ್ಟಿಗೆ ತಂಪಾಗಿದೆ. ಅದ್ರೆ, ಉತ್ತರ ಭಾರತ ಇನ್ನೂ ಬಿರು ಬೇಸಿಗೆಯಿಂದ ತತ್ತರಿಸಿ ಹೋಗಿದೆ. ಹೀಟ್​ ವೇವ್ ಅಂದರೆ ಬಿಸಿಗಾಳಿಯ ಹೊಡೆತ ಜನರ ಜೀವಕ್ಕೆ ಮಾರಕವಾಗಿದೆ. ಉತ್ತರಪ್ರದೇಶ ಬಲ್ಲಿಯಾದಲ್ಲಿ ಒಂದೇ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಲ್ಲಿ 68 ಮಂದಿ ಹೀಟ್​ವೇವ್​​ನಿಂದ ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುತ್ತಲೇ ಇದ್ದಾರೆ.

ಇದನ್ನೂ ಓದಿ: ಮಾಂಸ ಕೊಳ್ಳಲು ಆಗ್ತಿಲ್ಲ.. ಗಗನಕ್ಕೇರಿತು ಚಿಕನ್, ಮೊಟ್ಟೆ ದರ – ನಾನ್ ವೆಜ್ ಪ್ರಿಯರಿಗೆ ಬಿಗ್ ಶಾಕ್

ಇನ್ನುಳಿದಂತೆ ಬಿಹಾರದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಹರಿಯಾಣ, ತಮಿಳುನಾಡು, ಮಧ್ಯಪ್ರದೇಶ ಮತ್ತು ಜಾರ್ಖಂಡ್​ನಲ್ಲಿ ಬಿಸಿಲಿನ ಪ್ರಮಾಣ ವಿಪರೀತ ಹೆಚ್ಚಾಗಿದೆ. ಕಳೆದ ಕೆಲ ದಿನಗಳಲ್ಲೇ ದೇಶಾದ್ಯಂತ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಿಸಿ ಗಾಳಿಗೆ ಬೆಂದು ಹೋಗುತ್ತಿರುವ ರಾಜ್ಯಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆಯನ್ನ ವಿಸ್ತರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ ತುರ್ತು ಸಭೆ ನಡೆಸಿದ್ದು, ಅಗತ್ಯ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ.

ಜನರ ಸಾವಿಗೆ ವಿಭಿನ್ನ ಕಾರಣಗಳಿದ್ದರೂ ತೀವ್ರ ತಾಪಮಾನ ಪ್ರಮುಖ ಅಂಶವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಧಿಕ ಬಿಸಿಲಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಬಿಸಿ ಗಾಳಿಯು ಉತ್ತರ ಪ್ರದೇಶವನ್ನು ಆವರಿಸಿದ್ದು, ಅನೇಕ ಪ್ರದೇಶಗಳಲ್ಲಿ 40 ಡಿಗ್ರಿ ಉಷ್ಣಾಂಶ ದಾಟಿದೆ.

ಜೂನ್ 15ರಂದು ಬಿಸಿಲಿತ ತಾಪಕ್ಕೆ 23 ಮಂದಿ ಮೃತಪಟ್ಟಿದ್ದರು.  ಜೂನ್ 16ಕ್ಕೆ ಮತ್ತೆ 20 ಮಂದಿ ಸಾವನ್ನಪ್ಪಿದ್ದರು. ಶನಿವಾರ ಮತ್ತೆ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ ಉಸ್ತುವಾರಿ ವೈದ್ಯಕೀಯ ವರಿಷ್ಠಾಧಿಕಾರಿ ಎಸ್‌ಕೆ ಯಾದವ್ ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು 60 ವರ್ಷ ಮೀರಿದವರಾಗಿದ್ದಾರೆ. ಮೃತರೆಲ್ಲರೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರೇ ಆಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

suddiyaana