ಟ್ರಕ್ ಡ್ರೈವರ್ಗಳು ಇನ್ನು ಕೂಲ್ ಕೂಲ್ -ಟ್ರಕ್ ಕ್ಯಾಬಿನ್ಗಳಲ್ಲಿ ಎಸಿ ಕಂಪಲ್ಸರಿ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕಾರುಗಳಲ್ಲಿ ಎಸಿ.. ಬಸ್ಗಳಲ್ಲೂ ಎಸಿ.. ಇನ್ನು ಮುಂದೆ ಟ್ರಕ್ ಡ್ರೈವರ್ಗಳು ಕೂಡಾ ಕೂಲ್ ಆಗಿಯೇ ಸಂಚಾರ ಮಾಡಬಹುದು. ಅದು ಕೂಡಾ 2025ರ ವೇಳೆಗೆ ಎಲ್ಲಾ ಟ್ರಕ್ ಕ್ಯಾಬಿನ್ಗಳಲ್ಲಿ ಏರ್ ಕಂಡೀಷನರ್ ಕಂಪಲ್ಸರಿಯಾಗಿ ಇರಬೇಕು.. ಇದನ್ನು ಸ್ವತಃ ಕೇಂದ್ರ ಸಚಿವ ನಿತಿನ್ ಗಡ್ಕರಿಯವರೇ ಹೇಳಿದ್ದಾರೆ. ಚಾಲಕ ಸಮುದಾಯದ ಶ್ರಮವನ್ನು ಶ್ಲಾಘಿಸಿರುವ ಸಚಿವರು, ಎಲ್ಲಾ ಟ್ರಕ್ಗಳಿಗೆ ಈಗ ಹವಾನಿಯಂತ್ರಿತ ಡ್ರೈವರ್ ಕ್ಯಾಬಿನ್ಗಳ ಅಗತ್ಯವಿದೆ. ಹೀಗಾಗಿ ಟ್ರಕ್ನ ಡ್ರೈವರ್ ಕಂಪಾರ್ಟ್ಮೆಂಟ್ನಲ್ಲಿ ಹವಾನಿಯಂತ್ರಣವನ್ನು ಕಡ್ಡಾಯಗೊಳಿಸುವ ಫೈಲ್ಗೆ ಸಹಿ ಮಾಡಿರೋದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬಸ್ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಮಹಿಳೆಯರ ಪ್ರಯಾಣ – ಹೀಗೆ ಆದರೆ ಹೊಸ ನಿಯಮ ಜಾರಿ ಎಂದು ಸಾರಿಗೆ ಸಚಿವರ ಎಚ್ಚರಿಕೆ..!
ಟ್ರಕ್ ಡ್ರೈವರ್ಗಳು ಸತತವಾಗಿ 11ರಿಂದ 12ಗಂಟೆಗಳು ಡ್ರೈವಿಂಗ್ ಮಾಡುತ್ತಾರೆ.. ತಾಪಮಾನ ಹೆಚ್ಚಳದಿಂದಾಗಿ ಯಥೇಚ್ಛವಾಗಿ ಬೆವರುತ್ತಾರೆ. ಹಾಗೇ ತುಂಬಾ ಹೊತ್ತು ಚಾಲನೆ ಮಾಡುವುದರಿಂದ ಆಯಾಸವಾಗಿ ಅಪಘಾತಗಳು ಹೆಚ್ಚಾಗುತ್ತವೆ. ಹೀಗಾಗಿ ಎಲ್ಲಾ ಟ್ರಕ್ಗಳಿಗೂ 2025ರಿಂದ ಎಸಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.
ಇತ್ತೀಚೆಗೆ ರಾಹುಲ್ ಗಾಂಧಿ ದೆಹಲಿಯಿಂದ ಚಂಡೀಗಢಕ್ಕೆ ನಡೆಸಿದ್ದ ಟ್ರಕ್ ಯಾತ್ರೆಯ ವೇಳೆ ಡ್ರೈವರ್ ಕ್ಯಾಬಿನ್ನಲ್ಲಿ ಎಸಿ ವ್ಯವಸ್ಥೆ ವಿಚಾರವನ್ನು ಚರ್ಚೆ ನಡೆಸಿದ್ದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು..